ಕೆ.ಕಲ್ಯಾಣ ಕೌಟುಂಬಿಕ ಕಲಹಕ್ಕೆ ಕಾರಣವಾಗಿದ್ದ ಜ್ಯೋತಿ ಆತ್ಮಹತ್ಯ

ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದ ಕೋಟ್೯ ಹತ್ತಿರ ಆತ್ಮಹತ್ಯೆ

ಸರ್ಕಾರಿ ನೌಕರಿ ಕೊಡಿಸುವುದಾಗಿ ಹಣ ತೆಗೆದುಕೊಂಡಿದ್ದಳು ಉದ್ಯೋಗ ಕೊಡಿಸುವುದಾಗಿ ಮಾಡಿದ್ದ ಪ್ರಕರಣ ವಕೀಲರ ಭೇಟಿಗಾಗಿ ಕುಷ್ಟಗಿ ನ್ಯಾಲಯಕ್ಕೆ ಬಂದಿದ್ದ ಜೋತಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮರಣ ಕುಷ್ಟಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಚಲನಚಿತ್ರ ಸಾಹಿತಿ ಕೆ.ಕಲ್ಯಾಣ ಕುಟುಂಬದಲ್ಲಿ ಹುಳಿ ಇಂಡಿ, ಕೌಟುಂಬಿಕ ಕಲಹಕ್ಕೆ ಪ್ರಮುಖ ಕಾರಣವಾಗಿದ್ದಳು ಎನ್ನಲಾದ ಜ್ಯೋತಿ ಎಂಬಾಕೆ ಇಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ನ್ಯಾಯಾಲಯದ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ. ಕೆಲದಿನಗಳ ಹಿಂದೆ ಚಲನಚಿತ್ರ ಸಾಹಿತಿ ಕೆ ಕಲ್ಯಾಣ್ ಹಾಗೂ ಅವರ ಪತ್ನಿಯ ಜೀವನದ ಜೊತೆ ಚೆಲ್ಲಾಟವಾಡಿ ಪತಿ ಪತ್ನಿಇಬ್ಬರೂ ದೂರಾಗುವಲ್ಲಿ ಪ್ರಮುಖ ರೂವಾರಿಯಾಗಿದ್ದ ಜ್ಯೋತಿ ಎಂಬಾಕೆ ಕುಷ್ಟಗಿ ತಾಲೂಕಿನಾದ್ಯಂತ ವಿವಿಧ ನಿರುದ್ಯೋಗಿ ಯುವಕರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಎತ್ತುವಳಿ ಮಾಡಿ, ತಲೆಮರೆಸಿಕೊಂಡಿದ್ದಳು. ಸರ್ಕಾರಿ ನೌಕರಿ ಕೊಡಿಸುವುದಾಗಿ ಅನೇಕ ಯುವಕರಿಗೆ ಮೋಸ ಎಸಗಿದ್ದ ಇವಳ ಮೇಲೆ ಅನೇಕ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ಬಗ್ಗೆ ದಿನಾಂಕ 3 ನವೆಂಬರ್ ರಂದು ನ್ಯಾಲಯಕ್ಕೆ ಹಾಜರಾಗಬೇಕಾಗಿದ್ದ ಕಾರಣ ಕುಷ್ಟಗಿ ನಗರದ ನ್ಯಾಯಾಲಯಕ್ಕೆ ವಕೀಲರ ಭೇಟಿಗಾಗಿ ಬಂದಿದ್ದಳು ಎನ್ನಲಾಗುತ್ತಿದೆ. ಈ ವೇಳೆ ಕೋಟ್೯ ಆವರಣದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಲಿಸ್ ಮೂಲಗಳು ಪ್ರಕಾರ ಹೇಳಲಾಗುತ್ತಿದೆ.ಕುಷ್ಟಗಿ ನಗರದ ಕೋಟ್೯ ಹತ್ತಿರ ಘಟನೆ ನಡೆದಿದ್ದು ತಕ್ಷಣ ಸ್ಥಳಿಯರ ಸಹಕಾರದಿಂದ ಪೋಲಿಸರು ಆಕೆಯನ್ನು ಸ್ಥಳಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.ಆದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾಳೆ.ಸ್ಥಳಕ್ಕೆ ಕುಷ್ಟಗಿ ಸಿಪಿಐ ನಿಂಗಪ್ಪ ಆಗಮಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.ಈ ಸಂಬಂಧ ಕುಷ್ಟಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಶಾಸಕ ಎಸ್.ಆರ್.ಶ್ರೀನಿವಾಸ್ ಕಾಳೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿದರು

Fri Oct 30 , 2020
ಬ್ಯಾಗ್ ತುಂಬಾ ಕಲ್ಲುಗಳನ್ನು ತುಂಬಿಕೊಂಡು ಮನೆ ಮನೆಗೆ ಕಲ್ಲು ಹೊಡೆಯುವ ಪ್ರವೃತ್ತಿಯ ಸಂಸದ ಬಸವರಾಜು ಅವರು ನಾನು ಮಾಡುವ ಅಭಿವೃದ್ದಿ ಕೆಲಸಗಳಿಗೆ ಅಡ್ಡಿ ಪಡಿಸುವುದೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ವ್ಯಂಗ್ಯವಾಡಿದರು. ತಾಲ್ಲೂಕಿನ ಕಾಳೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಗುರುವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಸಂಸದರಾಗಿ ಆಯ್ಕೆಯಾದ ಬಳಿಕ ಗುಬ್ಬಿ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳಿಗೆ ಮಾರಕ ಎನಿಸಿರುವುದಕ್ಕೆ ಪಟ್ಟಣ […]

Advertisement

Wordpress Social Share Plugin powered by Ultimatelysocial