ಜಿ-ಮೇಲ್‌ನ ಈ ಕುತೂಹಲಕಾರಿ ಆಯ್ಕೆಗಳ ಬಗ್ಗೆ ನಿಮಗೆ ಗೊತ್ತೆ?

ಪ್ರಸ್ತುತ ದಿನಮಾನಗಳಲ್ಲಿ ಇ-ಮೇಲ್ ಪ್ರಮುಖ ಪಾತ್ರ ವಹಿಸಿದೆ. ಮೇಲ್ ಕ್ಷಣಾರ್ಧದಲ್ಲಿ ಸಂದೇಶವನ್ನು ಸೇರಬೇಕಾದ ಸ್ಥಳ ಸೇರಿರುತ್ತದೆ. ಆ ಪೈಕಿ ಗೂಗಲ್ ಒಡೆತನದ ಜಿ-ಮೇಲ್ ಹೆಚ್ಚು ಬಳಕೆಯಲ್ಲಿರುವ ಮೇಲ್ ಸೇವೆ ಆಗಿ ಗುರುತಿಸಿಕೊಂಡಿದೆ. ಇನ್ನು ಜಿ-ಮೇಲ್ ತನ್ನ ಬಳಕೆದಾರರಿಗೆ ಅನುಕೂಲವಾಗಲೆಂದು ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಬಳಕೆದಾರರ ನೆರವಾಗಿದೆ.

ಆದರೆ ಕೆಲವೊಂದು ಫೀಚರ್ಸ್‌ಗಳ ಬಗ್ಗೆ ಬಳಕೆದಾರರಿಗೆ ಮಾಹಿತಿ ಇಲ್ಲ.

ಹೌದು, ಗೂಗಲ್ ಸಂಸ್ಥೆಯ ಜಿ ಮೇಲ್ ಹೆಚ್ಚು ಟ್ರೆಂಡಿಂಗ್‌ನಲ್ಲಿದೆ. ಆಂಡ್ರಾಯ್ಡ್‌ ಫೋನ್ ಬಳಕೆ ಮಾಡುವ ಅನೇಕರು ಜಿ ಮೇಲ್ ಹೊಂದಿರುತ್ತಾರೆ. ಜಿ ಮೇಲ್‌ ಅವರ ಹಲವು ಸೇವೆಗಳಿಗೆ ಅಳಪಾಯ ಆಗಿದೆ. ಅದಾಗ್ಯೂ ಜಿ ಮೇಲ್‌ನಲ್ಲಿರುವ ಕೆಲವು ಅಚ್ಚರಿಯ ಆಯ್ಕೆಗಳು ಬಳಕೆದಾರರಿಗೆ ಮತ್ತಷ್ಟು ಸಹಾಯಕ ಆಗಿವೆ. ಆದರೆ ಬಳಕೆದಾರರು ಅವುಗಳ ಬಳಕೆ ಮಾಡುವ ಸಾಧ್ಯತೆಗಳು ಕಡಿಮೆ ಎನ್ನಬಹುದು ಅಥವಾ ಅವುಗಳ ಬಗ್ಗೆ ತಿಳಿದಿರುವುದಿಲ್ಲ. ಹಾಗಾದರೇ ಜಿ ಮೇಲ್‌ನಲ್ಲಿರುವ ಕೆಲವು ಕುತೂಹಲಕಾರಿ ಆಯ್ಕೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇ ಮೇಲ್ ಶೆಡ್ಯುಲ್ ಸಹ ಮಾಡಬಹುದು;

ಜಿ ಮೇಲ್ ಬಳಕೆದಾರರು ಇ ಮೇಲ್ ರಚಿಸಿ ಸಿದ್ಧ ಮಾಡಿಕೊಂಡು ಬೇಕಾದ ಸಮಯಕ್ಕೆ ಆಟೋ ಸೆಂಡ್ ಆಗಲು ಇ ಮೇಲ್ ಶೆಡ್ಯುಲ್ ಮಾಡುವ ಆಯ್ಕೆ ಇದೆ. ಈ ಆಯ್ಕೆ ಬಳಕೆ ಮಾಡಲು ಹೀಗೆ ಮಾಡಿ: ಇ ಮೇಲ್ ರಚಿಸಿ ಮತ್ತು ಸೆಂಡ್ ಬಟನ್ ಜೊತೆಗೆ ಕೆಳಗಿನ ಎರೋ ಬಟನ್ ಮೇಲೆ ಟ್ಯಾಪ್ ಮಾಡಿ. ನಂತರ ಕಳುಹಿಸು ವೇಳಾಪಟ್ಟಿಯನ್ನು ಆರಿಸಿ. ಈಗ, ಪ್ರಿಸೆಟ್ ಆಯ್ಕೆಯಿಂದ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ. ತದ ನಂತರ ಪಿಕ್ ಡೇಟ್ ಮತ್ತು ಟೈಮ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮದೇ ಆಯ್ಕೆ ಮಾಡಿ.

