ಗದಗ:ನೀರಿಗಾಗಿ ಎರಡನೇ ಹಂತದ ಹೋರಾಟಕ್ಕೆ ಸಿದ್ದರಾಗಬೇಕು: ವಸಂತ ಪಡಗದ

ನರಗುಂದ : ಕಳಸಾ – ಬಂಡೂರಿ ಯೋಜನೆ ಶೀಘ್ರವಾಗಿ ಪ್ರಾರಂಭಮಾಡದೆ ಹೋದರೆ 1981 ರ ಹೋರಾಟ ದಿನಗಳು ಮತ್ತೆ ಮರುಕಳಿಸುತ್ತದೆ ನೀರಿಗಾಗಿ ಎರಡನೇ ಹಂತದ ಹೋರಾಟಕ್ಕೆ ನಾವೆಲ್ಲರೂ ಸಿದ್ದರಾಗಬೇಕು ಎಂದು
ಕಳಸಾ-ಬಂಡೂರಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ವಸಂತ ಪಡಗದ ಹೇಳಿದರು.ಅವರು
42 ನೇ ರೈತ ಹುತಾತ್ಮ ದಿನದ ಅಂಗವಾಗಿ ಗುರುವಾರ ಚಿಕ್ಕನರಗುಂದ ಗ್ರಾಮದ ಹುತಾತ್ಮ ರೈತ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ರೈತ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಹುತಾತ್ಮ ರೈತನಿಗೆ ನಮನ ಸಲ್ಲಿಸಿ ಮಾತನಾಡಿದರು.

ಕಳಸಾ-ಬಂಡೂರಿ,ಮಹದಾಯಿ ನೀರಿಗಾಗಿ ಎರಡನೇ ಹಂತದ ಹೋರಾಟಕ್ಕೆ
ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆಗಳನ್ನು ರೈತರೊಂದಿಗೆ ಕೂಡಿಕೊಂಡು ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೆವೆ ಎಂದು ಕಳಸಾ-ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದರು.

ಈ ಸಂಧರ್ಭದಲ್ಲಿ ,ಆನಂದ ಗವಳಿ,ರವಿ ಜಂತ್ಲಿ,ಆನಂದ ತೊಂಡಿಹಾಳ,ವಿಜಯ ಕೊಟ್ನಿ,ಸಚಿನ ಶಿರೂರ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.

ಕಳೆದ ಎರಡು ವರ್ಷಗಳಿಂದ ಕೋವಿಡ್ ಹೆಸರು ಹೇಳಿ ಕಾಲಹಣ ಮಾಡಿದ ಸರ್ಕಾರ ಕೂಡಲೇ ರೈತರಿಗೆ ನೀಡಬೇಕಾದ ನೀರಾವರಿ ಸೌಲಭ್ಯ ಜೊತೆಗೆ ಉತ್ತರ ಕರ್ನಾಟಕ ಭಾಗದ ಕಳಸಾ-ಬಂಡೂರಿ, ಮಹದಾಯಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ತಪ್ಪಿದಲ್ಲಿ ಎರಡನೇ ಹಂತದ ಹೋರಾಟಕ್ಕೆ ರೈತರೊಂದಿಗೆ ಚಿಂತನೆ ನಡೆಸಲಾಗುವುದು.
ಈ ಸಮಯದಲ್ಲಿ ವಸಂತ ಅವರು ತಿಳಿಸಿದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಲಕ್ಷ್ಮೇಶ್ವರ . ಸ್ಮಾರ್ಟ್ ಕ್ಲಾಸ ಉದ್ಘಾಟನೆ.

Thu Jul 21 , 2022
ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಜಿಟಲ್ ಕಲಿಕೆ ಯೋಜನೆಯಡಿಯಲ್ಲಿ ಐಸಿಟಿ/ಸ್ಮಾರ್ಟ್ ಕ್ಲಾಸ್ ರೂಮ್‍ಗಳ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಮ್.ಮುಂದಿನ ನೆರವೇರಿಸಿದರು. ನಂತರ ಮಾತನಾಡಿದ ಅವರು ಪ್ರಸ್ತುತ ಶಿಕ್ಷಣದ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದು ಅದಕ್ಕನುಗುಣವಾಗಿ ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆ ಸಾಕಷ್ಟು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಡಿಜಿಟಲ್ ಕಲಿಕೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಮಾರ್ಟ್ ಕ್ಲಾಸ್ ಅತ್ಯವಶ್ಯಕವಾಗಿದ್ದು ಇದರ ಪ್ರಯೋಜನ […]

Advertisement

Wordpress Social Share Plugin powered by Ultimatelysocial