ಕೈ ʼಸೌಂದರ್ಯʼ ಹೆಚ್ಚಿಸುತ್ತೆ ಮೆಹಂದಿ|fashion speed news kannda |

ಮಹಿಳೆಯರ ಕೈಗಳಿಗೆ ಅಂದ ನೀಡುತ್ತೆ ಮೆಹಂದಿ. ಗೋರಂಟಿ ಬಣ್ಣ ಗಾಢವಾಗಿ ಮೂಡಿದ್ರೆ ಆಕರ್ಷಕವಾಗಿ ಕಾಣುತ್ತೆ. ಗೋರಂಟಿ ಬಣ್ಣ ಗಾಢವಾಗಿ ಬಂದಿಲ್ಲ ಎಂದು ನೀವು ಚಿಂತೆ ಪಡಬೇಕಾಗಿಲ್ಲ. ಕೆಲವೊಂದು ಸಣ್ಣ ಸಣ್ಣ ಟಿಪ್ಸ್ ನಿಮ್ಮ ಮೆಹಂದಿ ರಂಗನ್ನು ಹೆಚ್ಚಿಸುತ್ತದೆ.ಮೆಹಂದಿ ಹಚ್ಚಿದ ಕೈಯನ್ನು ಎಂದೂ ನೀರಿನಲ್ಲಿ ತೊಳೆಯಬೇಡಿ.
ಒಣಗಿದ ನಂತ್ರ ಉದುರಿಸಿ ತೆಗೆಯಿರಿ. ಇಲ್ಲ ಬೆಣ್ಣೆ ಹಚ್ಚಿ ಮೆಹಂದಿಯನ್ನು ತೆಗೆಯಿರಿ. ನೀರು ಹಾಕಿದ್ರೆ ಮೆಹಂದಿ ಬಣ್ಣ ಗಾಢವಾಗಿ ಮೂಡುವುದಿಲ್ಲ.ಮೆಹಂದಿ ಹಚ್ಚಿದ ನಂತ್ರ ಅದ್ರ ಮೇಲೆ ನಿಂಬೆ ಹಣ್ಣಿನ ರಸ ಹಾಗೂ ಸಕ್ಕರೆಯ ಮಿಶ್ರಣವನ್ನು ಆಗಾಗ ಚಿಮುಕಿಸುತ್ತಿರಿ. ಇದ್ರಿಂದ ಮೆಹಂದಿ ಬೇಗ ಒಣಗುವುದಿಲ್ಲ. ಹಾಗೆ ಗಾಢ ಬಣ್ಣ ಬಿಡುತ್ತದೆ.ರಾತ್ರಿ ಪೂರ್ತಿ ಮೆಹಂದಿ ಕೈನಲ್ಲಿದ್ದು ಬೆಳಿಗ್ಗೆ ತೆಗೆಯುವವರು ಕೈಗೆ ವಿಕ್ಸ್ ಅಥವಾ ಅಯೋಡೆಕ್ಸ್ ಹಚ್ಚಿ. ಇದ್ರಿಂದ ಮೆಹಂದಿ ಬಣ್ಣ ಗಾಢವಾಗಿ ಕಾಣುತ್ತದೆ.ಹಂದಿ ತೆಗೆದ ನಂತ್ರ ಒಂದು ಪ್ಯಾನ್ ಗೆ 10-15 ಲವಂಗ ಹಾಕಿ ಬಿಸಿ ಮಾಡಿ. ಅದ್ರ ಉಗಿಯನ್ನು ಕೈಗೆ ಹಿಡಿಯಿರಿ.ವ್ಯಾಕ್ಸಿಂಗ್ ಅಥವಾ ಸ್ಕ್ರಬ್ಬಿಂಗ್ ಮಾಡುವ ಮೊದಲು ಮೆಹಂದಿ ಹಚ್ಚಬೇಡಿ. ಮೆಹಂದಿ ಹಚ್ಚಿದ ನಂತ್ರ ವ್ಯಾಕ್ಸಿಂಗ್ ಮಾಡಿದಲ್ಲಿ ಮೆಹಂದಿ ಬಣ್ಣ ಗಾಢವಾಗುವುದಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರಕ್ಕೆ ಸಂಪುಟ ವಿಸ್ತರಣೆಯ ಅಗತ್ಯವಿದೆ: ಕೆ ಎಸ್ ಈಶ್ವರಪ್ಪ.

Mon Jan 24 , 2022
ಶಿವಮೊಗ್ಗ: ಸರ್ಕಾರಕ್ಕೆ ಸಚಿವ ಸಂಪುಟ ವಿಸ್ತರಣೆ ಈಗ ಅನಿವಾರ್ಯವಾಗಿದ್ದು ನಾಲ್ಕು ಸಚಿವ ಸ್ಥಾನ ಖಾಲಿಯಿದೆ. ಸದ್ಯ ಸಚಿವ ಸ್ಥಾನಕ್ಕೆ ಸಾಕಷ್ಟು ಪೈಪೋಟಿಯಿದೆ. ನನಗೆ ಯಾವ ಹುದ್ದೆ ಕೊಟ್ಟರೂ ನಿಭಾಯಿಸಲು ಸಿದ್ಧನಿದ್ದೇನೆ ಎಂದು ಹಿರಿಯ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಅವರು, ರಾಜ್ಯದ ಜನರು ಬಿಜೆಪಿ ಪರವಾಗಿಯೇ ಇದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಗಳೇ ಅದಕ್ಕೆ ಸಾಕ್ಷಿಯಾಗಿದೆ. ಇನ್ನು ವಿಧಾನಸಭೆ ಚುನಾವಣೆಗೆ ಒಂದು ವರ್ಷ ಮೂರು ತಿಂಗಳು ಬಾಕಿಯಿದೆ. […]

Advertisement

Wordpress Social Share Plugin powered by Ultimatelysocial