ಕೆ.ಎಸ್ ಈಶ್ವರಪ್ಪ ಮನೆಗೆ ಮುತ್ತಿಗೆ – ಈಶ್ವರಪ್ಪ ಯಾವ ಹೇಳಿಕೆ ಕಾಂಗ್ರೆಸ್ಸಿಗರ ವಾಗ್ದಾಳಿಗೆ ಅಸ್ತ್ರವಾಯ್ತು?

ಇಂದು ಕಾಂಗ್ರೆಸ್‌ನ  ನೂರಾರು ಕಾರ್ಯಕರ್ತರು ಕೆ.ಎಸ್‌ ಈಶ್ವರಪ್ಪ ಮನೆಗೆ ಮುತ್ತಿಗೆ ಹಾಕಿ ಗಲಾಟೆ ಮಾಡಲು ಪ್ರಯತ್ನಿಸಿದ್ದಾರೆ. ಕೂಡಲೇ ಪೊಲೀಸ್‌ ಪಡೆ ಆಗಮಿಸಿ ಅವರನ್ನ ಬಂಧಿಸಿದೆ.  ನಿನ್ನೆ ಸದನದಲ್ಲಿ ಕೆ.ಎಸ್‌ ಈಶ್ವರಪ್ಪ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಮಧ್ಯೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಇಬ್ಬರೂ ಏಕವಚನದಲ್ಲಿಯೇ ಒಬ್ಬರನ್ನೊಬ್ಬರು ಬೈದಾಡಿಕೊಂಡರು.  ಈಶ್ವರಪ್ಪ ಒಬ್ಬ  ರಾಷ್ಟ್ರದ್ರೋಹಿ, ಎಂದು ಡಿಕೆಶಿ ಹೇಳಿದರೆ, ನಾನಲ್ಲ ರಾಷ್ಟ್ರದ್ರೋಹಿ ನೀನು. ಜೈಲಿಗೆ ಹೋದವ ನೀನು ಬೇಲ್‌ ಮೇಲೆ ಬಂದವ ನೀನು ನಾನಲ್ಲ ನೀನು ದೇಶದ್ರೋಹಿ ಎಂದು ಈಶ್ವರಪ್ಪ ಡಿಕೆಶಿಗೆ ಟಾಂಗ್‌ ಕೊಟ್ಟರು.

ಈಶ್ವರಪ್ಪ  ಯಾವ ಹೇಳಿಕೆ ಕಾಂಗ್ರೆಸ್ಸಿಗರ ವಾಗ್ದಾಳಿಗೆ ಅಸ್ತ್ರವಾಯ್ತು?

ಶಿವಮೊಗ್ಗ ಕಾಲೇಜ್‌ ಆವರಣದಲ್ಲಿ ರಾಷ್ಟ್ರಧ್ವಜ ಹಾರಿಸಬೇಕಿದ್ದ ಧ್ವಜಸ್ತಂಭದ ಮೇಲೆ ಕೇಸರಿ ಧ್ವಜ ಹಾರಿಸಿದ ಹಿನ್ನಲೆ ಡಿಕೆಶಿ ಆಕ್ರೋಷ ವ್ಯಕ್ತಪಡಿಸಿದ್ದರು. ಇದಕ್ಕೆ ಕೆ.ಎಸ್‌ ಈಶ್ವರಪ್ಪ ಕೇಸರಿ ಧ್ವಜ ಹಾರಿಸಿದರೆ ತಪ್ಪೇನು? ಅನ್ನೋ ಪ್ರಶ್ನೆ ಮಾಡಿದ್ದರು. ಅಷ್ಟೇ ಅಲ್ಲ ಕೇಸರಿ ಬಣ್ಣಕ್ಕೂ ಭಾರತೀಯ ಜನರಿಗೂ ಭಾವನಾತ್ಮಕ ಸಂಬಂಧವಿದೆ. ಮುಂದೆ ನೂರು ಐದುನೂರು ವರ್ಷಗಳ ಬಳಿಕ ಕೆಂಪು ಕೋಟೆಯಲ್ಲೂ ಕೇಸರಿ ಧ್ಜಜ ಹಾರಾಡಬಹುದು ಅನ್ನೋ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆ ಇಟ್ಟುಕೊಂಡು ನಿನ್ನೆ ಸದನದಲ್ಲಿ ಕಾಂಗ್ರೆಸ್‌ ನಾಯಕರು ಆಡಳಿತ ಪಕ್ಷ ಬಿಜೆಪಿಗೆ ಪ್ರಶ್ನೆ ಮಾಡಿದರು ಆ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ದೊಡ್ಡ ಗಲಾಟೆ ಆಯ್ತು. ಆಮೇಲೆ ಕಲಾಪ ಮುಂದೂಡಿಕೆ ಮಾಡಲಾಯ್ತು.

