ಸಾಯಿ ಪಲ್ಲವಿ ಒಟ್ಟೂ ಆಸ್ತಿ ಮೌಲ್ಯ ಎಷ್ಟು ಗೊತ್ತಾ..?

ಪ್ರೇಮಂ ಚಿತ್ರದ ನಟಿ ಸಾಯಿ ಪಲ್ಲವಿ ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ಲಕ್ ಅನ್ನು ಕಿಸೆಯಲ್ಲಿಟ್ಟುಕೊಂಡು ಓಡಾಡುತ್ತಿದ್ದಾರೆ. ಸಿನಿಮಾಗಳ ಕಡಿಮೆಯೇ ಆದರೂ ಸಂಪಾದಿಸಿರುವ ಆಸ್ತಿ ತುಂಬಾ ಇವೆ. ಹೌದು ನಟಿ ಸಾಯಿ ಪಲ್ಲವಿ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ.

ಮಾಡಿದ್ದು ಕೆಲವೇ ಸಿನಿಮಾಗಳಾದರೂ ಅವರಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ, ಅವರ ಸಂಭಾವನೆ ಕೂಡ ಹೆಚ್ಚಿದೆ. ಹಾಗಾದರೆ, ನಟಿ ಸಾಯಿ ಪಲ್ಲವಿ ಅವರ ಒಟ್ಟೂ ಆಸ್ತಿ ಮೌಲ್ಯ ಎಷ್ಟು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. ಪ್ರೇಮಂ​ ಸಿನಿಮಾ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟವರು ನಟಿ ಸಾಯಿ ಪಲ್ಲವಿ. 2015ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಮಲರ್​ ಹೆಸರಿನ ಪಾತ್ರವನ್ನು ಅವರು ನಿರ್ವಹಿಸಿದ್ದರು.

ಶಿಕ್ಷಕಿಯಾಗಿ ಕಾಣಿಸಿಕೊಂಡಿದ್ದ ಸಾಯಿ ಪಲ್ಲವಿ ಎಲ್ಲರ ಗಮನ ಸೆಳೆದಿದ್ದರು. ನಂತರ ಅವರಿಗೆ ಸಾಲು ಸಾಲು ಪ್ರಾಜೆಕ್ಟ್​ಗಳು ಬರೋಕೆ ಆರಂಭವಾದವು. ಫಿದಾ ಸಿನಿಮಾ ಮೂಲಕ ಸಾಯಿ ಪಲ್ಲವಿ ಟಾಲಿವುಡ್​ಗೆ ಕಾಲಿಟ್ಟರು. ಮುಟ್ಟಿದ್ದೆಲ್ಲವೂ ಚಿನ್ನ ಎಂಬಂತೆ, ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಯಿತು. ಈ ಸಿನಿಮಾದಲ್ಲಿ ವರುಣ್​ ತೇಜ್​ಗೆ ಜತೆಯಾಗಿ ನಟಿಸಿದ್ದ ಸಾಯಿ ಪಲ್ಲವಿ ಟಾಲಿವುಡ್​ನಲ್ಲೂ ನೆಲೆ ಕಂಡುಕೊಂಡರು. 13 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾಗಿದ್ದ ಈ ಸಿನಿಮಾ 90 ಕೋಟಿ ರೂಪಾಯಿ ಗಳಿಸಿತ್ತು.

‘ಮಾರಿ 2’ ಮೊದಲಾದ ಸಿನಿಮಾಗಳಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಸದ್ಯ, ಅವರ ಕೈಯಲ್ಲಿ ಚಿತ್ರಗಳಿವೆ. ಲವ್​ ಸ್ಟೋರಿ, ವಿರಾಟ ಪರ್ವ ಮ್​, ​ ಹೆಸರಿನ ತೆಲಗು ಚಿತ್ರಗಳಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಲವ್​ ಸ್ಟೋರಿ, ವಿರಾಟ ಪರ್ವಮ್ ಸಿನಿಮಾ ಶೂಟಿಂಗ್​ ಪೂರ್ಣಗೊಂಡಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಆರಂಭಗೊಂಡಿದೆ. ಸಾಯಿ ಪಲ್ಲವಿ ಡಾಕ್ಟರ್​ ಆಗಬೇಕು ಎಂದು ಕನಸು ಕಂಡವರು. ಇವರು ಎಂಬಿಬಿಎಸ್​ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ನಂತರ ಅವರು ನಟನೆಯತ್ತ ಹೊರಳಿದರು. ಈ ಮೂಲಕ ಅವರು ಯಶಸ್ಸು ಕಂಡರು. ಮೂಲಗಳ ಪ್ರಕಾರ ಸಾಯಿ ಪಲ್ಲವಿ ಅವರ ಒಟ್ಟೂ ಆಸ್ತಿ ಮೌಲ್ಯ 29 ಕೋಟಿ ರೂಪಾಯಿ ಎನ್ನಲಾಗಿದೆ. ಸಿನಿಮಾಗಳು ಹಿಟ್ ಆಗುತ್ತಿರುವುದರಿಂದ ಇವರ ಸಂಭಾವನೆ ಕೂಡ ಹೆಚ್ಚಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

UNION BUDGET 2022:ಭಾರತದ ಅಧಿಕೃತ ಡಿಜಿಟಲ್‌ ಕರೆನ್ಸಿ ಘೋಷಣೆ;

Tue Feb 1 , 2022
2022-23ನೇ ಸಾಲಿನ ಕೇಂದ್ರ ಬಜೆಟ್‌ ಇಂದು ಮಂಡನೆಯಾಗಿದೆ. ಬಜೆಟ್‌ ಮಂಡನೆ ಮಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭಾರತದಲ್ಲಿ ಡಿಜಿಟಲ್‌ ಕರೆನ್ಸಿಯನ್ನು ಪರಿಚಯಿಸುವುದಾಗಿ ಘೋಷಿಸಿದ್ದಾರೆ. ಭಾರತ ಸರ್ಕಾರವು ಭಾರತದ ಸ್ವಂತ ಕ್ರಿಪ್ಟೋಕರೆನ್ಸಿಯನ್ನು ಪ್ರಾರಂಭಿಸುವುದಾಗಿ ಅಧಿಕೃತವಾಗಿ ದೃಢಪಡಿಸಿದೆ. ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊರತರಲಿದ್ದು, “ಡಿಜಿಟಲ್ ರೂಪಾಯಿ” ಎಂದು ಹೆಸರಿಸುವ ಸಾಧ್ಯತೆಯಿದೆ. ಘೋಷಣೆಹೌದು, ಭಾರತ ಸರ್ಕಾರ ಭಾರತದ ಸ್ವಂತ ಡಿಜಿಟಲ್‌ ಕರೆನ್ಸಿಯನ್ನು ಪರಿಚಯಿಸುವುದಾಗಿ ಘೋಷಣೆ ಮಾಡಿದೆ. 2022-23ನೇ ಸಾಲಿನ […]

Advertisement

Wordpress Social Share Plugin powered by Ultimatelysocial