ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಈಗ ಮತ್ತೊಬ್ಬರಿಂದ ‘ಬಂಪರ್’ ಆಫರ್.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಬಹಿರಂಗವಾಗಿಯೇ ಘೋಷಿಸಿದ್ದು, ಇಷ್ಟಾದರೂ ಸಹ ರಾಜ್ಯದಾದ್ಯಂತ ಇರುವ ಅವರ ಅಭಿಮಾನಿಗಳು ತಮ್ಮ ಕ್ಷೇತ್ರಕ್ಕೆ ಬಂದು ಸ್ಪರ್ಧಿಸುವಂತೆ ಆಹ್ವಾನ ನೀಡುತ್ತಿರುವುದು ನಿಂತಿಲ್ಲ.

ಕೆಲ ದಿನಗಳ ಹಿಂದೆ ಯಾದಗಿರಿಯ ಬಿಜೆಪಿ ಕಾರ್ಯಕರ್ತರೊಬ್ಬರು ಸಿದ್ದರಾಮಯ್ಯನವರು ಈ ಕ್ಷೇತ್ರದಿಂದ ಕಣಕ್ಕಿಳಿದರೆ ಒಂದು ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದ್ದರಲ್ಲದೆ, ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರಿ 50 ರಿಂದ 60 ಸಾವಿರ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಿಕೊಂಡು ಬರುವುದಾಗಿ ಘೋಷಿಸಿದ್ದರು.

ಅದಾದ ಬಳಿಕ ಸಿದ್ದರಾಮಯ್ಯನವರಿಗೆ ಆಫರ್ ನೀಡಿದ್ದ ರಾಯಚೂರಿನ ಮತ್ತೊಬ್ಬ ವ್ಯಕ್ತಿ, ಜಿಲ್ಲೆಯ ಯಾವುದಾದರೂ ಒಂದು ಸಾಮಾನ್ಯ ಕ್ಷೇತ್ರದಲ್ಲಿ ಅವರು ಸ್ಪರ್ಧಿಸಿದರೆ ತಮ್ಮ ಎರಡು ಎಕರೆ ಹೊಲ ಮಾರಾಟ ಮಾಡಿ ದೇಣಿಗೆ ನೀಡುವುದಾಗಿ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು.

ಇದೀಗ ಚಿಕ್ಕಮಗಳೂರು ಕ್ಷೇತ್ರದ ಅಭಿಮಾನಿ ಮತ್ತೊಂದು ಆಫರ್ ನೀಡಿದ್ದು, ಈ ಕ್ಷೇತ್ರದಿಂದ ಕಣಕ್ಕಿಳಿದರೆ ತಮ್ಮ ಎರಡೂವರೆ ಎಕರೆ ಅಡಿಕೆ ತೋಟ ಮಾರಾಟ ಮಾಡಿ ಒಂದು ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಕೆಂಪನಹಳ್ಳಿ ನಿವಾಸಿ ಬಾಲಕೃಷ್ಣ ಈ ಆಹ್ವಾನ ನೀಡಿದ್ದು ಇದಕ್ಕೆ ಅವರ ಕುಟುಂಬ ಸದಸ್ಯರು ಕೂಡ ಸಮ್ಮತಿಸಿದ್ದಾರೆ ಎನ್ನಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೆಗಡಿ ಮತ್ತು ಕೆಮ್ಮಿನ ಸಮಸ್ಯೆಗೆ ಅದ್ಭುತ ಮನೆಮದ್ದುಗಳನ್ನು ಪ್ರಯತ್ನಿಸಿ.

Fri Feb 3 , 2023
ಋತುಮಾನ ಬದಲಾದಂತೆ ನೆಗಡಿ, ಕೆಮ್ಮು ಕಾಣಿಸಿಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಎಷ್ಟೇ ಕಸರತ್ತು ಮಾಡಿದ್ರೂ ಕೆಮ್ಮು ಕಡಿಮೆಯಾಗುವುದೇ ಇಲ್ಲ. ಕೆಮ್ಮಿನಿಂದ ಗಂಟಲು ಮತ್ತು ಶ್ವಾಸಕೋಶದಲ್ಲಿ ವೈರಲ್ ಸೋಂಕು ಬರುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಕೆಮ್ಮಿನಿಂದ ಮುಕ್ತಿ ಪಡೆಯಲು ಕೆಲವು ಸುಲಭವಾದ ಮನೆಮದ್ದುಗಳನ್ನು ಅಳವಡಿಸಿಕೊಳ್ಳಬೇಕು. ಜೇನುತುಪ್ಪ : ಜೇನುತುಪ್ಪವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಆದ್ದರಿಂದ ಇದು ಕೆಮ್ಮನ್ನು ತೊಡೆದುಹಾಕಲು ರಾಮಬಾಣವಿದ್ದಂತೆ. ಶುಂಠಿರಸಕ್ಕೆ ಜೇನುತುಪ್ಪ ಬೆರೆಸಿ ತಿನ್ನುವುದರಿಂದ ಕೆಮ್ಮು ಕಡಿಮೆಯಾಗುತ್ತದೆ. ಅರಿಶಿನ : ಅರಿಶಿನವು ಎಂಟಿವೈರಲ್, ಉರಿಯೂತ ನಿವಾರಕ […]

Advertisement

Wordpress Social Share Plugin powered by Ultimatelysocial