“ಗಿಚ್ಚ ಗಿಲಿ ಗಿಲಿ” ಷೋ ನಿಂದ ಮಂಜು ಪಾವಗಡ ಹೊರಕ್ಕೆ..!

 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಗಿಚ್ಚಿ ಗಿಲಿಗಿಲಿ” ರಿಯಾಲಿಟಿ ಶೋ ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ದಾಪುಗಾಲು ಇಡುತ್ತಿದೆ. ಈ ಕಾರ್ಯಕ್ರಮದ ನಿರೂಪಣೆ ಹೊತ್ತವರು ಬಿಗ್ ಬಾಸ್ ವಿನ್ನರ್ ಮಂಜು ಮತ್ತು ಸ್ಪೋರ್ಟ್ಸ್ ಆಯಂಕರ್ ರೀನಾ ಡಿಸೋಜಾ.

ಸಾಕಷ್ಟು ಮನರಂಜನೆ ನೀಡುತ್ತಿರುವ ಈ ಶೋನಿಂದ ಈಗ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಈ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದ ರೀನಾ ಡಿಸೋಜಾ ಮತ್ತು ಮಂಜು ಶೋನಿಂದ ಹೊರನಡಿದ್ದಾರೆ.

ಈ ರಿಯಾಲಿಟಿ ಶೋ ಪ್ರಾರಂಭ ಆದಾಗಿಂದ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿತ್ತು. ಅಲ್ಲದೇ ರೀನಾ ಮತ್ತು ಮಂಜು ಇಬ್ಬರು ನಿರೂಪಣೆ ಜವಾಬ್ದಾರಿ ವಹಿಸಿಕೊಂಡಿರುವುದರಿಂದ ಅಭಿಮಾನಿಗಳು ಇವರಿಂದ ಭಾರೀ ಮನರಂಜನೆ ನಿರೀಕ್ಷೆ ಮಾಡಿದ್ದರು. ಆದರೀಗ ಶೋ ಅರ್ಧದಲ್ಲಿಯೇ ಇಬ್ಬರೂ ಹೊರ ನಡೆದಿದ್ದಾರೆ. ಅಂದಹಾಗೆ ಇವರಿಬ್ಬರ ಜಾಗಕ್ಕೆ ಮತ್ತೋರ್ವ ನಿರೂಪಕ ಎಂಟ್ರಿ ಕೊಟ್ಟಿದ್ದಾರೆ. ಅದು ಮತ್ಯಾರು ಅಲ್ಲ ನಿರಂಜನ್ ದೇಶಪಾಂಡೆ. ನಿರಂಜನ್ ಇನ್ಮುಂದೆ ಈ ಶೋ ನಡೆಸಿಕೊಡಲಿದ್ದಾರೆ.

ಈಗಾಗಲೇ ಹೊಸ ಪ್ರೋಮೋ ಬಿಡುಗಡೆಯಾಗಿದ್ದು ನಿರಂಜನ್ ಅದ್ಭುತವಾಗಿ ನಿರೂಪಣೆ ಮಾಡಿದ್ದಾರೆ. ಅಂದಹಾಗೆ ಇದೇ ಶೋನಲ್ಲಿ ನಿರಂಜನ್ ಪತ್ನಿ ಯಶಸ್ವಿನಿ ಸ್ಪರ್ಧಿಯಾಗಿ ಭಾಗಿಯಾಗಿದ್ದಾರೆ. ಸದ್ಯ ಬದಲಾದ ನಿರೂಪಕರಿಂದ ಮತ್ತಷ್ಟು ಮನರಂಜನೆಯ ನಿರೀಕ್ಷೆಯಲ್ಲಿದ್ದಾರೆ ಪ್ರೇಕ್ಷಕರು. ಅಂದಹಾಗೆ ಖ್ಯಾತ ನಿರೂಪಕಿ ರೀನಾ ಡಿಸೋಜಾ ಸ್ಟಾರ್ ಸ್ಪೋರ್ಟ್ ಆಂಕರ್ ಆಗಿದ್ದಾರೆ. ಆಪಾರ ಸಂಖ್ಯೆಯ ಫಾಲೋವರ್ಸ್ ಹೊಂದಿರುವ ರೀನಾ ತನ್ನ ಅದ್ಭುತ ನಿರೂಪಣಾ ಶೈಲಿ ಮೂಲಕ ನೋಡುಗರ ಮನಗೆದ್ದಿದ್ದರು. ಗಿಚ್ಚಿಗಿಲಿಗಿಲಿ ಶೋ ಮೂಲಕ ರೀನಾ ಮೊದಲ ಬಾರಿಗೆ ಮನರಂಜನಾ ವಾಹಿನಿ ಕಡೆ ಮುಖ ಮಾಡಿದ್ದರು.

ಆದರೆ ರೀನಾ ನಿರೂಪಣೆಗೆ ಇಲ್ಲಿ ಹೇಳಿಕೊಳ್ಳುವಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಅಲ್ಲದೆ ಮಂಜು ಪಾವಗಡ ಅವರೇ ಹೆಚ್ಚು ವೇದಿಕೆ ಆಕ್ರಮಿಸಿಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಈ ನಡುವೆ ಇಬ್ಬರು ದಿಢೀರ್ ಶೋನಿಂದ ಹೊರ ನಡೆದಿರುವುದು ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಅಂದಹಾಗೆ ಇಬ್ಬರು ಗಿಚ್ಚಿ ಗಿಲಿಗಿಲಿ ಶೋನಿಂದ ಹೊರ ನಡೆಯಲು ಕಾರಣ ಬೇರೆ ಬೇರೆ ಕಮಿಂಟ್ ಮೆಂಟ್ ಕಾರಣದಿಂದ ಶೋನಿಂದ ಹೊರನಡೆಯಲಾಗಿದೆ ಎನ್ನಲಾಗಿದೆ. ಮಂಜು ಪಾವಗಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ರೀನಾ ಡಿಸೋಜಾ ಸ್ಟಾರ್ ಸ್ಪೋರ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಂಗಾಳ ಕೊಲ್ಲಿಯಲ್ಲಿ ವಾಯುಬಾರ ಕುಸಿತ..! ಈ ಜಿಲ್ಲೆಗಳಲ್ಲಿ ನಾಳೆ ಭಯಂಕರ ಮಳೆ ಆಗುವ ಸಾಧ್ಯತೆ.!

Tue May 17 , 2022
  ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮೇ 18(ನಾಳೆ)ರಿಂದ ಇನ್ನಷ್ಟು ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ಬಳ್ಳಾರಿ ಮತ್ತು ದಾವಣಗೆರೆಯಲ್ಲಿ ಮುಂದಿನ 4 ದಿನ, ಬೀದರ್‌, ವಿಜಯಪುರ, ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ಗದಗ, ಹಾವೇರಿ, ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ಮುಂದಿನ 48 ಗಂಟೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು […]

Advertisement

Wordpress Social Share Plugin powered by Ultimatelysocial