IPL 2022: ಗುಜರಾತ್​​ ಮೇಲೆ ಗೆಲ್ಲಲು ಬೆಂಗಳೂರು ಪ್ಲಾನ್​​, ಲೆಕ್ಕಾಚಾರದಲ್ಲೇ ಇದೆ ಆರ್​​ಸಿಬಿ ಭವಿಷ್ಯ..

 

ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಲೆಕ್ಕಾಚಾರ ತುಂಬಾ ಸಿಂಪಲ್​​. ಗುಜರಾತ್​​ ಟೈಟಾನ್ಸ್​​ ವಿರುದ್ಧ ಗೆಲುವು ಮತ್ತು ಶನಿವಾರ ಮುಂಬೈ ಇಂಡಿಯನ್ಸ್​​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​​ ಸೋಲುವುದು. ಹೀಗಾದರೆ ಮಾತ್ರ ಆರ್​​ಸಿಬಿ ಪ್ಲೇ-ಆಫ್​​ ತಲುಪುತ್ತದೆ. ಹೀಗಾಗಿ ವಾಂಖೆಡೆಯಲ್ಲಿ ನಡೆಯುವ ಈ ಪಂದ್ಯ ಕುತೂಹಲದ ಕೇಂದ್ರಬಿಂದುವಾಗಿದೆ.

ಲೆಕ್ಕಾಚಾರದಷ್ಟು ಸುಲಭವಾಗಿ ಐಪಿಎಲ್​​ 2022ರ ಅಗ್ರಸ್ಥಾನಿ ಗುಜರಾತ್​​ ಟೈಟಾನ್ಸ್​​​ ತಂಡವನ್ನು ಸೋಲಿಸಲು ಸಾಧ್ಯವಿಲ್ಲ. ಫಾಫ್​​ ಡು ಪ್ಲೆಸಿಸ್​​, ವಿರಾಟ್​​ ಕೊಹ್ಲಿ ಮತ್ತು ಗ್ಲೆನ್​​ ಮ್ಯಾಕ್ಸ್​​​ ಪೈಕಿ ಯಾರಾದರೂ ಒಬ್ಬರು ದೊಡ್ಡ ಇನ್ನಿಂಗ್ಸ್​ ಕಟ್ಟಿದರೆ ಮಾತ್ರ ಪಂದ್ಯ ಗೆಲ್ಲಬಹುದು. ಇವರ ಜೊತೆ ದಿನೇಶ್​​ ಕಾರ್ತಿಕ್​​, ಮಹಿಪಾಲ್​​ ಲೊಮ್ರೊರ್​​, ರಜತ್​​ ಪಾಟಿದಾರ್​​ ಮತ್ತು ಶಹಬಾಸ್​​ ಅಹ್ಮದ್​​ ಕೂಡ ಬ್ಯಾಟ್​​ ಬೀಸಬೇಕಿದೆ.

ಬೌಲಿಂಗ್​​ನಲ್ಲಿ ಜೋಶ್​​ ಹ್ಯಾಜಲ್​​ವುಡ್​ ಪಂಜಾಬ್​​ ವಿರುದ್ಧದ ಪಂದ್ಯವನ್ನು ಬೇಗನೆ ಮರೆಯಬೇಕಿದೆ. ಮೊಹಮ್ಮದ್​​ ಸಿರಾಜ್​​​​ ರನ್​​ ಕೊಡದೇ ಇರುವ ಕಡೆ ಗಮನಕೊಡಬೇಕು. ಹರ್ಷಲ್​​ ಪಟೇಲ್​​ ಮತ್ತು ವನಿಂದು ಹಸರಂಗ ಮಿಂಚಿದರೆ ಮಾತ್ರ ಮ್ಯಾಚ್​​ ಗೆಲ್ಲಬಹುದು. ಮ್ಯಾಕ್ಸ್​​ವೆಲ್​​, ಲೊಮ್ರೊರ್​​ ಮತ್ತು ಶಹಬಾಸ್ ಅಹ್ಮದ್​​ 5ನೇ ಬೌಲರ್​​ ಪಾತ್ರ ನಿಭಾಯಿಸಬೇಕಿದೆ. ​​

