ಮನೆಯಲ್ಲಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿ ಬಂಧನ.

ಮನೆಯಲ್ಲಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿ ಬಂಧನ.ಗುಂಡ್ಲುಪೇಟೆ ತಾಲ್ಲೂಕಿನ ಅಣ್ಣೂರುಕೇರಿ ಗ್ರಾಮದ ಶಿವನಾಗಶೆಟ್ಟಿ ಎಂಬವನನ್ನು ಬಂಧಿಸಲಾಗಿದ್ದು ಬೆಳ್ಳಶೆಟ್ಟಿ ಮತ್ತು ಕರಿಯಶೆಟ್ಟಿ ಎಂಬ ಇಬ್ಬರು ಆರೋಪಿಗಳು‌ ಪರಾರಿಯಾಗಿದ್ದಾರೆ.ಖಚಿತ ಮಾಹಿತಿ ಮೇರೆಗೆ ಗುಂಡ್ಲುಪೇಟೆ ಬಫರ್ ಜೊನ್ ವಲಯದ ವಲಯ ಅರಣ್ಯಧಿಕಾರಿಗಳು ಮತ್ತು ಚಾಮರಾಜನಗರದ ಸೈಬರ್ ಕ್ರೈಮ್ ಜಂಟಿ‌ಯಾಗಿ ದಾಳಿ ನಡೆಸಿ‌ ಅಕ್ರಮವಾಗಿ ಬೆಳೆದಿದ್ದ 6 ಗಾಂಜಾ ಗಿಡ ಕಂಡುಬಂದಿದೆ.ಮನೆಯನ್ನು ಕೂಲಕುಂಷವಾಗಿ ಪರಿಶೀಲಿಸಿದಾಗ ಸುಮಾರು 5 ಕೆ.ಜಿ ಜಿಂಕೆ ಮಾಂಸ ಮತ್ತು ಅಕ್ರಮ ಬೇಟೆಗಾಗಿ ಬಳಸಿದ ನಾಡ ಬಂದೂಕು 5 ಕರಡಿ ಹಾಗೂ 21 ಕಾಡು ಬೆಕ್ಕಿನ ಉಗುರುಗಳು, 30 ಸಿಡಿಮದ್ದುಗಳು 300ಗ್ರಾಂ ಸಲ್ಫರ್ ಪುಡಿ, ಬಿಳಿಉಪ್ಪು, 2 ಬಂಡಲ್ ವೈರ್ ಗಳು ಕಂಡು ಬಂದ
ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಡೆಸಿದ ಅರಣ್ಯ ಅಧಿಕಾರಿಗಳು ಆರೋಪಿ ಶಿವನಾಗಶೆಟ್ಟಿ ಮತ್ತು ‌ಆತನ ಸಹಚರರು ಸೇರಿ ವಾರಕ್ಕೆ ‌ಎರಡು ಬಾರಿ ಹಳೆಪುರ ಗ್ರಾಮದಲ್ಲಿ ಜಿಂಕೆಗಳನ್ನು ಬೇಟೆಯಾಡಿ ಮಾಂಸವನ್ನು ‌ಮಾರಾಟ ಮಾಡುತಿದ್ದಾರೆಂದು ತಿಳಿದು ಬಂದಿದೆ.ತಲೆ ಮರೆಸಿಕೊಂಡಿರುವ ಅಣ್ಣೂರುಕೇರಿ ಗ್ರಾಮದ ಆರೋಪಿ ಬೆಳ್ಳಶೆಟ್ಟಿ ಮತ್ತು ಕರಿಯಶೆಟ್ಟಿ ಪತ್ತೆ ಕಾರ್ಯ ಕೈಗೊಂಡಿದ್ದು ಬಂಧಿತ ಆರೋಪಿ ಶಿವನಾಗಶೆಟ್ಟಿಯನ್ನು ಹೆಚ್ಚಿನ ವಿಚಾರಣೆಗೆ ಪೋಲಿಸರ ವಶಕ್ಕೆ ನೀಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಕ್ಕರ್ ವಿಚಾರ ಸಮರ್ಥಿಸಿಕೊಂಡ ಡಿಕೆಶಿ – ಬಿಜೆಪಿಗೆ ಡಿಕೆಶಿ ಟಾರ್ಗೆಟ್

Fri Dec 16 , 2022
ಕುಕ್ಕರ್‌ ಬಾಂಬ್‌ ಸ್ಫೋಟವನ್ನ ಬಿಜೆಪಿ ರಾಜಕೀಯವಾಗಿ ಬಳಸಿಕೊಂಡಿದೆ. ಇದನ್ನ ಇಷ್ಟು ದೊಡ್ಡದನ್ನಾಗಿ ಮಾಡುವ ಅವಶ್ಯಕತೆ ಇರಲಿಲ್ಲ. ಬಿಜೆಪಿ ತನ್ನ ಭ್ರಷ್ಟಾಚಾರ ಮುಚ್ಚಿಕೊಳ್ಳೊದಕ್ಕೆ ಕುಕ್ಕರ್‌ ಬ್ಲಾಸ್ಟ್‌ ಪ್ರಕರಣ ಮದ್ಯ ತಂದಿತ್ತು ಎಂದು ಡಿಕೆಶಿ ಹೇಳಿಕೆ ಕೊಟ್ಟದ್ರು. ಇಂದು ಮತ್ತೆ ತಾನು ಕೊಟ್ಟಿರೋ ಹೇಳಿಕೆಗೆ ನಾನು ಬದ್ಧ ಇದರಲ್ಲಿ ಯಾವುದೆ ಬದಲಾವಣೆ ಇಲ್ಲ ಎಂದು ಹೇಳಿದರು. ಈ ಕುರಿತಂತೆ ನಾನು ಅಧಿಕೃತವಾಗಿ ಟ್ವೀಟ್‌ ಮಾಡಿ ಹೇಳ್ತನೆ ಎಂದು ಹೇಳಿದರು. ಜೊತೆಗೆ ಬಿಜೆಪಿ ಯಾವಗಲೂ […]

Advertisement

Wordpress Social Share Plugin powered by Ultimatelysocial