ನಿತ್ಯ ಮೊಟ್ಟೆ ಸೇವಿಸಿದರೂ ಬರುವುದು ಹಾರ್ಟ್ ಅಟ್ಯಾಕ್ .!

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಂಭವಿಸುವ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಅತಿ ಕಿರಿಯ ವಯಸ್ಸಿನವರು ಕೂಡಾ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಇದ್ದಕ್ಕಿದ್ದಂತೆಯೇ ಕುಸಿದು ಬೀಳುವುದು, ಆಟವಾಡುತ್ತಿದ್ದಂತೆಯೇ ಉಸಿರು ನಿಲ್ಲುವುದು, ಡಾನ್ಸ್ ಮಾಡುತ್ತಿರುವಾಗ ಹೃದಯ ಸ್ತಬ್ಧವಾಗುವುದು ಇಂಥ ಘಟನೆಗಳನ್ನು ಪದೇ ಪದೇ ಕೇಳುತ್ತಿರುತ್ತೇವೆ. ಈ ಸಂದರ್ಭಗಳಲ್ಲಿ ಮನಸ್ಸಿನಲ್ಲಿ ನಾನಾ ಪ್ರಶ್ನೆಗಳು ಓಡಾಡುತ್ತವೆ. ಹೃದಯಾಘಾತಕ್ಕೆ ಕಾರಣ ಹಲವು ಇರಬಹುದು. ಅದರಲ್ಲಿ ನಾವು ಸೇವಿಸುವ ಆಹಾರ ಕೂಡಾ ಸೇರಿದೆ. ಯಾವ ರೀತಿಯ ಆಹಾರ ಹೃದಯಾಘಾತಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಕೂಡಾ ಬಹಳ ಮುಖ್ಯವಾಗುತ್ತದೆ. ಹೃದಯಾಘಾತವನ್ನು ತಪ್ಪಿಸಲು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎನ್ನುವುದನ್ನು ತಿಳಿದುಕೊಳ್ಳುವುದು ಕೂಡಾ ಬಹಳ ಮುಖ್ಯವಾಗುತ್ತದೆ. ಮೊಟ್ಟೆ ಸೇವನೆಗೂ ಹೃದಯಾಘಾತಕ್ಕೂ ಸಂಬಂಧವಿದೆ ಎಂದು ತಿಳಿದರೆ ಖಂಡಿತವಾಗಿಯೂ ಅಚ್ಚರಿಯಾಗಬಹುದು. ಕೋಳಿ ಮಾಂಸ, ಮೊಟ್ಟೆಯ ಪ್ರೋಟೀನ್ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಅದೇನೆಂದರೆ ಅವುಗಳಲ್ಲಿ ಕೊಲೆಸ್ಟ್ರಾಲ್ ಪ್ರಮಾಣವೂ ಅಧಿಕವಾಗಿರುತ್ತದೆ. ಅಂದಹಾಗೆ, ಮೊಟ್ಟೆಗಳಲ್ಲಿನ ಕೊಲೆಸ್ಟ್ರಾಲ್ ಮಟ್ಟವು ಇತರ ಆಹಾರ ಪದಾರ್ಥಗಳಿಗಿಂತ ಬಹಳ ಹೆಚ್ಚಿಲ್ಲ. ಆದರೂ ಕೂಡಾ ಮೊಟ್ಟೆಗೂ ಹೃದ್ರೋಗಕ್ಕೂ ಸಂಬಂಧವಿದೆ ಎಂಬುದು ಕೆಲವು ಅಧ್ಯಯನಗಳಲ್ಲಿ ಬಹಿರಂಗವಾಗಿದೆ. ಆಹಾರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮೊಟ್ಟೆಗಳನ್ನು ಸೇರಿಸುವುದರಿಂದ, ಪಾರ್ಶ್ವವಾಯು ಮತ್ತು ಕಣ್ಣಿನ ಗಂಭೀರವಾದ ಕಾಯಿಲೆಗಳಾದ ಮ್ಯಾಕ್ಯುಲರ್ ಡಿಜೆನರೇಶನ್ ಅನ್ನು ದೂರವಿಡುವುದು ಸಾಧ್ಯವಾಗುತ್ತದೆ ಎನ್ನುವುದನ್ನು ಕೂಡಾ ಈ ಅಧ್ಯಯನದಲ್ಲಿ ಬಹಿರಂಗ ಪಡಿಸಲಾಗಿದೆ. ಹೆಲ್ತ್‌ಲೈನ್‌ನ ವರದಿಯ ಪ್ರಕಾರ, ಒಂದು ದಿನಕ್ಕೆ ಒಂದು ಮೊಟ್ಟೆಯನ್ನು ತಿಂದರೆ ಕೊಲೆಸ್ಟ್ರಾಲ್ ಮಟ್ಟಹೆಚ್ಚಾಗುವುದಿಲ್ಲ. ಆದರೆ ಮೊಟ್ಟೆಗಳನ್ನು ಅತಿಯಾಗಿ ತಿನ್ನುವುದು ಹೃದಯದ ಆರೋಗ್ಯಕ್ಕೆ ಹಾನಿಕರವಾಗಿ ಸಾಬೀತಾಗುವುದು. ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಇದೆ ಎನ್ನುವುದು ತಜ್ಞರು ಅಭಿಪ್ರಾಯ. ಹೀಗಾಗಿ ಕೊಲೆಸ್ಟ್ರಾಲ್ ಇದ್ದವರು, ಹೃದ್ರೋಗ ಇರುವವರು ಮೊಟ್ಟೆ ಸೇವನೆಯ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಮುನ್ನೆಚ್ಚರಿಕೆಯಾಗಿ ಮೊಟ್ಟೆಯಿಂದ ದೂರ ಇರುವುದೇ ಸೂಕ್ತ. ಇನ್ನು ಮೊಟ್ಟೆ ತಿನ್ನಲೇ ಬೇಕು ಎಂದಿದ್ದರೆ ಅದರ ಮೊಟ್ಟೆಯ ಬಿಳಿಭಾಗವನ್ನು ಮಾತ್ರ ತಿನ್ನುವುದು ಉತ್ತಮ ಎಂದು ಹೇಳಲಾಗುತ್ತದೆ. ಮೊಟ್ಟೆಯ ಬಿಳಿಯಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಠೇವಣಿ ಇಡುವ ಮೊದಲು ಮುಹೂರ್ತದ ಬಗ್ಗೆ ಇರಲಿ ಗಮನ

