ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಹನ್ಸಿಕಾ ಮೋಟ್ವಾನಿ

 

ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಅವರು ತಮ್ಮ ಬಹುಕಾಲದ ಗೆಳೆಯ ಸೊಹೇಲ್ ಕಥುರಿಯಾ ಜೊತೆಗೆ ಮದುವೆ ಆಗಿದ್ದಾರೆ. ಭಾನುವಾರ (ಡಿ.4) ಹನ್ಸಿಕಾ ಮೋಟ್ವಾನಿ ಅವರ ಮದುವೆಯು ರಾಜಸ್ಥಾನದ ಜೈಪುರದಲ್ಲಿರುವ ಮುಂದೊಟ ಫೋರ್ಟ್‌ನಲ್ಲಿ ಅದ್ದೂರಿಯಾಗಿ ನಡೆದಿದೆ. ಮದುವೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.ಇದೊಂದು ಡೆಸ್ಟಿನೇಶನ್ ವೆಡ್ಡಿಂಗ್ ಆಗಿದ್ದು, ಎರಡು ಕಡೆಯ ಕುಟುಂಬಸ್ಥರು, ಆತ್ಮೀಯರು ಮಾತ್ರ ಮದುವೆಗೆ ಸಾಕ್ಷಿಯಾಗಿದ್ದರು. ಡಿಸೆಂಬರ್ 2ರಂದು ವಿವಾಹ ಪೂರ್ವ ಕಾರ್ಯಕ್ರಮಗಳು ಶುರುವಾಗಿದ್ದವು. ಡಿಸೆಂಬರ್ 3ರಂದು ಸಂಗೀತ, ಮೆಹೆಂದಿ ಕಾರ್ಯಕ್ರಮವಿತ್ತು. ಡಿ.4ರಂದು ಈ ಜೋಡಿ ಸಪ್ತಪದಿ ತುಳಿದಿದೆ. ಅಂದಹಾಗೆ, ಸೊಹೇಲ್ ಅವರು ಮುಂಬೈ ಮೂಲದ ಉದ್ಯಮಿಯಾಗಿದ್ದಾರೆ. ಹನ್ಸಿಕಾ ಅವರಿಗೆ ಬ್ಯುಸಿನೆಸ್‌ ಪಾರ್ಟನರ್ ಕೂಡ ಹೌದು! ಒಂದಷ್ಟು ವರ್ಷಗಳಿಂದ ಇವರಿಬ್ಬರ ನಡುವೆ ಸ್ನೇಹ ಇತ್ತು. ಆನಂತರ ಇವರಿಬ್ಬರು ಒಟ್ಟಾಗಿ ಉದ್ಯಮ ಶುರುಮಾಡಿದರು. ಈಗ ಮದುವೆ ಆಗಿ, ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.ಮದುವೆಗೂ ಮುನ್ನ ಪ್ಯಾರೀಸ್‌ನಲ್ಲಿರುವ ಐಫೆಲ್ ಟವರ್ ಮುಂದೆ ಸೊಹೇಲ್ ಕಥುರಿಯಾ ಅವರು ಮಂಡಿಯೂರಿ ಕೂತು ಹನ್ಸಿಕಾಗೆ, ‘ಮದುವೆಯಾಗುತ್ತೀರಾ..’ ಎಂದು ಪ್ರಶ್ನೆ ಮಾಡಿದ್ದರು. ಐಫೆಲ್ ಟವರ್ ಮುಂದೆ ಹೂವು, ಕ್ಯಾಂಡಲ್ ಹಚ್ಚಿ ಸಿಂಗಾರ ಕೂಡ ಮಾಡಲಾಗಿತ್ತು. ಪ್ರೇಮ ನಿವೇದನೆ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿದ್ದ ಹನ್ಸಿಕಾ, ಎಂದೆಂದಿಗೂ ಜೊತೆಗೆ ಇರುವೆ ಎಂಬರ್ಥದಲ್ಲಿ ಕ್ಯಾಪ್ಷನ್ ನೀಡಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ಷೇತ್ರದಿಂದ ಸ್ಪರ್ದೆ ವಿಚಾರ.

Mon Jan 9 , 2023
ನಾನು ಕೋಲಾರದಿಂದ ಸ್ಪರ್ದೆ ಮಾಡುವೆ . ಅಭ್ಯರ್ಥಿಯಾಗಲು ತೀರ್ಮಾನ ಮಾಡಿರುವೆ. ನಿಮ್ಮ ಪ್ರೀತಿ ಅಭಿಮಾನವನ್ನ ನಾನು ತಿರಸ್ಕಾರ ಮಾಡಲಿಕ್ಕೆ ಸಾಧ್ಯವಿಲ್ಲ.ನಾನು ಸ್ಪರ್ದೆ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ಆದರೆ ತೀರ್ಮಾನ ಮಾಡುವುದು ಹೈಕಮಾಂಡ್.ಪಕ್ಷದಲ್ಲಿ ಶಿಸ್ತಿರಬೇಕು ಹಾಗಾಗಿ ಹೈಕಮಾಂಡ್ ಒಪ್ಪಿಗೆ ನೀಡಬೇಕಾಗುತ್ತದೆ‌ ಅಪಪ್ರಚಾರ ಮಾಡುತ್ತಿದ್ದಾರೆ.ಪ್ರತಿವಾರವೂ ಇಲ್ಲಿ ಬಂದೇ ಬರುತ್ತೇನೆ.ಯಾರೇ‌ ಕಾರ್ಯಕರ್ತರು ನೇರವಾಗಿ ಅವರ ಕಷ್ಟ ಸುಖ ಹೇಳಿಕೊಳ್ಳಬಹುದು. ಲೀಡರ್ ಗಳ ಮೂಲಕ ಬರಬೇಕೆಂದು ಏನೀಲ್ಲ. ಇದು ನನ್ನ ಸಂಪ್ರದಾಯ.ಸಾಮಾನ್ಯರಲ್ಲಿ ಸಾಮಾನ್ಯರು ಸಹ ನನ್ನ […]

Advertisement

Wordpress Social Share Plugin powered by Ultimatelysocial