ಫೇಸ್​ಬುಕ್ ನ ಹೆಸರು ಬದಲು ಸಾಧ್ಯತೆ….?

ನವದೆಹಲಿ: ಸಾಮಾಜಿಕ ಜಾಲತಾಣದ ದಿಗ್ಗಜ ಕಂಪನಿ ಫೇಸ್​ಬುಕ್ ತನ್ನ ಹೆಸರನ್ನು ಬದಲಾವಣೆ ಮಾಡಲು ಬಯಸಿದ್ದು, ಮುಂದಿನ ವಾರ ಅದಕ್ಕೆ ಮರುನಾಮಕರಣ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.  ಫೇಸ್​ಬುಕ್​ನ ಸಿಇಒ ಮಾರ್ಕ್ ಜುಕರ್​ಬರ್ಗ್ ಕಂಪನಿಯ ಹೆಸರು ಬದಲಾವಣೆ ಮಾಡುವ ಕುರಿತು ಅಕ್ಟೋಬರ್ 28ರಂದು ನಡೆಯಲಿರುವ ವಾರ್ಷಿಕ ಸಭೆಯಲ್ಲಿ ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ. ಆದರೆ, ಹೊಸ ಹೆಸರು ಯಾವುದು ಎಂಬ ಸುಳಿವು ನೀಡಿಲ್ಲ. ಫೇಸ್​ಬುಕ್​ನ ವ್ಯವಹಾರ ಕುರಿತು ಅಮೆರಿಕದ ಆಡಳಿತ ಪರಿಶೀಲನೆ, ತಪಾಸಣೆಯನ್ನು ಹೆಚ್ಚಿಸಿರುವುದು ಕಂಪನಿಗೆ ತಲೆನೋವಾಗಿದೆ. ಹೀಗಾಗಿ ಹೆಸರು ಬದಲಾವಣೆ ಮಾಡಬೇಕು ಎಂಬ ಆಲೋಚನೆಯನ್ನು ಫೇಸ್​ಬುಕ್ ಮಾಡಿದೆ ಎನ್ನಲಾಗಿದೆ. ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರಕ್ರಿಯಿಸಿರುವ ಫೇಸ್​ಬುಕ್, ಊಹಾಪೋಹ ಮತ್ತು ವದಂತಿಗಳಿಗೆ ಉತ್ತರಿಸುವ ಪರಿಪಾಠ ನಮ್ಮಲ್ಲಿ ಇಲ್ಲ ಎಂದಿದೆ.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಾಖಲೆ ಬರೆದ ನರೇಂದ್ರ ಮೋದಿ ಸರ್ಕಾರ ; 100 ಕೋಟಿಗೆ ಲಸಿಕೆ ನೀಡಿ ವಿಶ್ವದಲ್ಲೇ ಹೊಸ ಇತಿಹಾಸ ಬರೆದ ಭಾರತ..!

Thu Oct 21 , 2021
ನವದೆಹಲಿ,ಅ.21- ನೂರು ಕೋಟಿ ಮಂದಿಗೆ ಕೊರೊನಾ ಲಸಿಕೆ ಹಾಕುವ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. 130 ಕೋಟಿ ಭಾರತೀಯರ ಪೈಕಿ ನೂರು ಕೋಟಿ ಮಂದಿಗೆ ಲಸಿಕೆ ಹಾಕಲು ನಾವು ಯಶಸ್ವಿಯಾಗಿರುವುದು ಭಾರತೀಯ ವಿಜ್ಞಾನಿಗಳ ವಿಜಯ ಎಂದು ಮೋದಿ ಟ್ವಿಟರ್‍ನಲ್ಲಿ ಶ್ಲಾಘಿಸಿದ್ದಾರೆ. ನಾವು 100 ಕೋಟಿ ಲಸಿಕೆ ಸಾಧನೆ ಮಾಡಲು ಸಹಕರಿಸಿರುವ ವಿಜ್ಞಾನಿಗಳು, ವೈದ್ಯರು, ನರ್ಸ್‍ಗಳು ಹಾಗೂ ಈ ನಿಟ್ಟಿನಲ್ಲಿ ಪರಿಶ್ರಮ ಹಾಕಿರುವ […]

Advertisement

Wordpress Social Share Plugin powered by Ultimatelysocial