ಸೀಬೆ ಅಥವಾ ಪೇರಲ ಹಣ್ಣು ಸೇವೆನೆ ಆರೋಗ್ಯಕ್ಕೆ ತುಂಬಾ ಉಪಯುಕ್ತ.

 ಸೀಬೆ ಅಥವಾ ಪೇರಲ ಹಣ್ಣು ಸೇವೆನೆ ಆರೋಗ್ಯಕ್ಕೆ ತುಂಬಾ ಉಪಯುಕ್ತ. ಹಾಗೆಯೇ ಸೀಬೆ ಎಲೆ ಕೂಡ ದೇಹದ ಆರೋಗ್ಯ ಕಾಪಾಡುವಲ್ಲಿ ತನ್ನದೇ ಆದ ಮುಖ್ಯ ಪಾತ್ರ ನಿರ್ವಹಿಸುತ್ತದೆ ಎಂಬ ಸತ್ಯ ಅನೇಕರಿಗೆ ತಿಳಿದೇ ಇಲ್ಲ.ಹೌದು ಸ್ವಾಮಿ, ಸೀಬೆ ಎಲೆ ಸೇವೆನೆ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಕನಕಾರಿಯಾಗಿದೆ.ಸೀಬೆ ಎಲೆ ಅಥವಾ ಪೇರಲ ಎಲೆಯಲ್ಲಿ ವಿಟಮಿನ್‌ ಸಿ, ವಿಟಮಿನ್‌ ಬಿ, ಕ್ಯಾಲ್ಸಿಯಂ, ಮೇಗ್ನೀಸಿಯಂ, ಕಬ್ಬಿಣ, ಫಾಸ್ಫರಸ್‌, ಪೊಟ್ಯಾಶಿಯಮ್‌, ಪ್ರೋಟೀನ್‌ ಹೀಗೆ ಇನ್ನು ಕೆಲ ಪೋಷಕಾಂಶಗಳಿವೆ. ಇಷ್ಟೆಲ್ಲಾ ಪೋಷಕಾಂಶಗಳಿರುವ ಸೀಬೆ ಎಲೆಯನ್ನು ನಿಯಮಿತವಾಗಿ ಸೇವಿಸಿದರೆ ಅರೋಗ್ಯ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.ಉಸಿರಾಟದ ಸಮಸ್ಯೆ ಇದ್ದವರು ಪೇರಲ ಎಲೆಗಳನ್ನು ನಿಯಮಿತವಾಗಿ ಜಗಿದು ಜಗಿದು ಸೇವಿಸಿದರೆ ಈ ಸಮಸ್ಯೆಯಿಂದ ಕ್ರಮೇಣವಾಗಿ ಹೊರಬರಬಹುದು. ಪೇರಲ ಎಲೆ ತಿಂದರೆ ಉರಿಯೂತ ನಿಧಾನವಾಗಿ ಶಮನವಾಗುತ್ತದೆ. ಜೀರ್ಣಕ್ರಿಯೆ ಸರಾಗವಾಗಿ ಆಗಲು ಪೇರಲ ಎಲೆಗಳನ್ನು ಸೇವಿಸಬಹುದು. ಬ್ರಾಕೈಟಿಸ್‌ ಸಮಸ್ಯೆ ಇದ್ದರೆ ಪೇರಲ ಎಲೆಗಳ ಸೇವನೆ ತುಂಬಾ ಪ್ರಯೋಜನಕಾರಿಯಾಗಿದೆ. ಸೀಬೆ ಎಲೆಯಲ್ಲಿ ಆಂಟಿಮೈಕ್ರೋಬಿಯಲ್‌ ಹಾಗು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಗುಣ ಹೊಂದಿರುತ್ತದೆ. ಈ ಅಂಶಗಳು ಅಲ್ಸರ್‌ನಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ.ಗ್ಯಾಸ್ಟ್ರಿಕ್‌ ಅಲ್ಸರ್‌ಗಳನ್ನು ಹೋಗಲಾಡಿಸಲು ಪೇರಲ ಎಲ ಸೇವನೆ ಉತ್ತಮ ಪ್ರಯೋಜನೆ. ಇದರಿಂದಾಗಿ ಜೀರ್ಣಕ್ರಿಯೆ ಸಮಸ್ಯೆ ಕೂಡ ನಿವಾರಣೆಯಗುತ್ತದೆ. ಖಾಲಿ ಹೊಟ್ಟೆಯಲ್ಲಿ ಪೇರಲ ಎಲೆ ಸೇವನೆಯಿಂದಾಗಿ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು. ಹೇಗೆಂದರೆ ಅನೇಕ ಜೈವಿಕ ಸಕ್ರಿಯ ಸಂಯುಕ್ತಗಳು ಇದರಲ್ಲಿದ್ದು, ದೇಹದಲ್ಲಿನ ಸಕ್ಕರೆ ಅಂಶ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೀರಿಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ.ಅತಿಸಾರ ಸಮಸ್ಯೆಯಿಂದ ಬಳಲುತ್ತಿರುವವರು ಖಾಲಿ ಹೊಟ್ಟೆಯಲ್ಲಿ ಸೀಬೆ ಎಲೆ ಸೇವಿಸಿ ಗುಣಮುಖರಾಗಬಹುದು. ಶೀತ, ಕೆಮ್ಮು, ತುರಿಕೆ ಇಂತಹ ಅಲರ್ಜಿ ಸಮಸ್ಯೆಗಳಿದ್ದರೆ ಪೇರಲ ಎಲೆ ಸೇವನೆ ಮಾಡಿದರೆ ನಿವಾರಣೆ ಮಾಡುತ್ತದೆ. ಇದರಲ್ಲಿ ಅಲರ್ಜಿ ನಿವಾರಕ ಗುಣಗಳಿವೆ. ವಿಶೇಷ ಸೂಚನೆ: ಪೇರಲ ಎಲೆಗಳು ದೇಹದ ಆರೋಗ್ಯಕ್ಕೆ ಉಪಯುಕ್ತ ಹೌದು. ಆದರೆ ಇದರ ಸೇವನೆ ಹಿತ ಮಿತವಾಗಿರಬೇಕು. ನೀವು ಯಾವುದೇ ತೀವ್ರವಾದ ಖಾಯಿಲೆಯಿಂದ ಬಳಲುತ್ತಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಇದನ್ನು ಸೇವಿಸಿ. ಇದನ್ನು ಹೆಚ್ಚು ತಿಂದರೂ ದೇಹದ ಆರೋಗ್ಯ ಹದಗೆಡಬಹುದು. ಇನ್ನೊಂದು ವಿಚಾರ ಸೀಬೆ ಎಲೆಗಳನ್ನು ಚೆನ್ನಾಗಿ ತೊಳೆದು ತಿನ್ನಿ, ಗಿಡದಿಂದ ಯಾವಾಗಲೋ ಹರಿದ ಹಳೆಯ ಎಲೆಗಳ ಸೇವನೆ ಬೇಡ. ಆದಷ್ಟು ಎಳೆಯ ಅಂದರ ಚಿಗುರು ಎಲೆಗಳನ್ನು ಸೇವಿಸಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್‌ನಲ್ಲಿರುವ ತನ್ನ ನಾಗರಿಕರನ್ನು ತಕ್ಷಣವೇ ತೊರೆಯುವಂತೆ ನ್ಯೂಜಿಲೆಂಡ್ ಒತ್ತಾಯಿಸುತ್ತದೆ

