ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲದಂತೆ ಮಾಡಬೇಕು,

ಬೆಂಗಳೂರು, ಜುಲೈ 04: ಕೊವೀಡ್ ಕಾರಣದಿಂದ ಈಗಾಗಲೇ ಶಿಕ್ಷಣ ಇಲಾಖೆ ಸೈಕಲ್ ವಿತರಣೆಯನ್ನು ನಿಲ್ಲಿಸಿದೆ. ಸಮವಸ್ತ್ರವನ್ನು ವಿತರಣೆಯನ್ನು ಮಾಡಿದ್ದರೂ ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ವಿತರಿಸುವ ಯೋಜನೆಯನ್ನೂ ನಿಲ್ಲಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲದಂತೆ ಮಾಡಬೇಕು, ಸರ್ಕಾರಿ ಶಾಲೆಗಳಲ್ಲಿಯು ಸಮವಸ್ತ್ರದ ಜೊತೆ ಮಕ್ಕಳಿಗೆ ಟೈ, ಬೆಲ್ಟ್, ಶೂ, ಮತ್ತು ಸಾಕ್ಸ್ ನೀಡಿ ಕನ್ವೆೆಂಟ್‌ಗಳಿಗೆ ಹೋವುವಂತೆ ಮಕ್ಕಳನ್ನು ರೆಡಿ ಮಾಡಿ ಶಾಲೆಗೆ ಕಳುಹಿಸಬೇಕೆಂದು ಸರ್ಕಾರ ಸಾರಿ ಸಾರಿ ಹೇಳುತ್ತದೆ. ಆದರೆ ಶಿಕ್ಷಣ ಇಲಾಖೆಯ ಅನುದಾನಗಳು ಪೋಲಾಗುತ್ತಿರುವ ಕಾರಣ ಮಕ್ಕಳಿಗೆ ಸಿಗಬೇಕಿದ್ದ ಶೂ ಮತ್ತು ಸಾಕ್ಸ್ ವಿತರಣೆಗೆ ಈ ವರ್ಷ ತಿಲಾಂಜಲಿ ಬೀಳುವ ಸಾಧ್ಯತೆ ನಿಚ್ಚಳವಾಗಿದೆ.

ಮಕ್ಕಳಿಗೆ ಶೂ ಮತ್ತು ಸಾಕ್ಸ್‌ಗಳಿಗಿಂತ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಮುಂದಿರುವ ಬಹು ಮುಖ್ಯವಾದ ಯೋಜನೆ ಎಂದು ಹೇಳಲಾಗುತ್ತದೆ. ಆದರೆ ಮಕ್ಕಳಿಗೆ ಸಮವಸ್ತ್ರವನ್ನು ವಿಧಿಸುವ ಉದ್ದೇಶವೇ ಮಕ್ಕಳಲ್ಲಿ ಬೇಧ ಬಾವವಿಲ್ಲದಂತೆ ಮಾಡುವುದಾಗಿದೆ. ಕೆಲವು ಮಕ್ಕಳು ಶೂ ಮತ್ತು ಸಾಕ್ಸ್ ಧರಿಸಿಕೊಂಡು ಬರುತ್ತಿದ್ದರೇ ಕೆಲವು ಮಕ್ಕಳು ಚಪ್ಪಲಿ ಧರಿಸಿಕೊಂಡು ಬರುತ್ತಿದ್ದಾರೆ. ಇದರಿಂದ ಸಮವಸ್ತ್ರದ ಆಶಯವೇ ಬಿದ್ದು ಹೋದಂತಾಗುತ್ತದೆ.