Thu Jan 12 , 2023
ಬ್ಯಾಂಕ್ ನಲ್ಲಿ ಸ್ಥಿರ ಠೇವಣಿಯಿಡಲು ಅಥವಾ ಬ್ಯಾಂಕ್ ಖಾತೆ ತೆರೆಯಲು ಮುಹೂರ್ತ, ದಿನ ನೋಡುವುದು ಬಹಳ ಒಳ್ಳೆಯದು. ಕೆಲವೊಂದು ವಾರ, ತಿಥಿ, ಮಾಸದಲ್ಲಿ ಜೀವ ವಿಮೆ ಸೇರಿದಂತೆ ಬ್ಯಾಂಕ್ ಖಾತೆಯಲ್ಲಿ ಹಣ ಇಡುವುದು ಕೂಡ ಒಳ್ಳೆಯದಲ್ಲ. ಆರ್ಥಿಕ ಸಂಕಷ್ಟ ಎದುರಾಗಬಾರದೆಂದಾದಲ್ಲಿ ಸಮಯ, ದಿವಸ ನೋಡಿ ಹಣ ಜಮಾ ಮಾಡುವುದು ಒಳ್ಳೆಯದು.ಕೃಷ್ಣಪಕ್ಷದ ತೃತೀಯ, ಷಷ್ಠಿ, ಸಪ್ತಮಿ, ಅಷ್ಠಮಿ, ದಶಮಿ, ಏಕಾದಶಿ, ದ್ವಾದಶಿ ಹಾಗೆ ಶುಕ್ಲ ಪಕ್ಷದ ತೃತೀಯ, ಷಷ್ಠಿ, ಸಪ್ತಮಿ, ಅಷ್ಠಮಿ, […]

Advertisement

Wordpress Social Share Plugin powered by Ultimatelysocial