ಖ್ಯಾತ ಗಾಯಕಿ ‘ವಾಣಿ ಜಯರಾಮ್’ ಇನ್ನಿಲ್ಲ.

ಚೆನ್ನೈ: ಐದು ದಶಕಗಳ ವೃತ್ತಿಜೀವನವನ್ನ ಹೊಂದಿದ್ದ ಜನಪ್ರಿಯ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಶನಿವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ವಾಣಿ ಜಯರಾಮ್ ಕನ್ನಡ ಸೇರಿ ತಮಿಳು, ಹಿಂದಿ, ತೆಲುಗು, ಮಲಯಾಳಂ, ಮರಾಠಿ, ಒಡಿಯಾ, ಬಂಗಾಳಿ ಮತ್ತು ತುಳು ಸೇರಿದಂತೆ 19 ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ.

ವಾಣಿ ಜಯರಾಮ್ ಅವರು ಭಕ್ತಿಗೀತೆಗಳು ಮತ್ತು ಖಾಸಗಿ ಆಲ್ಬಂಗಳು ಸೇರಿದಂತೆ 10,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರು ಪ್ರಪಂಚದಾದ್ಯಂತ ಹಲವಾರು ಏಕವ್ಯಕ್ತಿ ಸಂಗೀತ ಕಚೇರಿಗಳನ್ನ ಸಹ ನೀಡಿದ್ದಾರೆ.

ವಾಣಿ ಜಯರಾಮ್ ಮೂರು ಬಾರಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಗುಜರಾತ್ ಸೇರಿದಂತೆ ರಾಜ್ಯಗಳಿಂದ ತಮ್ಮ ಗಾಯನಕ್ಕಾಗಿ ರಾಜ್ಯ ಸರ್ಕಾರದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಭಾರತ ಸರ್ಕಾರ ಇವರ ಅನನ್ಯ ಸಾಧನೆಯನ್ನ ಗುರುತಿಸಿ ದೇಶದ ಮೂರನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ನೀಡಿತ್ತು. ಆದ್ರೆ, ಆ ಪ್ರಶಸ್ತಿ ಸ್ವೀಕರಿಸುವ ಮುನ್ನವೇ ವಾಣಿ ಜಯರಾಂ ಕಣ್ಣು ಮುಚ್ಚಿದ್ದು, ತೀವ್ರ ದುಃಖಕ್ಕೆ ಕಾರಣವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚೈನೀಸ್ ಇಂಟರ್ನೆಟ್ ಆಫ್ ಥಿಂಗ್ಸ್ ಮೂಲಕ ಬೇಹುಗಾರಿಕೆ;

Sat Feb 4 , 2023
ಮೂಲಸೌಕರ್ಯ ಮತ್ತು ಪ್ರಮುಖ ಕೈಗಾರಿಕೆಗಳಲ್ಲಿರುವ ಚೈನೀಸ್ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಮಾಡ್ಯೂಲ್‌ಗಳು ಬೇಹುಗಾರಿಕೆ ಮಾಡುತ್ತಿರುವ ಆತಂಕ ಎದುರಾಗಿದೆ. ಚೀನಾದ ಈ ಮಾಡ್ಯೂಲ್‌ಗಳು ಸ್ಮಾರ್ಟ್ ಸಿಟಿಗಳಲ್ಲಿ ಕಣ್ಗಾವಲು ಇಟ್ಟಿರಬಹುದು, ವ್ಯವಸ್ಥೆಗಳನ್ನು ಹಾಳುಮಾಡಲು ಇವು ಅನುವು ಮಾಡಿಕೊಡುತ್ತವೆ. ಈ ಕಾರಣದಿಂದ ಇಡೀ ಜಗತ್ತಿಗೇ ಇದು ದೊಡ್ಡ ಬೆದರಿಕೆ ಎಂಬ ವರದಿ ಇದೀಗ ಬಹಿರಂಗವಾಗಿದೆ. ಇಂಟರ್ನೆಟ್ ಆಫ್ ಥಿಂಗ್ಸ್ (IoT) ಭೌತಿಕ ವಸ್ತುಗಳ ಜಾಲವನ್ನು ವಿವರಿಸುತ್ತದೆ. ವಸ್ತುಗಳು, ಸಾಫ್ಟ್‌ವೇರ್, ಸಂವೇದಕಗಳು ಮತ್ತು ಇಂಟರ್ನೆಟ್‌ನಲ್ಲಿ […]

Advertisement

Wordpress Social Share Plugin powered by Ultimatelysocial