ಈಶ್ವರಪ್ಪ ನಿವಾಸದ ಮುಂದೆ ಕಾರ್ಯಕರ್ತರು ಜಮಾವಣೆ

ರಾಷ್ಟ್ರಧ್ವಜದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಇಂದು ಈಶ್ವರಪ್ಪ ಮನೆ ಮುಂದೆ ಯೂತ್‌ ಕಾಂಗ್ರೆಸ್‌ ಅಧ್ಯಕ್‌ ಮೊಹಮ್ಮದ್‌ ನಲಪಾಡ್‌ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ಜಮಾವಣೆಗೊಂಡು ಮುತ್ತಿಗೆ ಹಾಕಲು ಪ್ರಯತ್ನಿಸದರು. ಈಶ್ವರಪ್ಪ ಅವರನ್ನ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸದರು. ತಕ್ಷಣಕ್ಕೆ ಪೊಲೀಸ್‌ ಆಗಮಿಸಿ ಕಾರ್ಯಕರ್ತರನ್ನ ತಡೆದು, ಅವರನ್ನ ಬಂಧಿಸಿ, ಈಶ್ವರಪ್ಪ ಮನೆಗೆ ಎರಡು ಕೆ ಎಸ್‌ ಆರ್‌ ಪಿ ತುಕಡಿ ನಿಯೋಜನೆ ಮಾಡಿ ಬಿಗಿ ಭದ್ರತೆ ಒದಗಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ತಾವು ಕೇಳಿರುವ ಮಾಹಿತಿ ಒದಗಿಸಲು ಮಮತಾಗೆ ರಾಜ್ಯಪಾಲರ ಒತ್ತಾಯವಿದೆ ;

Thu Feb 17 , 2022
  ಕೋಲ್ಕತ್ತ: ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತಾವು ಕೇಳಿರುವ ಮಾಹಿತಿಯನ್ನು ಶೀಘ್ರ ಒದಗಿಸುವಂತೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಒತ್ತಾಯಿಸಿದ್ದಾರೆ. ಟಿಎಂಸಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಧನಕರ್ ಅವರು ತಮ್ಮ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿಲ್ಲ ಎಂದು ಹೇಳಿದ್ದಾರೆ. ‘ಸಾಂವಿಧಾನಿಕ ಅಸ್ಥಿರತೆ’ ತಪ್ಪಿಸುವ ಸಲುವಾಗಿ ಹಲವು ವಿಷಯಗಳ ಬಗ್ಗೆ ಚರ್ಚಿಸಲು ವಾರದಲ್ಲಿ ರಾಜಭವನಕ್ಕೆ ಭೇಟಿ ನೀಡುವಂತೆ ಮಮತಾ ಬ್ಯಾನರ್ಜಿ ಅವರಿಗೆ ಫೆಬ್ರುವರಿ 15ರಂದು […]

Advertisement

Wordpress Social Share Plugin powered by Ultimatelysocial