Sat Feb 12 , 2022
  ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆಗೆ ಪ್ರತಿಕ್ರಿಯೆಯಾಗಿ ಉಕ್ರೇನ್‌ನಲ್ಲಿರುವ ಎಲ್ಲಾ ನ್ಯೂಜಿಲೆಂಡ್‌ನವರು ತಕ್ಷಣ ತೊರೆಯುವಂತೆ ನ್ಯೂಜಿಲೆಂಡ್‌ನ ವಿದೇಶಾಂಗ ಸಚಿವಾಲಯ ಶನಿವಾರ ಒತ್ತಾಯಿಸಿದೆ. “Aotearoa ನ್ಯೂಜಿಲೆಂಡ್ ಉಕ್ರೇನ್‌ನಲ್ಲಿ ರಾಜತಾಂತ್ರಿಕ ಪ್ರಾತಿನಿಧ್ಯವನ್ನು ಹೊಂದಿಲ್ಲ ಮತ್ತು ಉಕ್ರೇನ್‌ನಲ್ಲಿರುವ ನ್ಯೂಜಿಲೆಂಡ್‌ನವರಿಗೆ ಕಾನ್ಸುಲರ್ ನೆರವು ನೀಡುವ ಸರ್ಕಾರದ ಸಾಮರ್ಥ್ಯವು ತುಂಬಾ ಸೀಮಿತವಾಗಿದೆ” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. “ಉಕ್ರೇನ್‌ನಲ್ಲಿನ ಭದ್ರತಾ ಪರಿಸ್ಥಿತಿಯು ಅಲ್ಪಾವಧಿಯಲ್ಲಿ ಬದಲಾಗಬಹುದು ಮತ್ತು ನ್ಯೂಜಿಲೆಂಡ್‌ನವರು ಈ ಸಂದರ್ಭಗಳಲ್ಲಿ ಸ್ಥಳಾಂತರಿಸುವುದರೊಂದಿಗೆ ಬೆಂಬಲವನ್ನು ಅವಲಂಬಿಸಬಾರದು.” […]

Advertisement

Wordpress Social Share Plugin powered by Ultimatelysocial