ಮೆಟ್ರೊ ಪಿಲ್ಲರ್ ಕುಸಿತಕ್ಕೆ ಕಾರಣ ತಿಳಿಸಿದ ತಜ್ಞರು.

 

ಬೆಂಗಳೂರು, ಜನವರಿ, 22: ಇತ್ತೀಚೆಗೆ ಬೆಂಗಳೂರಿನ ಹೆಣ್ಣೂರು ಕ್ರಾಸ್‌ ಬಳಿ ಎಚ್‌ಬಿಆರ್‌ ಲೇಔಟ್‌ನಲ್ಲಿ ಮೆಟ್ರೋ ಯೋಜನೆಯ ಪಿಲ್ಲರ್‌ ಕುಸಿದು ಅಮಾಯಕ ತಾಯಿ-ಮಗ ಜೀವ ಕಳೆದುಕೊಂಡ ದಾರುಣ ಘಟನೆ ಬಗ್ಗೆ ಐಐಎಸ್‌ಸಿ ವರದಿ ನೀಡಿದೆ.

ನಿರ್ಮಾಣ ಹಂತದ ಪಿಲ್ಲರ್ ಕುಸಿದು ತಾಯಿ ಮತ್ತು ಮಗ ಸಾವನ್ನಪ್ಪಿದ 11 ದಿನಗಳ ನಂತರ ಬೆಂಗಳೂರಿನ ಐಐಎಸ್‌ಸಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗವು 27 ಪುಟಗಳ ವರದಿಯನ್ನು ಸಲ್ಲಿಸಿದೆ.

ಇದರಲ್ಲಿ ಪಿಲ್ಲರ್‌ಗಳ ನಡುವಿನ ಅಂತರವೇ ಅಪಘಾತಕ್ಕೆ ಕಾರಣವಾದ ಅಂಶ ಎಂದು ತಿಳಿಸಿದೆ.

Bengaluru Metro Pillar Mishap: IISc ತಂಡದಿಂದ ಪ್ರಕರಣದ ತಾಂತ್ರಿಕ ತನಿಖೆ, ವಿಜ್ಞಾನಿ ತಿಳಿಸಿದ ಕಾರಣ ಏನು?

ಭಾರತೀಯ ವಿಜ್ಞಾನ ಸಂಸ್ಥೆಯ (IISC) ವಿಜ್ಞಾನಿ ಡಾ.ಚಂದ್ರ ಕಿಶನ್‌ ಈ ಅವಘಡಕ್ಕೆ ಯಾವುದೇ ಗುತ್ತಿಗೆದಾರ ಅಥವಾ ಎಂಜಿನಿಯರ್ ಅನ್ನು ದೂಷಿಸಿಲ್ಲ. ಆದರೆ, ಇಂತಹ ಎತ್ತರದ ರಚನೆಗಳ ನಿರ್ಮಾಣದ ಯೋಜನೆಗಳನ್ನು ಕೈಗೊಳ್ಳುವಾಗ ಬಿಎಂಆರ್‌ಸಿಎಲ್ ಕೆಲವು ಬದಲಾವಣೆಗಳನ್ನು ಜಾರಿಗೆ ತರಬೇಕು ಎಂದು ಸೂಚಿಸಿದ್ದಾರೆ.

ಇಂತಹ ರಚನೆಯು 12 ಮೀಟರ್‌ಗಿಂತ ಎತ್ತರವಾಗಿರುವುದರಿಂದ, ಅದನ್ನು 18 ಮೀ ಮಾಡಲು ಎರಡು ರಾಡ್‌ಗಳನ್ನು ಸೇರಿಸಬೇಕು ಎಂದು ವಿಜ್ಞಾನಿ ಡಾ.ಚಂದ್ರ ಕಿಶನ್ ಸೂಚಿಸಿದ್ದಾರೆ.

ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ಗಳ ನಡುವೆ ಅಂತರವಿತ್ತು. ಹೀಗಾಗಿ ಸಪೋರ್ಟಿಂಗ್ ಕೇಬಲ್‌ಗಳು ಬೀಳುವುದಕ್ಕೆ ದಾರಿ ಮಾಡಿಕೊಡುತ್ತದೆ. ಸಮೀಪದಲ್ಲಿ ಮೇಲ್ಸೇತುವೆ ಇರುವುದರಿಂದ ಮೆಟ್ರೋ ಪಿಲ್ಲರ್ ಅದಕ್ಕಿಂತ ಎತ್ತರವಾಗಿರಬೇಕು ಎಂದು ವಿಜ್ಞಾನಿ ಡಾ.ಚಂದ್ರ ಕಿಶನ್ ಹೇಳಿದ್ದಾರೆ.

ಜೊತೆಗೆ ಹೆಬ್ಬಾಳ ಮೇಲ್ಸೇತುವೆ ಬಳಿಯೂ ಇದೇ ಮಾದರಿಯಲ್ಲಿ ಯೋಜನೆ ರೂಪಿಸಲಾಗಿದೆ ಎಂದು ತಿಳಿದು ಬಂದಿದ್ದು, ಯಾವುದೇ ಅಹಿತಕರ ಘಟನೆ ಮರುಕಳಿಸದಂತೆ ಸಂಪೂರ್ಣ ಕ್ರಮಕೈಗೊಳ್ಳಬೇಕಿದೆ ಎಂದು ಸೂಚನೆ ನೀಡಿದ್ದಾರೆ.