ಉತ್ತಮ ಶಿಕ್ಷಣವೇ ನಮ್ಮ ಆದ್ಯತೆ ಎಂದ ಶಿಕ್ಷಣ ಇಲಾಖೆ
ಶಿಕ್ಷಣ ಇಲಾಖೆ ಕೋವಿಡ್ ಹೆಸರಲ್ಲಿ ಒಂದೊಂದೇ ಮಹತ್ವಕಾಂಕ್ಷೆ ಯೋಜನೆಗೆ ಪಂಗನಾಮ ಹಾಕುವುದಕ್ಕೆ ಮುಂದಾಗುತ್ತಿದೆ. ಈಗಾಗಲೇ ಸರ್ಕಾರಿ ಶಾಲಾ ಮಕ್ಕಳಿಗೆ ಸೈಕಲ್ ಶಾಕ್ ಕೊಟ್ಟಿದ್ದ ರಾಜ್ಯ ಸರ್ಕಾರ ಈಗ ಮತ್ತೊಂದು ಶಾಕ್ ಕೊಟ್ಟಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿದ್ದ ಶೂ ಮತ್ತು ಸಾಕ್ಸ್ ಈ ವರ್ಷ ಕೊಡುವುದಿಲ್ಲ ಎಂದಿದ್ದಾರೆ.

ಶೂ ಸಾಕ್ಸ್ ವಿತರಣೆಗೆ ಇಲಾಖೆ ಸಿದ್ದವಿಲ್ಲ

ಕಳೆದ ಎರಡು ವರ್ಷದಿಂದ ಕೋವಿಡ್ ಕಾರಣದಿಂದ ಮನೆಯಲ್ಲೇ ಪಾಠಗಳು ನಡೆದಿದ್ದವು. ಈ ಬಾರಿ ಶಾಲೆ ಆರಂಭವಾದರೂ ಕೂಡ ಶೂ ಸಾಕ್ಸ್ ಕೊಡಲು ಇಲಾಖೆ ಸಿದ್ಧವಾಗಿಲ್ಲ . ಈ ಬಗ್ಗೆ ಇಲಾಖೆಯನ್ನು ಪ್ರಶ್ನೆ ಮಾಡಿದರೆ ಕೋವಿಡ್ ಕಾರಣದಿಂದ ದೇಶ ಲರ್ನಿಂಗ್ ಲಾಸ್ ನಲ್ಲಿದೆ. ಗುಣಮಟ್ಟದ ಶಿಕ್ಷಣವನ್ನು ಕೊಡುವುದು ನಮ್ಮ ಪ್ರಮುಖ ಆದ್ಯತೆ ಎಂದು ತಿಳಿಸುವ ಮೂಲಕ ಶೂ ಹಾಗೂ ಸಾಕ್ಸ್ ಯೋಜನೆಗೆ ಬಾಯ್ ಬಾಯ್ ಅಂತ ಪರೋಕ್ಷವಾಗಿ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ತಿಳಿಸಿದ್ದಾರೆ.

ಮೂರು ವರ್ಷದಿಂದ ಶೂ , ಸಾಕ್ಸ್ ವಿತರಣೆಯಿಲ್ಲ16ರಲ್ಲಿ ಪ್ರಾರಂಭವಾಗಿದ್ದ ಯೋಜನೆ

ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಶೂ ಮತ್ತು ಸಾಕ್ಸ್ ವಿತರಣೆಗೆ ಈ ವರ್ಷ ಸರ್ಕಾರ ಹಣವನ್ನು ಮೀಸಲಿಟ್ಟಿಲ್ಲ. ಸರ್ಕಾರಿ ಶಾಲೆಗ ಸೇರುವ 1 ರಿಂದ 10ನೇ ತರಗತಿ ವರೆಗಿನ ಬಡ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಹಾಗೂ ಖಾಸಗಿ ಶಾಲೆಗಳೊಂದಿಗೆ ಸ್ಪರ್ಧೆ ಮಾಡಲು ರಾಜ್ಯ ಸರ್ಕಾರ ಪ್ರತಿ ವಿದ್ಯಾರ್ಥಿಗೆ ಒಂದು ಜೊತೆ ಶೂ ಮತ್ತು 2 ಎರಡು ಜೊತೆ ಸಾಕ್ಸ್ ನೀಡುವ ಯೋಜನೆ 2016ರಲ್ಲಿ ಜಾರಿ ಮಾಡಲಾಗಿತ್ತು. 2019-20ನೇ ಸಾಲಿನ ಕೊನೆದಾಗಿ ಸರ್ಕಾರ ಈ ಯೋಜನೆಗೆ ಹಣ ಬಿಡುಗಡೆ ಮಾಡಿತ್ತು. 2020-21, 2021-22 ಮತ್ತು ಈ ವರ್ಷ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಭಾಗ್ಯವೇ ಇಲ್ಲದಂತೆ ಆಗಿದೆ.

