ಶಾಲಾ ಕಟ್ಟಡ ಕಳಪೆ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗತೀರ್ಥ ಗ್ರಾಮದ ಸರ್ಕಾರಿ ಶಾಲೆಯ,ದುಸ್ಥಿತಿ.ಜಿಲ್ಲಾ ನಿರ್ಮಿತ ಕೇಂದ್ರ ಇಲಾಖೆಯಿಂದ 2022-23 ನೆ ಸಾಲಿನಲ್ಲಿ ಸುಮಾರು 12 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾ ಕೋಣೆಗಳನ್ನು ನಿರ್ಮಿಸಲಾಗುತ್ತಿದೆ.ಇಲ್ಲಿ ಈ ಕಾಮಗಾರಿಯನ್ನು ನಿರ್ಮಿತ ಕೇಂದ್ರದ ಅಧಿಕಾರಿಗಳೇ ಮಾಡುತ್ತಿದ್ದಾರೆ.ನಿರ್ಮಿತಿ ಕೇಂದ್ರ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ.ಕಟ್ಟಡದ ಕಾಮಗಾರಿಯಲ್ಲಿ ಇಂಜಿನೀಯರರು ಕಬ್ಬಿನ ಬಳಸುವುದನ್ನು ಬಿಟ್ಟು ಕಲ್ಲು ಗುಂಡು,ಮಣ್ಣು, ಪ್ಲಾಸ್ಟಿಕ್ ಚೀಲಗಳನ್ನು ಬಳಸಿದ್ದಾರೆ. ಎಂಬ ಆರೋಪ ಸರಿಯಾಗಿ ಸಿಮೆಂಟ್ ಕಂಕರು ಬಳಸದೆ ಸರಕಾರದ ಬೊಕ್ಕಸಕ್ಕೆ ಕನ್ನ ಹಾಕಿದ್ದಾರೆ.ಇಂತಹ ಬ್ರಷ್ಟ ಅಧಿಕಾರಿಗಳಿಂದ ಸರ್ಕಾರಿ ಕಟ್ಟಡಗಳು ನಿರ್ಮಾಣ ಹಂತದಲ್ಲೆ ಬೀಳುತ್ತಿವೆ.ಈ ಕೂಡಲೆ ಜಿಲ್ಲಾ ಮಟ್ಟದ ಸಂಬಂಧ ಪಟ್ಟ ಅಧಿಕಾರಿಗಳು ಶಾಲೆಗೆ ಬೇಟಿ ಕಳಪೆ ಕಾಮಗಾರಿ ಮಾಡಿದ ಇಂಜಿನಿಯರ್ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಹಾಗೂ ಅಗ್ನಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಸಿದ್ದಪ್ಪ ದೊಡ್ದಮನಿ ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬ್ಯಾನರ್ ತೆರವುಗೊಳಿಸಿದ ಪುರಸಭೆ ಅಧಿಕಾರಿಗಳ ವಿರುದ್ದ ಕಿಸಾನ ಜಾಗೃತಿ ಸಂಘ ಆಕ್ರೋಶ.

Wed Dec 14 , 2022
ಲಕ್ಷ್ಮೇಶ್ವರ ಪುರಸಭೆ ವತಿಯಿಂದ ರಾತ್ರೋರಾತ್ರಿ ಕಿಸಾನ ಜಾಗೃತಿ ಸಂಘದ ಬ್ಯಾನರ್‌ ತೆರವುಗೊಳಿಸಿದಕ್ಕೆ ಪುರಸಭೆಯ ಅಧಿಕಾರಿಗಳ ವಿರುದ್ಧ ಬ್ಯಾನರ್ ಕೊಡುವ ಮೂಲಕ ಕಿಸಾನ ಜಾಗೃತಿ ವಿಕಾಸ ಸಂಘದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮುಂಡರಗಿ ಪಟ್ಟಣದಲ್ಲಿ ಡಿಸೆಂಬರ್ 19 ರಂದು ಸಂಘದ ವತಿಯಿಂದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಡಾ|| ಪುನೀತರಾಜಕುಮಾರ ಸ್ಮರಣಾರ್ಥವಾಗಿ 75 ಜೋಡಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಿನ್ನೆಲೆ ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಸಲಾಗಿತ್ತು.ಪಟ್ಟಣದ ಪಂಪ ಸರ್ಕಲನಲ್ಲಿರುವ […]

Advertisement

Wordpress Social Share Plugin powered by Ultimatelysocial