ರುಚಿಕರವಾದ ಮೀನಿನ ಸಾರು ಮಾಡುವ ವಿಧಾನ ?

ಮೀನಿನ ಸಾಂಬರ್ ಮಾಡುವ ವಿಧಾನ

 

        ಬೇಕಾಗುವಪದಾರ್ಥಗಳು

  •  ಮೀನು- 1 ಕೆಜಿ
  • ಈರುಳ್ಳಿ-2
  • ಟೊಮೆಟೊ-2
  • ಅಡುಗೆ ಎಣ್ಣೆ-ಅರ್ಧ
  •  ದನಿಯಾ – ಅರ್ಧ ಕಪ್
  • ಬ್ಯಾಡಗಿ ಮೆಣಸು- 5ರಿಂದ 8
  • ತೆಂಗಿನಕಾಯಿ ತುರಿ- 1ಕಪ್
  • ಹುಣಸೆಹಣ್ಣು- ಸ್ವಲ್ಪ
  •  ಬೆಳ್ಳುಳ್ಳಿ- 1
  •  ಕೊತ್ತಂಬರಿ ಸೊಪ್ಪು- ಸ್ವಲ್ಪ
  •  ಕರಿಬೇವು- ಸ್ವಲ್ಪ
  •  ಜೀರಿಗೆ- 3 ಟೀ ಸ್ಪೂನ್
  •  ಕಾಳುಮೆಣಸು- 1 ಟೀ ಸ್ಪೂನ್
  •  ಅರಿಶಿಣ ಪುಡಿ- 1 ಟೀ ಸ್ಪೂನ್
  •  ಮೆಂತೆಕಾಳು- ಅರ್ಧ ಟೀ ಸ್ಪೂನ್
  •  ಇಂಗು- ಸ್ವಲ್ಪ
  • ಸಾಸಿವೆ- ಸ್ವಲ್ಪ
  • ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ :
    ಮೊದಲು ಹುಣಸೆಹಣ್ಣನ್ನು ನೀರಿನೊಂದಿಗೆ ನೆನೆಸಿಟ್ಟಿರಬೇಕು. ಮತ್ತೊಂದು ಕಡೆ ಜೀರಿಗೆ, ದನಿಯಾಕಾಳು, ಮೆಂತ್ಯಾಕಾಳು, ಬ್ಯಾಡಗಿಮೆಣಸು, ಕಾಳುಮೆಣಸುಗಳನ್ನು ಸೇರಿಸಿ ಚೆನ್ನಾಗಿ ಹುರಿದಿಟ್ಟುಕೊಳ್ಳಬೇಕು.ಬಳಿಕ ಪ್ಯಾನ್ ಗೆ ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೊ, ಅಡುಗೆ ಎಣ್ಣೆಯನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕು.ನಂತರ ಈ ಮೊದಲು ಹುರಿದಿಟ್ಟುಕೊಂಡ ಮಸಾಲೆ ಪದಾರ್ಥಗಳನ್ನು ಮಿಕ್ಸಿ ಜಾರ್ಗೆ ಸೇರಿಸಿಕೊಂಡು, ತೆಂಗಿನಕಾಯಿ, ಅರಿಶಿಣ, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು.
    ಬಳಿಕ ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಇಂಗು, ಒಣಮೆಣಸು, ಕರಿಬೇವು, ಹುಣಸೆಹಣ್ಣಿನ ನೀರು, ರುಬ್ಬಿಕೊಂಡಿರುವ ಮಸಾಲೆಯನ್ನು ಹಾಕಿ. ನಿಮಗೆ ಬೇಕಾದ ಪ್ರಮಾಣದಲ್ಲಿ ನೀರು ಮತ್ತು ರುಚಿಗೆ ತಕ್ಕಷ್ಟು ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಸಾರು ಕುದಿಯುತ್ತಿದ್ದಂತೆ ಮೀನನ್ನು ಸೇರಿಸಿ ಚೆನ್ನಾಗಿ ಬೇಯಿಸಿದರೆ ರುಚಿಯಾದ ಮೀನಿನ ಸಾರು ಸವಿಯಲು ಸಿದ್ಧವಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಸೀತಾಫಲ ತಿನ್ನುವುದರಿಂದ ಆರೋಗ್ಯದಲ್ಲಿ ಅನೇಕ ಪ್ರಯೋಜನಗಳನ್ನು ಕಾಣಬಹುದು??

Fri Jan 7 , 2022
                ಸೀತಾಫಲಹಣ್ಣನ್ನು ಎಲ್ಲಾವರ್ಗದ ಜನರು ಇಷ್ಪಪಡುತ್ತಾರೆಅಷ್ಟೇ ಅಲ್ಲ ಇದು ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವರು ಸೀತಾಫಲವನ್ನು ಸೇವಿಸಲು ಸಲಹೆ ನೀಡುತ್ತಾರೆ.  ಅಲರ್ಜಿ ಹೊಟ್ಟೆಸಮಸ್ಯೆಗಳು ವಾಂತಿ ತೂಕ ಇಳಿಸುವುದು  ಸೀತಾಫಲವನ್ನು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ ಮತ್ತು ಆದ್ದರಿಂದ ಇದನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಆದರೆ ಅನೇಕ ಜನರು ಇದರ ಸೇವನೆಯಿಂದ ಅಲರ್ಜಿ […]

Advertisement

Wordpress Social Share Plugin powered by Ultimatelysocial