ರೈತರ ಜಮೀನಿನಲ್ಲಿ ಅಕ್ರಮ ರಸ್ತೆ : ಪ್ರಶ್ನಿಸಿದ್ದಕ್ಕೆ ಹಲ್ಲೆ

ಗುಡಿಬಂಡೆ : ರೈತರ ಮೇಲೆ ಭೂ ಮಾಫಿಯಾಗಳಿಂದ ದೌರ್ಜನ್ಯ ಮಾಡಿ ಜಮೀನಿನಲ್ಲಿ ಅಕ್ರಮ ರಸ್ತೆ ನಿರ್ಮಾಣ ಮಾಡಿದ್ದನ್ನು ಪ್ರಶ್ನೆ ಮಾಡಿದಕ್ಕೆ ಜಮೀನು ಮಾಲೀಕರ ಮೇಲೆ ಹಲ್ಲೆ ಮಾಡಿರುವ ಘಟನೆ ಗುಡಿಬಂಡೆ ತಾಲೂಕಿನಲ್ಲಿ ನಡೆದಿದೆ.ಬೆಂಗಳೂರು ಗ್ರಾಮಾಂತರ ಭಾಗದ ವೆಂಕಟಗಿರಿ ಕೋಟೆಯ ಭೂ ಮಾಫಿಯಾಗಳು ಗುಡಿಬಂಡೆ ತಾಲ್ಲೂಕಿನಲ್ಲಿನ ಅಮಾಯಕ ರೈತರ ಲಕ್ಷಾಂತರ ಬೆಲೆ ಬಾಳುವ ಜಮೀನುಗಳನ್ನುಲಪಾಟಿಯಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.ಭೂ ಮಾಫಿಯಾದವರ ವಂಚನೆ, ದೌರ್ಜನ್ಯಕ್ಕೆ ಅಮಾಯಕ ರೈತರು ತಮ್ಮ ಭೂಮಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವು ಪ್ರಕರಣಗಳು ರಾಜ್ಯಾದ್ಯಂತ ಕಂಡು ಬರತ್ತಿದೆ. ಸರಕಾರ ರೈತರ ಪರವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.ಗುಡಿಬಂಡೆ ತಾಲ್ಲೂಕು ಸೋಮೇನಹಳ್ಳಿ ಹೋಬಳಿಯ ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಂಗನದಿನ್ನೆ ಗ್ರಾಮದ ಸರ್ವೆ ನಂಬರ್ 20ರ 5ಎಕರೆ 30 ಗುಂಟೆ ಜಮೀನು ರೈತ ಅಶ್ವತ್ಥಪ್ಪಗೆ ಸೇರಿದ್ದು, ಯಾವುದೇ ರೀತಿಯ ರಸ್ತೆ ಇರುವುದಿಲ್ಲ. ಸರ್ವೆ ಮಾಡುವಂತೆ ಅರ್ಜಿ ಹಾಕಿದ್ದೇವೆ ಸರ್ವೆ ಮಾಡಿದ ನಂತರ ನಿಮ್ಮ ಕೆಲಸ ಮಾಡಿಕೊಳ್ಳಿ ಎಂದು ತಿಳಿಸಿದ್ದೆವು.

ಭಾನುವಾರ ವೆಂಕಟಗಿರಿ ಕೋಟೆಯ ನಾರಾಯಣಸ್ವಾಮಿ, ಅವರ ಅಣ್ಣ ಚಂದ್ರಪ್ಪ ಮಕ್ಕಳಾದ ಪ್ರದೀಪ್, ಅಶೋಕ್, ಅಮರನಾರಾಯಣಸ್ವಾಮಿ, ಇವರ ಜತೆಗೆ ಸುಮಾರು 15 ಜನ ರೌಡಿಗಳು ತಂಡ ಕಟ್ಟಿಗೊಂಡು ಪ್ಲಾನ್ ಮಾಡಿಕೊಂಡು ನಮಗೆ ಗೊತ್ತಿಲ್ಲದೆ ಏಕಾಏಕಿ ಜೆಸಿಬಿ, ಟಿಪ್ಪರ್ ಗಳನ್ನು ಕರೆದುಕೊಂಡು ಬಂದು ನಮ್ಮ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದರು.ರೈತ ಪ್ರಶ್ನೆ ಮಾಡಿದ್ದೇ ತಪ್ಪಾ..?ನಮ್ಮ ಜಮೀನಿನಲ್ಲಿ ಏಕೆ ದಾರಿ ಮಾಡುತ್ತಿದ್ದೀರ ಎಂದು ಪ್ರಶ್ನೆ ಮಾಡಿದಕ್ಕೆ ಅವರೆಲ್ಲಾ ಸೇರಿಕೊಂಡು ನಮ್ಮ ಮೇಲೆ ದೌರ್ಜನ್ಯಮಾಡಿ ದೊಣ್ಣೆ ಗಳಿಂದ ಹಲ್ಲೆಮಾಡಿದ್ದಾರೆ. ಗ್ರಾಮದಲ್ಲಿ ನಮ್ಮದು ಒಂಟಿ ಮನೆಯಾಗಿರುತ್ತದೆ.ಪ್ರಣಭಯದಿಂದ ಹೆದರುತ್ತಿದ್ದಾನೆ ರೈತ : ಏಕಾ ಏಕಿ ನಮ್ಮ ಮೇಲೆ ಹಲ್ಲೆ ಮಾಡಿದರೆ, ನಮಗೆ ರಕ್ಷಣೆ ಬೇಕಾಗಿದೆ. ನಮಗೆ ಪ್ರಾಣ ಬೆದರಿಕೆ ಹಾಕಿದ್ದಾರೆ. ದಯವಿಟ್ಟು ಪೊಲೀಸರು ನಮಗೆ ಸೂಕ್ತ ರಕ್ಷಣೆ ನೀಡಬೇಕು, ನಮ್ಮ ಜಮೀನನ್ನು ನಮಗೆ ರಕ್ಷಣೆ ಮಾಡಿಕೊಡಬೇಕೆಂದು ರೈತ ಅಶ್ವತ್ಥಪ್ಪ ಕುಟುಂಬದವರಾದ ನವೀನ್, ಶ್ರೀನಿವಾಸ್, ಪಾರ್ವತಮ್ಮ, ಗುರುಮೂರ್ತಿ, ಸೋಮಶೇಖರ್, ಅರುಣಮ್ಮ ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಂದಿನ ಶೈಕ್ಷಣಿಕ ಸಾಲಿನಿಂದ ಪ್ರಾಥಮಿಕ ಶಾಲಾ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ:ಶಿಕ್ಷಣ ಸಚಿವ ಬಿ.ಸಿ. ನಾಗೇಶ್

Mon Dec 20 , 2021
ಮುಂದಿನ ಶೈಕ್ಷಣಿಕ ಸಾಲಿನಿಂದ ಪ್ರಾಥಮಿಕ ಶಾಲಾ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಮೂರನೆ ಅಲೆಯ ಆತಂಕ ಇಲ್ಲ.ಶಾಲೆಯಲ್ಲಿ ಮಕ್ಕಳ ಸುರಕ್ಷತೆಗೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.ಎನ್‌ಇಪಿ ಜಾರಿ ಕುರಿತಂತೆ ಮಾತನಾಡಿದ ಸಚಿವರು, ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಶಾಲಾ ಹಂತದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. […]

Advertisement

Wordpress Social Share Plugin powered by Ultimatelysocial