60-70 ಲಕ್ಷ ಮಕ್ಕಳಿಗಿಲ್ಲ ಶೂ, ಸಾಕ್ಸ್

ಸರ್ಕಾರಿ ಶಾಲೆಗಳಲ್ಲಿ ಸುಮಾರು 60-70 ಲಕ್ಷ ಮಕ್ಕಳು ಈ ಯೋಜನೆಯ ಫಲಾನುಭವಿಗಳು. 1-5ನೇ ತರಗತಿಗೆ 225 ರೂ. 6-8ನೇ ತರಗತಿಗೆ 250 ರೂ. ಮತ್ತು 9-10 ನೇ ತರಗತಿ ವಿದ್ಯಾರ್ಥಿಗಳಿಗೆ 275 ರೂ. ನಂತೆ ಶೂಗೆ ದರ ನಿಗದಿ ಮಾಡಲಾಗಿದೆ. ಆದರೆ ಇದಕ್ಕೆ ಈಗ ಆರ್ಥಿಕ ಕಾರಣ ಎಂದು ಸರ್ಕಾರ ಉತ್ತರಿಸುತ್ತಿದೆ. ಇದೇ ಹಣವನ್ನು ಶಿಕ್ಷಣದ ಗುಣಮಟ್ಟಕ್ಕೆ ಉಪಯೋಗಿಸಲಾಗುತ್ತದೆ ಎಂದು ಹೇಳಿದೆ. ಆದರೆ ಈ ಯೋಜನೆ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತದೆ ಎಂಬುವುದು ತಿಳಿದುಬಂದಿಲ್ಲ. ಪಠ್ಯಪುಸ್ತಕದ ವಿವಾದದಿಂದಲೇ ಶಿಕ್ಷಣ ಇಲಾಖೆ ಈ ವರ್ಷ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಪಠ್ಯಪುಸ್ತಕ ವಿವಾದ ಮುಗಿಯುತ್ತಿದ್ದಂತೆ ಶಾಲೆಗಳಲ್ಲಿನ ಮೂಲಭೂತ ಸೌಲಭ್ಯ ಮತ್ತು ಇತರ ಯೋಜನೆಗಳ ವಿಚಾರ ಮುನ್ನೆಲೆಗೆ ಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನರ ಜೀವನವನ್ನು ಸುಲಭಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Mon Jul 4 , 2022
ಹೈದರಾಬಾದ್: ಕೇಂದ್ರದ ಎನ್‌ಡಿಎ ಸರ್ಕಾರವು ಕಳೆದ ಎಂಟು ವರ್ಷಗಳಲ್ಲಿ ಪ್ರತಿಯೊಬ್ಬ ಭಾರತೀಯನ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಮತ್ತು ಜನರ ಜೀವನವನ್ನು ಸುಲಭಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹೈದರಾಬಾದ್ ನ ಪರೇಡ್ ಮೈದಾನದಲ್ಲಿ ‘ವಿಜಯ್ ಸಂಕಲ್ಪ ಸಭೆ’ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತೆಲಂಗಾಣ ಜನತೆ ಡಬಲ್ ಎಂಜಿನ್ ಬೆಳವಣಿಗೆಗಾಗಿ ಹಾತೊರೆಯುತ್ತಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅದನ್ನು ಈಡೇರಿಸಲಾಗುವುದು ಎಂದು ನೆರೆದಿದ್ದ […]

Advertisement

Wordpress Social Share Plugin powered by Ultimatelysocial