ಗುಜರಾತ್​​ ಟೈಟಾನ್ಸ್​​​ ಅಗ್ರಸ್ಥಾನಿಯಾಗಿ ಪ್ಲೇ-ಆಫ್​​ ಪ್ರವೇಶಿಸುವುದು ಖಚಿತ. ವೃದ್ಧಿಮಾನ್​​ ಸಾಹಾ ಮತ್ತು ಶುಭ್ಮನ್​​ ಗಿಲ್​​ ಬ್ಯಾಟಿಂಗ್​​ ಫಾರ್ಮ್​ ಹೊಸ ಉತ್ಸಾಹ ತಂದಿದೆ. ಹಾರ್ದಿಕ್​​ ಪಾಂಡ್ಯಾ ಬ್ಯಾಟಿಂಗ್​​ ಜೊತೆ ಬೌಲಿಂಗ್​​ನಲ್ಲೂ ಕೈ ಜೋಡಿಸುತ್ತಿರುವುದು ಖುಷಿಯ ವಿಚಾರ. ಆದರೆ ಮ್ಯಾಥ್ಯೂ ವೇಡ್​​ ಮತ್ತು ಡೇವಿಡ್​​ ಮಿಲ್ಲರ್​ ಸ್ಥಿರತೆಯ ಬಗ್ಗೆ ಪ್ರಶ್ನೆ ಇದೆ. ರಾಹುಲ್​​ ತೇವಾಟಿಯಾ ರಶೀದ್​​ ಖಾನ್​​ ಗ್ರೇಟ್​​ ಟಚ್​​ನಲ್ಲಿದ್ದಾರೆ.

ಬೌಲಿಂಗ್​​ನಲ್ಲಿ ಮೊಹಮ್ಮದ್​ ಶಮಿ ಲೀಡರ್​​. ರಶೀದ್​ ಖಾನ್​​ ಡೇಂಜರಸ್​​. ಆದರೆ ಫರ್ಗ್ಯೂಸನ್​​, ಯಶ್​ ದಯಾಳ್​​ ದುಬಾರಿ ಆಗುತ್ತಿರುವ ಬಗ್ಗೆ ಚಿಂತೆ ಇದೆ. ರವಿಶ್ರೀನಿವಾಸನ್​​ ಸಾಯಿ ಕಿಶೋರ್​​ ಸೇರ್ಪಡೆ ಹೊಸ ಲೆಕ್ಕಾಚಾರಕ್ಕೆ ದಾರಿಯಾಗಿದೆ. ಹಾರ್ದಿಕ್​​ ಪಾಂಡ್ಯಾ ಮತ್ತು ರಾಹುಲ್​​ ತೇವಾಟಿಯಾ ಕೂಡ ಬೌಲಿಂಗ್​​ ಮಾಡುವ ಶಕ್ತಿ ಹೊಂದಿದ್ದಾರೆ.

ವಾಂಖೆಡೆಯಲ್ಲಿ ನಡೆಯುವ ಪಂದ್ಯ ಟೈಟಾನ್ಸ್​​ ಪಾಲಿಗೆ ಗೆಲುವಿನ ಲಯ ಮುಂದುವರೆಸಲು ಇರುವ ಮ್ಯಾಚ್​​. ಆದರೆ ಆರ್​​ಸಿಬಿ ಪಾಲಿಗೆ ಮಾಡು ಇಲ್ಲವೆ ಮಡಿ ಹೋರಾಟ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗೃಹ ಬಳಕೆಯ LPG ಸಿಲಿಂಡರ್ ದರದಲ್ಲಿ ಮತ್ತೆ ಏರಿಕೆ:

Thu May 19 , 2022
ನವದೆಹಲಿ: ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಬರೆಯ ಗಾಯ ಇನ್ನೂ ಹಸಿಯಾಗಿರುವಗಲೇ ಮತ್ತೊಂದು ಬರೆ ಬಿದ್ದಿದೆ. ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್​ ಬೆಲೆಯಲ್ಲಿ ಇಂದು (ಮೇ.19) ಮತ್ತೆ 3.50 ರೂಪಾಯಿ ಹೆಚ್ಚಳವಾಗಿದೆ. ಗೃಹ ಬಳಕೆ ಮಾತ್ರವಲ್ಲದೆ, ವಾಣಿಜ್ಯ ಬಳಕೆಯ ಸಿಲಿಂಡರ್​ ಬೆಲೆಯಲ್ಲಿ 8 ರೂಪಾಯಿ ಹೆಚ್ಚಳವಾಗಿದೆ. ಈ ತಿಂಗಳಲ್ಲಿ ಎರಡನೇ ಬಾರಿಗೆ ಬೆಲೆ ಏರಿಕೆಯಾಗಿದ್ದು, ಜನರ ಜೇಬಿಗೆ ಮತ್ತಷ್ಟು ಹೊರೆಯಾಗಲಿದೆ. ಮೇ. 7ರಂದು 50 ರೂಪಾಯಿ ಹೆಚ್ಚಳವಾಗಿತ್ತು. ಇಂದು ಮತ್ತೆ […]

Advertisement

Wordpress Social Share Plugin powered by Ultimatelysocial