ಅಶ್ವಗಂಧವನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಹೆಚ್ಚಾಗಿ ಬಳಸಲಾಗುವುದು.

ಅಶ್ವಗಂಧವನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಹೆಚ್ಚಾಗಿ ಬಳಸಲಾಗುವುದು. ಮಹಿಳೆಯರಿಗೆ ಇದೊಂದು ಮ್ಯಾಜಿಕಲ್ ಹರ್ಬ್‌ ಆಗಿದೆ, ಏಕೆಂದರೆ ಇದನ್ನು ಸೇವಿಸುವುದರಿಂದ ಸ್ತ್ರೀಯರಿಗೆ ಹಲವು ರೀತಿಯ ಪ್ರಯೋಜನಗಳಿವೆ.ಎಲ್ಲಾ ವಯಸ್ಸಿನ ಮಹಿಳೆಯರಿಗೂ ಈ ಅಶ್ವಗಂಧ ಪ್ರಯೋಜನಕಾರಿಯಾಗಿದೆ.ಇದನ್ನು ದಿನನಿತ್ಯ ಸೇವಿಸುತ್ತಿದ್ದರೆ ತುಂಬಾನೇ ಪ್ರಯೋಜನ ಪಡೆಯಬಹುದು. ಇದರ ಸೇವನೆ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು.ಅಶ್ವಗಂಧ ಪ್ರತಿದಿನ ಸೇವಿಸಿದರೆ ಆಕರ್ಷಕ ಮೈ ಮಾಟ ಹೊಂದಿರುವುದು ಮಾತ್ರವಲ್ಲ ಇನ್ನು ಹಲವು ಪ್ರಯೋಜನಗಳಿಗೆ, ಅಶ್ವಗಂಧದ ಸೇವನೆ ಹೇಗೆ ಸಹಕಾರಿಯಾಗಿದೆ ಎಂದು ನೋಡೋಣ:ತೂಕ ಹೆಚ್ಚಾಗುತ್ತಿದೆಯೇ ಹಾಗಾದರೆ ಅಶ್ವಗಂಧ ನಿಮಗೆ ಸಹಾಯ ಮಾಡುವುದು, ಜರ್ನಲ್‌ ಆಫ್‌ ಎವಿಡೆನ್ಸ್ ಬೇಸ್ಡ್ ಇಂಟ್ರಾಗೇಟಿವ್ ಮೆಡಿಸಿನ್‌ನಲ್ಲಿ ಈ ಗಿಡ ಮೂಲಿಕೆ ಮಾನಸಿಕ ಒತ್ತಡ ಕಡಿಮೆ ಮಾಡುವುದು ಹಾಗೂ ಆಗಾಗ ತಿನ್ನಬೇಕೆಂಬ ಮಾನಸಿಕ ಸಮಸ್ಯೆ ತಡೆಗ್ಟಟುತ್ತದೆ ಎಂದು ಹೇಳಿದೆ.ಅಶ್ವಗಂಧ ತಿನ್ನುವುದರಿಂದ ಮಾನಸಿಕ ಆರೋಗ್ಯ ಹೆಚ್ಚಿಸುತ್ತದೆ, ಇದು ರಕ್ತ ಸಂಚಾರ ಸರಾಗವಾಗಿ ನಡೆಯಲು ಸಹಕಾರಿ ಹಾಗೂ ಲೈಂಗಿಕ ಸಾಮರ್ಥ್ಯ ಹೆಚ್ಚಿಸುತ್ತದೆ.ಅಶ್ವಗಂಧವನ್ನು ಪ್ರತಿನಿತ್ಯ ಸೇವಿಸುತ್ತಿದ್ದರೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುವುದು. ಒತ್ತಡದಿಂದ ನಿಮ್ಮ ಕೂದಲು ಉದುರುತ್ತಿದ್ದರೆ ತಕ್ಷಣ ಪರಿಹಾರ ಸಿಗುವುದು.ಅಲ್ಲದೆ ಅಕಾಲಿಕ ನೆರೆ ತಡೆಗಟ್ಟುತ್ತದೆ.ಹಲವು ಮಹಿಳೆಯರಿಗೆ ಜನನೇಂದ್ರೀಯದಲ್ಲಿ ಸೋಂಕು ಉಂಟಾಗಿ ತುರಿಕೆ ಕಂಡು ಬರುವುದು. ಯೀಸ್ಟ್ ಸೋಂಕು ತಡೆಗಟ್ಟುವಲ್ಲಿ ಅಶ್ವಗಂಧ ಪರಿಣಾಮಕಾರಿಯಾಗಿದೆ. ನಿಮ್ಮ ಖಾಸಗಿ ಭಾಗದಲ್ಲಿ ಆಗಾಗ ತುರಿಕೆ ಕಂಡು ಬರುತ್ತಿದ್ದರೆ ಈ ಅಶ್ವಗಂಧ ಸೇವಿಸುವುದರಿಂದ ಪರಿಹಾರ ಕಾಣಬಹುದು.ಮಹಿಳೆಯರಲ್ಲಿ ಮದುಮೇಹ ಸಮಸ್ಯೆ ಹೆಚ್ಚಾಗುತ್ತಿದೆ. ಹಾರ್ಮೋನ್‌ಗಳ ಅಸಮತೋಲನ, ಪಿಸಿಒಡಿ, ಮುಟ್ಟಿನಲ್ಲಿ ತೊಂದರೆ ಈ ರೀತಿ ಹಲವು ಸಮಸ್ಯೆಗಳು ಮಹಿಳೆಯರನ್ನು ಕಾಡುವುದು. ಅಶ್ವಗಂಧ ಸೇವಿಸುವುದರಿಂದ ದೇಹದ ರಕ್ತದಲ್ಲಿ ಸಕ್ಕರೆಯಂಶ ಹೆಚಚಾಗುವುದನ್ನು ತಡೆಗಟ್ಟುತ್ತದೆ ಅಲ್ಲದೆ ಸಿಹಿ ತಿನ್ನಬೇಕೆಂಬ ಬಯಕೆಯನ್ನು ಕೂಡ ತಡೆಗಟ್ಟುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಂಬೈ: ನಗರದಲ್ಲಿ ಡಿಸೆಂಬರ್ 21 ರಿಂದ ಕಡಿಮೆ ಕೋವಿಡ್ -19 ಪ್ರಕರಣ;

