1-10ನೇ ತರಗತಿ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ

ಶಿಕ್ಷಣ ಇಲಾಖೆ ಆದೇಶಕಳೆದ 5 ತಿಂಗಳ ಆಹಾರ ಧಾನ್ಯ ವಿತರಣೆ

ಕೋವಿಡ್ 19 ಹರಡದಂತೆ ತಡೆಗಟ್ಟುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಶಾಲೆಗಳನ್ನು ಆರಂಭಿಸಲಿಲ್ಲ. ಜೂನ್ನಿಂದ ಅಕ್ಟೋಬರ್ ತಿಂಗಳಲ್ಲಿ ಶಾಲೆಗಳನ್ನು ಮುಚ್ಚಿರುವುದರಿಂದ ವಿದ್ಯಾರ್ಥಿಗಳಿಗೆ ಅಗತ್ಯ ಪೌಷ್ಟಿಕಾಂಶ ಒದಗಿಸಲು ಮಧ್ಯಾಹ್ನದ ಬಿಸಿಯೂಟದ ಬದಲಾಗಿ ಆಹಾರ ಧಾನ್ಯಗಳನ್ನು ನೀಡಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.

ಸಾರ್ವತ್ರಿಕ ರಜೆ ಹೊರತುಪಡಿಸಿ ಐದು ತಿಂಗಳಲ್ಲಿ 108 ದಿನಗಳ ಆಹಾರ ಸಾಮಗ್ರಿಗಳನ್ನು 1ರಿಂದ 10ನೇ ತರಗತಿ ಮಕ್ಕಳಿಗೆ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಜೂನ್ ಹಾಗೂ ಜುಲೈ ತಿಂಗಳ 55 ದಿನಗಳ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತದೆ. ಎರಡನೇ ಹಂತದಲ್ಲಿ ಆಗಸ್ಟ್, ಸೆಪ್ಟೆಂಬರ್ ಹಾಗೂ ಆಕ್ಟೋಬರ್ ತಿಂಗಳ 55 ದಿನಗಳ ಆಹಾರ ಧಾನ್ಯ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಮಕ್ಕಳಿಗೆ ಆಹಾರ ಧಾನ್ಯ ಹಾಗೂ ಪರಿವರ್ತನಾ ವೆಚ್ಚದ ಬದಲಿಗೆ ತೊಗರಿಬೇಳೆಯನ್ನು ನೀಡಲಾಗುತ್ತದೆ. ಈಗಾಗಲೇ ಕೆಎಫ್ಸಿಎಸ್ಸಿ ಸಂಸ್ಥೆಗೆ ಜೂನ್ ಮತ್ತು ಜುಲೈ ತಿಂಗಳ 53 ದಿನಗಳಿಗೆ ಆಹಾರ ಧಾನ್ಯಗಳ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಖರೀದಿ ಪ್ರಕ್ರಿಯೆ ಮುಗಿದು ಸರಬರಾಜು ಪ್ರಗತಿಯಲ್ಲಿದೆ. ಸಂಸ್ಥೆಯು ಆಹಾರ ಧಾನ್ಯಗಳನ್ನು ಈಗಾಗಲೇ ಸರಬರಾಜು ಮಾಡಿರುವ ತಾಲೂಕು ಜಿಲ್ಲೆಗಳು ಕೂಡಲೇ ಮಕ್ಕಳಿಗೆ ವಿತರಣೆ ಕಾರ್ಯ ಆರಂಭಿಸಬೇಕು. ಆಹಾರ ಸಾಮಗ್ರಿ ಸರಬರಾಜಾಗದೆ ಇರುವ ತಾಲೂಕು, ಜಿಲ್ಲೆಗಳು ಕೂಡಲೇ ಕೆಎಫ್ಸಿಎಸ್ಸಿ ಸಂಸ್ಥೆಯನ್ನು ಸಂಪರ್ಕಿಸಿ ಆಹಾರ ಧಾನ್ಯ ಪಡೆದುಕೊಂಡ ಕೂಡಲೇ ವಿತರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಕ್ಷಣ ಇಲಾಖೆ ಆದೇಶ ಮಾಡಿದೆ.

ಇದನ್ನ ಓದಿ:ಪಟಾಕಿ ನಿಷೇಧ ಮಾಡುವಂತೆ ಒತ್ತಾಯ

Please follow and like us:

Leave a Reply

Your email address will not be published. Required fields are marked *

Next Post

ಶಂಕರ್ ಸಿನಿಮಾದಲ್ಲಿ ಮಿಂಚಲಿರುವ ರಾಕಿಂಗ್ ಸ್ಟಾರ್..!

Mon Nov 9 , 2020
ಶಂಕರ್ ಸಿನಿಮಾದಲ್ಲಿ ಯಶ್ ನಟನೆ.. ಕೋವಿಡ್ 19 ಕಾರಣದಿಂದಾಗಿ ಸದ್ಯ ಯಾವುದೇ ಸ್ಟಾರ್ ನಟರ ಸಿನಿಮಾಗಳೂ ರಿಲೀಸ್ ಆಗಿಲ್ಲ.. ಆದ್ರೆ ಇತ್ತ ಸಿನಿಪ್ರಿಯರೆಲ್ಲರೂ ಸ್ಟಾರ್ ಕಲಾವಿದರ ಸಿನಿಮಾಗಳಿಗಾಗಿ ಕಾತರದಿಂದ ಎದುರು ನೋಡ್ತಿದ್ದಾರೆ.. ಅದ್ರಲ್ಲೂ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಂತೂ ಕೆಜಿಎಫ್ ಪಾರ್ಟ್ 2 ಸಿನಿಮಾ ನೋಡಲು ತುದೀಗಾಲಲ್ಲಿ ನಿಂತು ವೇಯ್ಟ್ ಮಾಡ್ತಿದ್ದಾರೆ.. ಹೀಗಿರೋವಾಗ ರಾಕಿಂಗ್ ಸ್ಟಾರ್ ಕಡೆಯಿಂದ ಅವರ ಅಭಿಮಾನಿಗಳಿಗೆ ಸರ್ಪ್ರೈಸ್ ಸುದ್ದಿಯೊಂದು ಸಿಕ್ಕಿದೆ.. ಅಷ್ಟಕ್ಕೂ ಆ ಸರ್ಪ್ರೈಸ್ ಸುದ್ದಿ […]

Advertisement

Wordpress Social Share Plugin powered by Ultimatelysocial