ನೆಟ್ ಇಲ್ಲದೆಯೂ ಜಿ ಮೇಲ್ ಬಳಕೆ ಮಾಡಬಹುದು;

ಗೂಗಲ್‌ನ ಕೆಲವು ಸೇವೆಗಳು ಆಫ್‌ಲೈನ್‌ ಮೋಡ್ ಆಯ್ಕೆ ಪಡೆದಿವೆ. ಅದೇ ರೀತಿ ಜಿ-ಮೇಲ್ ಸಹ ಆಫ್‌ಲೈನ್ ಪ್ರವೇಶ ಮೋಡ್‌ ಆಯ್ಕೆ ಒಳಗೊಂಡಿದೆ. ಇದರ ಅರ್ಥವೇನೆಂದರೆ, ನೀವು ಇಂಟರ್ನೆಟ್ ಸಂಪರ್ಕವಿಲ್ಲದೆ ಜಿ-ಮೇಲ್‌ ಅನ್ನು ಓದಬಹುದು, ಪ್ರತಿಕ್ರಿಯಿಸಬಹುದು ಮತ್ತು ಸರ್ಚ್ ಸಹ ಮಾಡಬಹುದಾಗಿದೆ. ಇದಕ್ಕಾಗಿ mail.google.com ಅನ್ನು ಬುಕ್‌ಮಾರ್ಕ್ ಮಾಡುವುದು. ಈ ಫೀಚರ್‌ ಕ್ರೋಮ್ ನೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗಮನಿಸಿ.

25MB ಗಾತ್ರದ ಫೈಲ್ ಸೆಂಡ್ ಮಾಡಬಹುದು;

ಜಿ ಮೇಲ್ ಪೂರ್ವನಿಯೋಜಿತವಾಗಿ ಬಳಕೆದಾರರಿಗೆ 25MB ಗಾತ್ರದ ಫೈಲ್ ಅಟ್ಯಾಚ್ ಮಾಡಿ ಕಳುಹಿಸಲು ಅನುಮತಿಸುತ್ತದೆ. ಆದಾಗ್ಯೂ, ಬಳಕೆದಾರರು ದೊಡ್ಡ ಗಾತ್ರದ ಫೈಲ್‌ಗಳನ್ನು ಅಟ್ಯಾಚ್ ಮಾಡಿ ಸೆಂಡ್ ಮಾಡಬಹುದಾಗಿದೆ. ಇದಕ್ಕಾಗಿ ಗೂಗಲ್ ಡ್ರೈವ್ ಬಳಕೆ ಮಾಡಬಹುದು.

ಗೂಗಲ್‌ ಟ್ರಾನ್ಸ್‌ಲೇಟ್ ಮಾಡುವ ಆಯ್ಕೆ;

ಬಳಕೆದಾರರು ಜಿ-ಮೇಲ್ ಖಾತೆಯಲ್ಲಿಯೇ ಗೂಗಲ್‌ ಟ್ರಾನ್ಸ್‌ಲೇಟ್ ಬಳಕೆ ಮಾಡಬಹುದಾಗಿದೆ. ಈ ಆಯ್ಕೆಯು ಬಳಕೆದಾರರಿಗೆ ಸಂಪೂರ್ಣ ಇ-ಮೇಲ್ ಅನ್ನು ಆದ್ಯತೆಯ ಭಾಷೆಗೆ ಭಾಷಾಂತರಿಸಲು ಅನುಮತಿಸುತ್ತದೆ. ಈ ಆಯ್ಕೆ ಸೆಟ್ ಮಾಡಲು ಬಳಕೆದಾರರು ಮೊದಲು ಟ್ರಾನ್ಸ್‌ಲೇಟ್ ಮಾಡ ಬಯಸುವ ಇಮೇಲ್ ಅನ್ನು ತೆರೆಯಬೇಕು.> ನಂತರ ಪುಟದ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ > ಟ್ರಾನ್ಸ್‌ಲೇಟ್ ಮಾಡುವ ಮೆಸೆಜ್‌ ಆಯ್ಕೆಯನ್ನು ಆರಿಸಿ > ಮೇಲ್ ಬಾಡಿ ಮೇಲ್ಭಾಗದಲ್ಲಿ ಹೊಸ ಬಾರ್ ಕಾಣಿಸಿಕೊಳ್ಳುತ್ತದೆ. ಆಗ ಟ್ರಾನ್ಸ್‌ಲೇಟ್ ಮಾಡ ಬಯಸುವ ನಿಮ್ಮ ಆಯ್ಕೆಯ ಭಾಷೆಯನ್ನು ಸೆಲೆಕ್ಟ್ ಮಾಡಬಹುದು.

ಬೇಗನೆ ಮೇಲ್ ಹುಡುಕಲು ಲೇಬಲ್‌ ಆಯ್ಕೆ;

ಜಿ ಮೇಲ್‌ನಲ್ಲಿ ಬಳಕೆದಾರರು ಸುಲಭ ಕೆಲಸದ ಅನುಕೂಲಕ್ಕಾಗಿ ಮೇಲ್‌ಗಳಿಗೆ ಲೇಬಲ್ ರಚಿಸಬಹುದಾಗಿದೆ. ಲೇಬಲ್ ರಚಿಸುವುದರಿಂದ ಇನ್‌ಬಾಕ್ಸ್‌ನಲ್ಲಿ ಅಗತ್ಯ ಮೇಲ್‌ಗಳನ್ನು ಬೇಗನೆ ಹುಡುಕಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕ್ರೇಜಿ ನಾಣಿ | Sujay Shastry | New year Special Interview | NONDA NAANI | Speed News Kannada |

Thu Dec 30 , 2021
ಕ್ರೇಜಿ ನಾಣಿ | Sujay Shastry | New year Special Interview | NONDA NAANI | Speed News Kannada | Please follow and like us:

Advertisement

Wordpress Social Share Plugin powered by Ultimatelysocial