ಗೋಶಾಲೆಗಳು ಕಾಗದದಲ್ಲಿ ಮಾತ್ರ ಇದ್ದಂತಿದೆ: ಹೈಕೋರ್ಟ್‌

ಬೆಂಗಳೂರು: ಸರಕಾರದ ಗೋಶಾಲೆಗಳು ಕೇವಲ ಕಾಗದದ ಮೇಲೆ ಇದ್ದಂತಿದೆ ಎಂದು ಹೈಕೋರ್ಟ್‌ ತೀಕ್ಷ್ಣವಾಗಿ ಹೇಳಿದೆ.ರಾಜ್ಯದ ಪ್ರತಿ ತಾಲೂಕಿನಲ್ಲಿ ಗೋಶಾಲೆ ಆರಂಭಿಸಬೇಕು ಮತ್ತು ಈಗಿರುವ ಗೋಶಾಲೆಗಳಿಗೆ ಸೂಕ್ತ ಪ್ರಮಾಣದಲ್ಲಿ ಮೇವು, ನೀರು ಮತ್ತು ಜಾಗ ಒದಗಿಸಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾ| ರಿತುರಾಜ್‌ ಅವಸ್ಥಿ ಹಾಗೂ ನ್ಯಾ| ಎಸ್‌.ಆರ್‌.ಕೃಷ್ಣಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.ಗೋಶಾಲೆ ನಿರ್ಮಾಣಕ್ಕೆ ಪ್ರತಿ ಜಿಲ್ಲೆಯಲ್ಲೂ ಸ್ಥಳ ಗುರುತಿಸಲಾಗಿದೆ. ಬಜೆಟ್‌ನಲ್ಲಿ ಹಣ ಸಹ ಮಂಜೂರು ಮಾಡಲಾಗಿದೆ ಎಂದು ಸರಕಾರದ ಪರ ವಕೀಲರು ತಿಳಿಸಿದರು. ಆಗ ಎಲ್ಲೆಲ್ಲಿ, ಎಷ್ಟು ಗೋಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ನ್ಯಾಯಪೀಠ ಪ್ರಶ್ನಿಸಿತು. ಅದಕ್ಕೆ ಸರಕಾರದ ಪರ ವಕೀಲರಿಂದ ಸಮರ್ಪಕ ಉತ್ತರ ಬಂದಿಲ್ಲ.ಇದರಿಂದ ಬೇಸರಗೊಂಡ ಮುಖ್ಯ ನ್ಯಾಯಮೂರ್ತಿಗಳು, ನೀವು ಗೋಶಾಲೆ ಎಲ್ಲಿದೆ ಎಂದರೆ ಬರಿ ಜಮೀನು ಗುರುತಿಸಿದ್ದೇವೆ, ಹಣ ಬಿಡುಗಡೆ ಮಾಡಿದ್ದೇವೆ ಎಂದು ಹೇಳುತ್ತೀರಿ. ಎಲ್ಲೆಡೆ ಕಾರ್ಯ ನಿರ್ವಹಿಸುತ್ತಿವೆ, ಎಲ್ಲೆಲ್ಲಿ ನಿರ್ಮಾಣ ಮಾಡುತ್ತಿದ್ದೀರಿ, ಎಲ್ಲಿ ಅಭಿವೃದ್ಧಿಪಡಿಸಿದ್ದೀರಿ ಎಂದರೆ ನಿಮ್ಮ ಬಳಿ ಉತ್ತರವೇ ಇಲ್ಲ. ಹಾಗಾಗಿ, ನಿಮ್ಮ ಗೋಶಾಲೆಯೆಲ್ಲಾ ಬರೀ ಕಾಗದದ ಮೇಲೆ ಇದ್ದಂತಿದೆ’ ಎಂದು ಹೇಳಿದರು.ಸಮರ್ಪಕ ಮಾಹಿತಿ ನೀಡುವಂತೆ ಸರಕಾರಕ್ಕೆ ತಾಕೀತು ಮಾಡಿ ವಿಚಾರಣೆಯನ್ನು ಮುಂದೂಡಲಾಯಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಈಗ 'ಹಲಾಲ್ ಸಮರ': 'ಮುಸ್ಲೀಂ ವರ್ತಕ'ರಿಂದ 'ಮಾಂಸ ಖರೀದಿ'ಸದಂತೆ ಅಭಿಯಾನ

Tue Mar 29 , 2022
ಬೆಂಗಳೂರು: ಯುಗಾದಿ ಹಿಂದೂಗಳಿಗೆ ಹೊಸವರ್ಷ. ಯುಗಾದಿಯ ಸಂದರ್ಭದಲ್ಲಿ ಮಾಂಸಹಾರದ ಅಡುಗೆಯ ಊಟವೇ ಹೊಸತೊಡಕು ಆಚರಣೆ. ಈ ಸಂದರ್ಭದಲ್ಲಿ ಮುಸ್ಲೀಂ ಸಮುದಾಯದ ಮಾಂಸದ ಅಂಗಡಿಯವರು ಮಾಂಸವನ್ನು ಅಲ್ಲಾಗೆ ಅರ್ಪಿಸಿರುತ್ತಾರೆ. ಅವರಿಂದ ಮಾಂಸ ಖರೀದಿಸಬೇಡಿ ಎಂಬುದಾಗಿ ಹಿಜಾಬ್, ವ್ಯಾಪಾರದ ಬಳಿಕ ಈಗ ಹಲಾಲ್ ಸಮರ ಶುರುವಾಗಿದೆ.ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಅಭಿಯಾನವನ್ನೇ ಆರಂಭಿಸಲಾಗಿದೆ. ಮುಸ್ಲೀಂ ಮಾಂಸದ ವ್ಯಾಪಾರಿಗಳು ಕುರಿ, ಕೋಳಿ, ಮೇಕೆಯನ್ನು ಕಡಿಯೋ ಮೊದಲು ಅಲ್ಲಾಗೆ ಅರ್ಪಿಸಿ, ಹಲಾಲ್ ಮಾಡಿರುತ್ತಾರೆ. ಈ […]

Advertisement

Wordpress Social Share Plugin powered by Ultimatelysocial