ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಇರುವುದು ಒಂದೇ, ಮುಖ್ಯಮಂತ್ರಿ ಆಗುವುದು ಬಿಜೆಪಿಯವರು

ಶಿವಮೊಗ್ಗ, ಜೂ. 27: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಇರುವುದು ಒಂದೇ, ಮುಖ್ಯಮಂತ್ರಿ ಆಗುವುದು ಬಿಜೆಪಿಯವರು ಮಾತ್ರ. ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ ಮಾಜಿ ಸಚಿವ ಕೆ.ಎಸ್​​. ತಿರುಗೇಟು ನೀಡಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಬೇರೆ ಪಕ್ಷದವರು ಅಧಿಕಾರದಲ್ಲಿ ಇರುವುದು ಇಷ್ಟವಿಲ್ಲ ಹಾಗೂ ಮುಂದಿನ ದಿನಗಳಲ್ಲಿ ನಾನು ಮುಖ್ಯಮಂತ್ರಿ ಆಗಲು ಪ್ರಯತ್ನ ಪಡುತ್ತೇನೆ ಎಂಬ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ ಇರೋದು ಒಂದೇ ಸಿಎಂ ಸ್ಥಾನ, ಒಬ್ಬರಿಗಿಂತ ಹೆಚ್ಚು ಮಂದಿಯನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಾವೇ ಅಧಿಕಾರ ಹಿಡಿಯುತ್ತೇವೆ ಎಂದು ಹೇಳಿದರು.

ನಾವಾಗಿಯೇ ಪಕ್ಷಕ್ಕೆ ಯಾರನ್ನು ಕರೆದುಕೊಳ್ಳುವುದಿಲ್ಲ: ಈಶ್ವರಪ್ಪ

ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ಹಿಂದೆ ಇರೋದು ಕೇಂದ್ರ ಗೃಹ ಸಚಿವ ಅಮಿತ್‌ ಶಾ. ಅದರಲ್ಲಿ ಯಾವುದಾದರೂ ಸಂಶಯ ಇದೆಯಾ ಎಂದು ಎಚ್‌ಡಿಕೆ ಹೇಳಿದ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಕೆ.ಎಸ್​​ಈಶ್ವರಪ್ಪ, ನಿಮ್ಮ ಮನೆ ಮಕ್ಕಳನ್ನು ಸರಿಯಾಗಿ ಇಟ್ಟುಕೊಂಡರೆ ಅವರು ಏಕೆ ಬೇರೆ ಮನೆಗೆ ಹೋಗ್ತಾರೆ. ನಿಮ್ಮ ಶಾಸಕರನ್ನು ಶಿಸ್ತುಬದ್ಧವಾಗಿ ಇಟ್ಟುಕೊಳ್ಳಿ. ಮಹಾರಾಷ್ಟ್ರದ ಶಾಸಕರು ಮೊದಲು ಸಿಎಂ ಭೇಟಿ ಆಗುವುದೇ ಕಷ್ಟ ಇತ್ತು. ಈಗ ಸರಿಪಡಿಸಿಕೊಳ್ಳುತ್ತೇವೆ ಅಂತಾ ಹೇಳಿದ್ದಾರೆ ಎಂದು ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕುರಿತು ಮಾತನಾಡಿದರು. ನಾವಾಗಿಯೇ ಪಕ್ಷಕ್ಕೆ ಯಾರನ್ನು ಕರೆದುಕೊಳ್ಳುವುದಿಲ್ಲ, ಅವರಾಗಿಯೇ ಬಂದ್ರೆ ಸೇರಿಸಿಕೊಳ್ಳದೇ ಬಿಡುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಎಂಬುದು ಇರಬೇಕು. ಆದರೆ ವಿಪಕ್ಷ ಸ್ಥಾನವು ಅವರಿಗೆ ದೊರೆಯುತ್ತಿಲ್ಲ.

ಈಗ ಕುಮಾರಸ್ವಾಮಿ ಅವರಿಗೂ ಆ ಚಾಳಿ ಬಂದಿದೆ: ಈಶ್ವರಪ್ಪ ವ್ಯಂಗ್ಯ

ಆರ್‌ಎಸ್ ಎಸ್ ಬಗ್ಗೆ ಮೊದಲು ಸಿದ್ದರಾಮಯ್ಯ ಬೈಯುತ್ತಿದ್ದರು, ಈಗ ಕುಮಾರಸ್ವಾಮಿ ಅವರಿಗೂ ಆ ಚಾಳಿ ಬಂದಿದೆ. ಸಿದ್ದರಾಮಯ್ಯ ಆರ್ ಎಸ್ ಎಸ್ ನವರು ಆರ್ಯರಾ ಅಥವಾ ದ್ರಾವಿಡರಾ? ಎಂದು ಕೇಳುವ ಮೂಲಕ ಆರ್ ಎಸ್ ಎಸ್ ಮೂಲವನ್ನು ಕೆದಕಿದ್ದಾರೆ. ಆರ್​ಎಸ್​ಎಸ್​ ಅನ್ನು ಬೈಯದಿದ್ದರೆ ಅವರಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೈರಲ್ ಆಯ್ತು ನಟಿ ಕಂಗನಾ ಅಂದು ಹೇಳಿದ್ದ ಭವಿಷ್ಯವಾಣಿ:

Mon Jun 27 , 2022
  ಮಹಾರಾಷ್ಟ್ರದ ರಾಜಕಾರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಾನೇ ಹೋಗ್ತಿದೆ. ಸಿಎಂ ಉದ್ಧವ್ ಠಾಕ್ರೆ, ಅಧಿಕೃತ ನಿವಾಸ ಈಗಾಗಲೇ ಖಾಲಿ ಮಾಡಿದ್ದೂ ಆಗಿದೆ. ಈಗ ತಮ್ಮ ಸ್ವಂತ ನಿವಾಸವಾಗಿರುವ ಮಾತೋಶ್ರಿಗೆ ಮರಳಿದ್ಧಾರೆ. ಇದರ ನಡುವೆಯೇ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಬಾಲಿವುಡ್ ನಟಿ ಕಂಗನಾ ರಣಾವತ್‌ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಅದು 2020ನೇ ವರ್ಷ, ಅದೊಂದು ದಿನ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಬುಲ್ಡೋಜರ್ ಒಂದು ಕಟ್ಟಡವನ್ನ […]

Advertisement

Wordpress Social Share Plugin powered by Ultimatelysocial