ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ಜಾತಿ ನಿಂದನೆ ಪ್ರಕರಣ!

ಕೊರಟಗೆರೆ: ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ ಮುಖ್ಯದ್ವಾರದಿಂದ ಬನ್ನಿ… ಹೊರ ಹೋಗುವ ದ್ವಾರದಿಂದ ಬರಬೇಡಿ ಎನ್ನುವ ವಿವಾದದಿಂದ ಆರಂಭವಾದ ಜಗಳ ಠಾಣೆ ಮೆಟ್ಟಿಲೇರಿ ಜಾತಿ ನಿಂದನೆ ಪ್ರಕರಣ ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ದೇವಾಲಯದ ಸಿಬ್ಬಂದಿ ನಮ್ಮ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ವ್ಯಾಪಾರಿ ದಲಿತೆ ಸರೋಜಮ್ಮ ಎಂಬುವವರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೇ 8 ರಂದು ದೇವಾಲಯ ಆವರಣ ಮತ್ತು ಮಹಾಲಕ್ಷ್ಮೀ ಚಾರಿಟಬಲ್​ ಟ್ರಸ್ಟ್​ ಕಚೇರಿಯಲ್ಲಿ ಮಹಿಳೆ ಜಗಳ ತೆಗೆದ ಕಾರಣ ಮಹಿಳೆ ಹಾಗೂ ಆಕೆಯ ಸಂಬಂಧಿಕರ ವಿರುದ್ಧ ಟ್ರಸ್ಟ್​ ಸಿಬ್ಬಂದಿ ಅಶ್ವತ್ಥನಾರಾಯಣ ಸಹ ದೂರು ದಾಖಲಿಸಿದ್ದಾರೆ. ಡಿವೈಎಸ್ಪಿ ಕೆ.ಜಿ.ರಾಮಕೃಷ್ಣ , ಸಿಪಿಐ ಸಿದ್ದರಾಮೇಶ್ವರ ಸ್ಥಳ ಪರಿಶೀಲಿಸಿದ್ದು, ತನಿಖೆ ಮುಂದುವರಿದಿದೆ.

ಟ್ರಸ್ಟ್​ನ ನೌಕರ ಅಶ್ವತ್ಥನಾರಾಯಣ ನನ್ನ ಮೇಲೆ ಹಲ್ಲೆ ನಡೆಸಿ ಮಾಂಗಲ್ಯ ಸರ ಕಿತ್ತುಹಾಕಿ ಜಾತಿನಿಂದನೆ ಮಾಡಿದ್ದಾನೆ. ಆದ್ದರಿಂದ ಆತನ ವಿರುದ್ಧ ಜಾತಿ ನಿಂದನೆ ದೂರು ದಾಖಲಿಸಿದ್ದೇನೆ. ಸ್ಥಳೀಯರಾದ ನಮಗೆ ದೇವಾಲಯದಲ್ಲಿ ದಲಿತರು ಎಂದು ರ್ನಿಲಕ್ಷ್ಯ ಮಾಡುತ್ತಾ, ವ್ಯಾಪಾರ ನಡೆಸಲು ತೊಂದರೆ ನೀಡುತ್ತಾರೆ.
|ಸರೋಜಮ್ಮ ಜಾತಿನಿಂದನೆ ದೂರು ದಾಖಲಿಸಿರುವ ವ್ಯಾಪಾರಿ, ಗೊರವನಹಳ್ಳಿ

ಟ್ರಸ್ಟ್​ ನಿಯಮದ ಪ್ರಕಾರ ನಮ್ಮ ನೌಕರ ಕರ್ತವ್ಯ ನಿರ್ವಹಿಸಿದ್ದಾರೆ, ಮುಖ್ಯದ್ವಾರದ ಮೂಲಕ ದೇವಾಲಯ ಪ್ರವೇಶ ಪಡೆಯುವಂತೆ ಸೂಚಿಸಿದ್ದಾರೆ. ಆದರೆ ಸರೋಜಮ್ಮ ತಮ್ಮ ಬೆಂಬಲಿಗರನ್ನು ಹೊರಹೋಗುವ ದ್ವಾರದಿಂದ ದೇವಾಲಯ ಪ್ರವೇಶಿಸಲು ಅವಕಾಶ ಕಲ್ಪಿಸಿಕೊಂಡು ದಬ್ಬಾಳಿಕೆ ನಡೆಸಿದ್ದಾರೆ. ನಂತರ ಟ್ರಸ್ಟ್​ ಕಚೇರಿಗೆ ಬಂದು, ಜಗಳ ಮಾಡಿದ್ದಾರೆ.
|ಅಶ್ವತ್ಥನಾರಾಯಣ ಮಹಾಲಕ್ಷ್ಮೀ ಚಾರಿಟಬಲ್​ ಟ್ರಸ್ಟ್​ ನೌಕರ

ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿ, ಸಾಕ್ಷ್ಯಧಾರಗಳನ್ನು ಸಂಗ್ರಹ ಮಾಡಿದ್ದೇವೆ. ಸಿಸಿಟಿವಿ ದಾಖಲಾತಿ, ಪ್ರತ್ಯಕ್ಷದರ್ಶಿಗಳ ಹೇಳಿಕೆ, ಎಲ್ಲವನ್ನು ಮೇ 11ರಂದು ದಾಖಲು ಮಾಡಿಕೊಂಡಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಜಾತಿನಿಂದನೆ ಪ್ರಕರಣ ಆಗಿರುವುದರಿಂದ,

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಸ್ಲಿಮರು ಜ್ಞಾನವಾಪಿ ಸಮೀಕ್ಷೆ ಕಾನೂನನ್ನು ಗೌರವಿಸುವ ನಿರೀಕ್ಷೆಯಿದೆ:

Tue May 17 , 2022
ಬೆಂಗಳೂರು: ಕಾಶಿ ವಿಶ್ವನಾಥ ಮಂದಿರದ ಸಮೀಪದಲ್ಲಿ ಇರುವ ಜ್ಞಾನವಾಪಿ ಮಸೀದಿಯಲ್ಲಿನ ಸಮೀಕ್ಷೆ ಪ್ರಕರಣಕ್ಕೆ ಸಂಬಂಧಿಸಿ, ‘ಮುಸ್ಲಿಮರು ಆ ಕಾನೂನನ್ನು ಗೌರವಿಸುತ್ತಾರೆ ಎಂದು ನಾವು ನಿರೀಕ್ಷಿಸಿದ್ದೇವೆ’ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ. ‘ಮುಸ್ಲಿಂ ಲೀಗ್‌ನ ಮಾತೃಭೂಮಿಯ ಆಶಯದಂತೆ ಭಾರತವು ವಿಭಜನೆಗೊಂಡಿದೆ. ಭಾರತದಲ್ಲೇ ಉಳಿದ ಮುಸ್ಲಿಮರು ಸಂವಿಧಾನವನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಕಾನೂನು ಹಿಂದೂ ಪರವಾಗಿದ್ದರೆ ಜ್ಞಾನವಾಪಿ ಪ್ರದೇಶವನ್ನು ಹಿಂದೂಗಳಿಗೆ ಮರಳಿ ನೀಡಬೇಕು, ಮುಸ್ಲಿಮರು ಆ ಕಾನೂನನ್ನು ಗೌರವಿಸುತ್ತಾರೆ ಎಂದು […]

Advertisement

Wordpress Social Share Plugin powered by Ultimatelysocial