ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ: ವಾಸ್ತವ್ಯ ಪ್ರಮಾಣ ಪತ್ರ ಇಲ್ಲದವರಿಗೂ ವಿದ್ಯುತ್ ಸಂಪರ್ಕ

ಬೆಂಗಳೂರು: ವಾಸ್ತವ್ಯ ಪ್ರಮಾಣ ಪತ್ರ ಇಲ್ಲದ ಕಾರಣಕ್ಕೆ ವಿದ್ಯುತ್ ಸಂಪರ್ಕ ನಿರಾಕರಿಸಲ್ಪಟ್ಟಿದ್ದ ಬೆಂಗಳೂರಿನ ನಾಗರಿಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಓಸಿ‌ ಇಲ್ಲದವರಿಗೂ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ಮುಂದಾಗಿದ್ದು, ಸುಮಾರು ಐದು ಲಕ್ಷ ಜನರ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ನಿರ್ಧಾರ ಮಾಡಿದೆ.

ನಿರ್ಮಾಣ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ಮನೆ, ವಸತಿ ಸಮುಚ್ಚಯಗಳಿಗೆ ಬಿಬಿಎಂಪಿಯಿಂದ ವಾಸ್ತವ್ಯ ಪ್ರಮಾಣ ಪತ್ರ ನಿರಾಕರಿಸಿದ್ದರೆ ಅಂತಹ ಮನೆ ಹಾಗೂ ಫ್ಲ್ಯಾಟ್​ಗಳಿಗೆ ನಿರಾಕರಿಸಲ್ಪಟ್ಟಿದ್ದ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ.

ವಿದ್ಯುತ್ ಸಂಪರ್ಕ ನೀಡದಂತೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅಂದಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಆದೇಶ ನೀಡಿದ್ದರು. ಕೆಲವು ದಿನಗಳ ಹಿಂದೆ‌ ಇಂಧನ ಸಚಿವ‌ ಸುನೀಲ್ ಕುಮಾರ್ ಭೇಟಿ ಮಾಡಿ, ನಿಯಮ‌ ಬದಲಾವಣೆ ಮಾಡುವಂತೆ ಮನವಿ ಸಲ್ಲಿಸಿದ್ದರು. ಬೆಂಗಳೂರಿನ ಬಿಜೆಪಿ ಶಾಸಕರು, ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಇಂಧನ ಸಚಿವ ಸುನೀಲ್ ಕುಮಾರ್ ಚರ್ಚೆ ನಡೆಸಿದ್ದರು. ವಾಸ್ತವ್ಯ ಪ್ರಮಾಣ ಪತ್ರ ಇಲ್ಲದೇ‌ ಇರುವವರಿಗೂ ವಿದ್ಯುತ್ ಸಂಪರ್ಕ ನೀಡುವ ಪ್ರಸ್ತಾಪಕ್ಕೆ ಸಿಎಂ ಒಪ್ಪಿಗೆ ನೀಡಿದ್ದಾರೆ. ನಿನ್ನೆ ಸಂಬಂಧಪಟ್ಟ ಕಡತ ಕೆಇಆರ್​ಸಿಗೆ ರವಾನೆ ಮಾಡಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರದ ಅಧಿಕೃತ ಆದೇಶ ಹೊರಬೀಳಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಶ್ಮೀರ ಫೈಲ್ಸ್, ವಿವೇಕ್ ಅಗ್ನಿಹೋತ್ರಿಯನ್ನು ಟ್ರೋಲ್ ಮಾಡಿದ್ದಕ್ಕಾಗಿ ಟ್ವಿಟರ್ ಕುನಾಲ್ ಕಮ್ರಾ ಅವರನ್ನು ನಾಶಪಡಿಸಿದೆ!!

Thu Mar 24 , 2022
ವಿವೇಕ್ ಅಗ್ನಿಹೋತ್ರಿ ಅವರ ಕಾಶ್ಮೀರ ಫೈಲ್ಸ್ ಕೇವಲ 200 ಕೋಟಿ ರೂ, ಮತ್ತು ಎಣಿಕೆ, ಗಲ್ಲಾಪೆಟ್ಟಿಗೆಯಲ್ಲಿ. ಈ ಚಿತ್ರವು ಕೇವಲ ವಾಣಿಜ್ಯಿಕ ಯಶಸ್ಸನ್ನು ಪಡೆದಿದೆ ಆದರೆ ವಿಮರ್ಶಾತ್ಮಕವಾಗಿಯೂ ಮೆಚ್ಚುಗೆ ಪಡೆದಿದೆ. ದಿ ಕಾಶ್ಮೀರ್ ಫೈಲ್ಸ್ ನಿಧಾನವಾಗುತ್ತಿಲ್ಲವಾದರೂ, ಚಲನಚಿತ್ರದಿಂದ ಬಂದ ಲಾಭವನ್ನು ದೇಣಿಗೆ ನೀಡಬೇಕು ಎಂದು ಹಲವರು ಸೂಚಿಸಿದ್ದಾರೆ. ಹಾಸ್ಯನಟ ಕುನಾಲ್ ಕಮ್ರಾ ಅವರು ಬ್ಯಾಂಡ್‌ವ್ಯಾಗನ್‌ಗೆ ಹಾರಿದ್ದಾರೆ ಮತ್ತು ಟ್ವಿಟರ್‌ನಲ್ಲಿ ಇದೇ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆದಾಗ್ಯೂ, ಅವರು ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ […]

Advertisement

Wordpress Social Share Plugin powered by Ultimatelysocial