Tue Feb 8 , 2022
ಪೋಲೀಸ್ ಸುಧಾರಣೆಗಳ ಸ್ಥಿತಿ: ಹಲವು ಅಂಶಗಳಲ್ಲಿ ಬಯಸುವುದು 1996 ರಲ್ಲಿ ಇಬ್ಬರು ನಿವೃತ್ತ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿಗಳು), ಪ್ರಕಾಶ್ ಸಿಂಗ್ ಮತ್ತು ಎನ್‌ಕೆ ಸಿಂಗ್ ಅವರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಸಲ್ಲಿಸಿದ ನಂತರ ಮತ್ತು 2006 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಅನುಸರಿಸಲು ಒತ್ತಾಯಿಸಲಾಯಿತು. ಪೊಲೀಸ್ ಪಡೆಗಳಲ್ಲಿ ಸುಧಾರಣೆಗಳನ್ನು ಕಿಕ್‌ಸ್ಟಾರ್ಟ್ ಮಾಡುವ ಗುರಿಯನ್ನು ಹೊಂದಿರುವ ಏಳು ಕಟ್ಟುಪಾಡು ನಿರ್ದೇಶನಗಳೊಂದಿಗೆ, ಪೊಲೀಸರ ವ್ಯಾಪ್ತಿ ಮತ್ತು ಕಾರ್ಯಗಳನ್ನು ಮರು ವ್ಯಾಖ್ಯಾನಿಸುವುದು […]

Advertisement

Wordpress Social Share Plugin powered by Ultimatelysocial