ಗಿರಿಜಾ ಲೋಕೇಶ್ ಕನ್ನಡ ಚಿತ್ರರಂಗದ ಹಿರಿಯ ನಟಿ

ಕನ್ನಡ ಚಿತ್ರರಂಗದ ಹಿರಿಯ ನಟಿ ಗಿರಿಜಾ ಲೋಕೇಶ್ ಅವರ ಜನ್ಮದಿನ ಜನವರಿ 10. ಕನ್ನಡ ರಂಗಭೂಮಿಯಲ್ಲಿ ಅಭಿನಯಿಸಲು ಪ್ರಾರಂಭಿಸಿದ ಗಿರಿಜಾ ಅವರು ಎಪ್ಪತ್ತರ ದಶಕದಲ್ಲಿ ಅವರ ಸಹೋದ್ಯೋಗಿಯಾಗಿದ್ದ ಲೋಕೇಶ್ ಅವರೊಡನೆ ವಿವಾಹವಾದರು. ಮುಂದೆ ಇವರಿಬ್ಬರೂ ಕನ್ನಡ ಚಿತ್ರರಂಗದಲ್ಲಿ ಅಪಾರ ಹೆಸರು ಮಾಡಿದರು.ಲೋಕೇಶ್ ಮತ್ತು ಗಿರಿಜಾ ಇಬ್ಬರೂ ಒಟ್ಟಿಗೆ ನಟಿಸಿದ ಪ್ರಥಮ ಚಿತ್ರ ‘ಕಾಕನಕೋಟೆ’ ಎನಿಸುತ್ತದೆ. ಆ ಚಿತ್ರದಲ್ಲಿ ಇವರಿಬ್ಬರೂ ಅದ್ಭುತವಾಗಿ ನಟಿಸಿದ್ದನ್ನು ನೋಡಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಲೋಕೇಶ್ ಅವರು ಬೂತಯ್ಯನ ಮಗ ಅಯ್ಯು ಚಿತ್ರದ ಅದ್ಭುತ ಅಭಿನಯ ಮತ್ತು ಆ ಚಿತ್ರದ ಯಶಸ್ಸಿನಿಂದ ಹಲವಾರು ವರ್ಷಗಳ ಕಾಲ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದರು. ಗಿರಿಜಾ ಲೋಕೇಶ್ ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಾ ಕನ್ನಡ ಚಿತ್ರರಂಗದಲ್ಲಿ ಅಪಾರ ಕೆಲಸ ಮಾಡುತ್ತಿದ್ದಾರೆ. ಗಿರಿಜಾ ಲೋಕೇಶ್ ತಾವು ಅಭಿನಯಿಸುವ ಪಾತ್ರಗಳಿಗೆಲ್ಲಾ ಜೀವ ತುಂಬುವ ರೀತಿ ಮನೋಜ್ಞವಾದದ್ದು.ಗಿರಿಜಾ ಲೋಕೇಶ್ ಮತ್ತು ಲೋಕೇಶ್ ಇವರಿಬ್ಬರೂ ನಟಿಸಿದ ಭುಜಯ್ಯಂಗಯ್ಯನ ದಶಾವತಾರ ಚಿತ್ರ ಕೂಡ ನೆನಪಿನಲ್ಲಿ ಉಳಿಯುವಂತದ್ದು. ಲೋಕೇಶ್ ಅವರು ನಿರ್ದೇಶಿಸಿದ್ದ ಈ ಚಿತ್ರದಲ್ಲಿ ವಿಭಿನ್ನ ಭಾವನೆಗಳನ್ನು ವ್ಯಕ್ತಪಡಿಸುವ ಹೆಣ್ಣಾಗಿ ಗಿರಿಜಾ ಲೋಕೇಶ್ ಅಭಿನಯಿಸಿರುವ ರೀತಿ ಚಿರಸ್ಮರಣೀಯ. ದೂರದರ್ಶನ ಧಾರವಾಹಿಗಳಲ್ಲಿ ಸಹಾ ಪೋಷಕ ಪಾತ್ರಗಳಲ್ಲಿ ಗಿರಿಜಾ ಲೋಕೇಶ್ ಅವರು ಮನಸೆಳೆಯುವ ಅಭಿನಯ ನೀಡುತ್ತಾ ಮುಂದುವರೆದಿದ್ದಾರೆ.ಗಿರಿಜಾ ಲೋಕೇಶ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳು ಸಂದಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಸು ಚಟರ್ಜಿ ಅವರು ಪ್ರಸಿದ್ಧ ಬ್ಲಿಟ್ಜ್ ಪತ್ರಿಕೆಯಲ್ಲಿನ ಕಥಾನಾಯಕ

Tue Jan 10 , 2023
ಸಿನಿಮಾ ಎಂದರೆ ಆಡಂಭರ, ಇಲ್ಲವೇ ಬಡತನದ ಬವಣೆ ಎಂಬ ಎರಡು ಚಿಂತನೆಗಳನ್ನೇ ಬಿಂಬಿಸುವವರ ಮಧ್ಯೆ ಮಧ್ಯಮ ವರ್ಗದ ಚೆಲುವು ಒಲವುಗಳನ್ನು ಚಲನಚಿತ್ರಗಳಲ್ಲಿ ತಂದು ಕೊಟ್ಟವರಲ್ಲಿ ಬಸು ಚಟರ್ಜಿ ಪ್ರಮುಖರು. ಬಸು ಚಟರ್ಜಿ 1930ರ ಜನವರಿ 10 ರಂದು ರಾಜಾಸ್ಥಾನದ ಅಜ್ಮೀರ್ ನಗರದಲ್ಲಿ ಜನಿಸಿದರು. ಬಸು ಚಟರ್ಜಿ ಅವರು ಪ್ರಸಿದ್ಧ ಬ್ಲಿಟ್ಜ್ ಪತ್ರಿಕೆಯಲ್ಲಿನ ಕಥಾನಕಗಳ ಚಿತ್ರಕಾರರಾಗಿ ಮತ್ತು ವ್ಯಂಗ್ಯಚಿತ್ರಕಾರರಾಗಿ ಹದಿನೆಂಟು ವರ್ಷಕಾಲ ಕೆಲಸಮಾಡಿದರು. ಆ ನಂತರದಲ್ಲಿ ಅವರು ಚಿತ್ರರಂಗದತ್ತ ಕಣ್ಣುಹಾಯಿಸಿದರು. ಬಸು […]

Advertisement

Wordpress Social Share Plugin powered by Ultimatelysocial