ಶುಕ್ರವಾರ-ಶನಿವಾರ ಬಿಗ್​​​​ಬಾಸ್ ಗ್ರ್ಯಾಂಡ್ ಫಿನಾಲೆ

 

 

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಬದಲಾದ ದಿನದಲ್ಲಿ ನಡೆಯುತ್ತಿದೆ ಭಾನುವಾರದ ಸಂಚಿಕೆಯಲ್ಲಿ ಸುದೀಪ್ ಅವರು ಈ ವಿಷಯವನ್ನು ಜನರಿಗೆ ತಿಳಿದಿದ್ದಾರೆ. ಡಿಸೆಂಬರ್ 30, 31ಕ್ಕೆ ಗ್ರ್ಯಾಂಡ್ ಫಿನಾಲೆ ಎಂದು ಘೋಷಣೆ ಮಾಡಿದ್ದಾರೆ.ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಯಾವಾಗಲೂ ಶನಿವಾರ ಮತ್ತು ಭಾನುವಾರ ನಡೆಯುತಿತ್ತು. ಈ ಬಾರಿಯೂ ಅದೇ ರೀತಿ ಆಗಬಹುದು ಎಂದುಕೊಂಡಿದ್ರು. ಆದ್ರೆ ಈ ಬಾರಿ ಶುಕ್ರವಾರ, ಶನಿವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.ಹೊಸ ವರ್ಷ ಬರುವ ಕಾರಣ, ಜನರಿಗೆ 1 ದಿನದ ಮುಂಚೆಯೇ ಹೆಚ್ಚು ಮನರಂಜನೆ ನೀಡುವ ಉದ್ದೇಶ ಬಿಗ್ ಬಾಸ್ ತಂಡದ್ದು ಆಗಿರಬಹುದು. ನ್ಯೂ ಇಯರ್ ಪಾರ್ಟಿ ಮಾಡ್ತಾ ಬಿಗ್ ಬಾಸ್ ನೋಡಬಹುದು.ಸದ್ಯ ಬಿಗ್ ಬಾಸ್ ಮನೆಯಲ್ಲಿ 6 ಜನ ಇದ್ದಾರೆ. ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ಆರ್ಯವರ್ಧನ್ ಗುರೂಜಿ, ದೀಪಿಕಾ ದಾಸ್, ದಿವ್ಯಾ ಉರುಡುಗ, ರಾಕೇಶ್ಅರುಣ್ ಸಾಗರ್ ಅವರು ಔಟ್ ಆಗಿದ್ದು, ವಾರದ ಮಧ್ಯದಲ್ಲಿ ಇನ್ನೊಬ್ಬರು ಔಟ್ ಆಗಲಿದ್ದಾರೆ. ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಒಳಗೆ 5 ಜನ ಸ್ಪರ್ಧಿಗಳು ಇರಲಿದ್ದಾರೆ ಯಾರು ವಿನ್ ಆಗ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಗ್ರ್ಯಾಂಡ್ ಫಿನಾಲೆಗೆ ಕೌಂಟ್ ಡೌನ್ ಶುರುವಾಗಿದ್ದು, ಎಲ್ಲರೂ ಉತ್ಸಾಹದಲ್ಲಿ ಇದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ತಿರುಪತಿ ವೆಂಕಟೇಶ್ವರ ದೇಗುಲದ ಗರ್ಭಗುಡಿ 6-8 ತಿಂಗಳು ಕ್ಲೋಸ್‌

Mon Dec 26 , 2022
    ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿರುವ ತಿರುಮಲ ದೇವಸ್ಥಾನದ ಮುಖ್ಯ ಗರ್ಭಗುಡಿಯನ್ನು 2023 ರಲ್ಲಿ ಆರರಿಂದ ಎಂಟು ತಿಂಗಳವರೆಗೆ ಮುಚ್ಚುವ ಸಾಧ್ಯತೆಯಿದೆ, ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ತಿರುಪತಿ ತಿಮ್ಮಪ್ಪನ ದೇಗುಲದ ಆನಂದ ನಿಲಯಂನ ಚಿನ್ನದ ಲೇಪನವನ್ನು ಬದಲಾಯಿಸಲು ಯೋಜಿಸಿದೆ.ಆನಂದ ನಿಲಯಂ ಅಂದರೆ ಗರ್ಭಗುಡಿಯ ಮೇಲಿರುವ ಮೂರು ಅಂತಸ್ತಿನ “ವಿಮಾನ” (ಗುಮ್ಮಟದ ಆಕಾರದ ಗೋಪುರ).ಹಾಗಾದರೆ, ಈ ಸಮಯದಲ್ಲಿ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ […]

Advertisement

Wordpress Social Share Plugin powered by Ultimatelysocial