ಗುಡ್ ನ್ಯೂಸ್ ಇಂಡಿಯಾ- ಮುಂದಿನ ವರ್ಷ ಭಾರತದಲ್ಲಿ 5 G ಇಂಟರ್ ನೆಟ್ ಸೇವೆ ಆರಂಭ: DOT ಘೋಷಣೆ

ಗುಡ್ ನ್ಯೂಸ್ ಇಂಡಿಯಾ- ಮುಂದಿನ ವರ್ಷ ಭಾರತದಲ್ಲಿ 5 G ಇಂಟರ್ ನೆಟ್ ಸೇವೆ ಆರಂಭ: DOT ಘೋಷಣೆ

ನವದೆಹಲಿ ಭಾರತದಲ್ಲಿ ಸದ್ಯ 4G ನೆಟ್​ವರ್ಕ್ ಸಂಪರ್ಕ ಸೇವೆ ಲಭ್ಯವಿದೆ. 2022ರಲ್ಲಿ ಭಾರತ ಒಂದು ಹೆಜ್ಜೆ ಮುಂದೆ ಹೋಗಲಿದೆ. ಭಾರತದಲ್ಲಿ ಮುಂದಿನ ವರ್ಷವೇ 5ಜಿ ಸಂಪರ್ಕ ಸೇವೆ ಆರಂಭವಾಗಲಿದೆ. 5ಜಿ ಸಂಪರ್ಕ ಸೇವೆಯಿಂದ ವೇಗದ ಇಂಟರ್ ನೆಟ್ ಸಂಪರ್ಕ ಸಾಧ್ಯವಾಗಲಿದೆ.

ದೇಶದ ಆರೋಗ್ಯ, ದೂರಸಂಪರ್ಕ, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ 5ಜಿ ಸಂಪರ್ಕ ಸೇವೆಯಿಂದ ಸಾಧ್ಯವಾಗುವ ನಿರೀಕ್ಷೆ ಇದೆ. ಆದರೆ, 5ಜಿ ಸಂಪರ್ಕ ಸೇವೆಯನ್ನು ಮೊದಲಿಗೆ ಎಲ್ಲೆಲ್ಲಿ ಆರಂಭಿಸಲಾಗುತ್ತದೆ ಎನ್ನುವುದರ ಮಾಹಿತಿಯನ್ನು ಈಗ ಕೇಂದ್ರ ಸರ್ಕಾರ ಅಧಿಕೃತವಾಗಿ ನೀಡಿದೆ.

ನಮ್ಮ ಭಾರತದಲ್ಲಿ ಮುಂದಿನ ವರ್ಷವೇ 5G ನೆಟ್​ವರ್ಕ್ ಸಂಪರ್ಕ ಸೇವೆ ಆರಂಭವಾಗುತ್ತದೆ. ಆದರೆ, ದೇಶದ ಎಲ್ಲ ಭಾಗದಲ್ಲೂ ಏಕಕಾಲಕ್ಕೆ 5ಜಿ ನೆಟ್​ವರ್ಕ್ ಸಂಪರ್ಕ ಸೇವೆ ಸಿಗಲ್ಲ. ಆಯ್ದ ಮಹಾನಗರಗಳಲ್ಲಿ ಪ್ರಾರಂಭದಲ್ಲಿ 5ಜಿ ನೆಟ್​ವರ್ಕ್ ಸೇವೆ ನೀಡಲಾಗುತ್ತದೆ. ಗುರುಗ್ರಾಂ, ಬೆಂಗಳೂರು, ಕೊಲ್ಕತ್ತಾ, ಮುಂಬೈ, ದೆಹಲಿ, ಅಹಮದಾಬಾದ್, ಹೈದರಾಬಾದ್ ಮತ್ತು ಪುಣೆ ಸೇರಿದಂತೆ ಮಹಾನಗರಗಳು ಮತ್ತು ದೊಡ್ಡ ನಗರಗಳು ಮುಂದಿನ ವರ್ಷ 5G ಸೇವೆಗಳನ್ನು ಪಡೆಯುವ ಮೊದಲ ಸ್ಥಳಗಳಾಗಿವೆ ಎಂದು ದೂರಸಂಪರ್ಕ ಇಲಾಖೆ (DoT) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗವಕಾಶ: ತಿಂಗಳಿಗೆ 33 ಸಾವಿರದಿಂದ 63 ಸಾವಿರದವರೆಗೆ ವೇತನ

Wed Dec 29 , 2021
ಬೆಂಗಳೂರು :ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗಗಳು ಖಾಲಿ ಇದ್ದು, ಕೆಲಸಗಳ ಭರ್ತಿಗಾಗಿ ಮೆಟ್ರೋ ನಿಗಮ ಅರ್ಜಿ ಆಹ್ವಾನಿಸಿದೆ. 5 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಸ್ಟೇಷನ್ ಕಂಟ್ರೋಲರ್, ಟ್ರೇನ್ ಆಪರೇಟರ್ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಹೀಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಇನ್ನೂ ಅರ್ಜಿ ಸಲ್ಲಿಸಲು 2022 ರ ಜನವರಿ 10 ಕೊನೆಯ ದಿ ನಾಂಕವಾಗಿದ್ದು, […]

Advertisement

Wordpress Social Share Plugin powered by Ultimatelysocial