“ಮೊದಲೇ ಸರಿಯಾದ ವಿಧಾನವನ್ನು ರೂಪಿಸಿದ್ದರೆ ಮತ್ತು ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದರೆ ಇಂತಹ ಅವಘಡವನ್ನು ತಪ್ಪಿಸಬಹುದಿತ್ತು. ಬಲವಾದ ಗಾಳಿ ಮತ್ತು ಭರ್ಜರಿ ಮಳೆಯನ್ನು ಎದುರಿಸುವ ಯೋಜನೆಗಳಿಗೆ ಮತ್ತು ಎತ್ತರದ ರಚನೆಗಳಿಗೆ ಸರಿಯಾದ ವಿಧಾನವನ್ನು ಅನುಸರಿಸುವುದು ಮುಖ್ಯವಾಗಿದೆ” ಎಂದು ಹೇಳಿದ್ದಾರೆ.

ಇನ್ನು, ವರದಿಯಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿರುವ ಯಾವುದೇ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಬಳಸಿದ ವಸ್ತುಗಳ ಗುಣಮಟ್ಟ ಮತ್ತು ಪರೀಕ್ಷಾ ಪ್ರಮಾಣಪತ್ರಗಳನ್ನು ಮೌಲ್ಯಮಾಪನ ಮಾಡಲಾಗಿದೆ. ಈ ವರದಿಯಲ್ಲಿ ಪರೀಕ್ಷಾ ವರದಿಯನ್ನು ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇಂತಹ ಯೋಜನೆಗಳಿಗೆ ಕನಿಷ್ಠ 5 ರಿಂದ 10 ವರ್ಷಗಳ ಅನುಭವ ಹೊಂದಿರುವ ಕಾರ್ಮಿಕರನ್ನು ನಿಯೋಜಿಸಬೇಕು. ನೇಮಕಗೊಂಡ ಜೆಇಗಳು ಸರ್ಕಾರಿ ಏಜೆನ್ಸಿಗಳು ಮತ್ತು ಇಲಾಖೆಗಳ ಆಡಳಿತದ ಸುರಕ್ಷತಾ ಪರೀಕ್ಷೆಗಳನ್ನು ಬರೆಯಬೇಕು. ಎಂಜಿನಿಯರ್‌ಗಳಿಗೆ ಅಲ್ಪಾವಧಿ ಕೋರ್ಸ್‌ಗಳನ್ನು ನಡೆಸಬೇಕು. ಕೆಲಸಗಾರರಿಗೆ ಸುರಕ್ಷತಾ ಕ್ರಮಗಳ ಕುರಿತು ಸ್ಥಳೀಯ ಭಾಷೆಯಲ್ಲಿ ತರಗತಿಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskanna

Please follow and like us:

Leave a Reply

Your email address will not be published. Required fields are marked *

Next Post

ಪಿಟೀಲು ಚೌಡಯ್ಯ ಕರ್ಣಾಟಕ ಸಂಗೀತದ ಮಹಾನ್ ವಿದ್ವಾಂಸ.

Sun Jan 22 , 2023
  ಬೆಂಗಳೂರಿನ ಮಲ್ಲೇಶ್ವರದಲ್ಲಿ ಇತ್ತಕಡೆ ಸ್ಯಾಂಕಿ ರಸ್ತೆಗೂ ಕಾಣುವಂತೆ ಪಿಟೀಲಿನ ಆಕಾರದ ಚೌಡಯ್ಯ ಮೆಮೋರಿಯಲ್ ಹಾಲ್ ಇದೆ. ಅದು ಕರ್ಣಾಟಕ ಸಂಗೀತದ ಮಹಾನ್ ವಿದ್ವಾಂಸ, ಪ್ರಖ್ಯಾತ ವಯಲಿನ್ ವಾದಕ ತಿರುಮಕೂಡಲು ಚೌಡಯ್ಯನವರ ಸ್ಮಾರಕವಾಗಿದೆ. ಪಿಟೀಲು ಚೌಡಯ್ಯ ಎಂದೇ ಅವರು ಪ್ರಖ್ಯಾತರು. ಮೈಸೂರಿನ ಚಾಮರಾಜಪುರಂನಲ್ಲಿ ಈಗಲೂ ಪಿಟೀಲು ಚೌಡಯ್ಯನವರಿದ್ದ ಮನೆ ಇದೆ. ಜನವರಿ 19 ಚೌಡಯ್ಯನವರ ಪುಣ್ಯ ಸ್ಮರಣೆಯ ದಿನವಾಗಿದೆ. 1894ರ ವರ್ಷದಲ್ಲಿ ಜನಿಸಿದ ಚೌಡಯ್ಯನವರು 1967ರ ಜನವರಿ 19ರಂದು ಈ […]

Advertisement

Wordpress Social Share Plugin powered by Ultimatelysocial