ಹರ್ಷ ಕೊಲೆ ಹಿಂದಿದೆಯಾ ಹಳೆ ದ್ವೇಷ..?

ಶಿವಮೊಗ್ಗ, ಫೆ.21- ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಕೊಲೆಗೆ ಹಳೆ ದ್ವೇಷವೇ ಕಾರಣವಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಈ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಹರ್ಷ ಅವರ ಕೊಲೆಗೆ ಕಳೆದ ಆರು ತಿಂಗಳ ಹಿಂದೆ ನಡೆದಿದೆ ಎನ್ನಲಾದ ಗಲಾಟೆ ಕಾರಣವಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.ಈ ಹಿಂದೆ ಒಂದು ಕೋಮಿನ ಯುವಕರ ಗುಂಪು ಹಾಗೂ ಹರ್ಷ ನಡುವೆ ಗಲಾಟೆ ನಡೆದಿತ್ತು ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.ಅಂದು ಯಾವ ವಿಚಾರಕ್ಕಾಗಿ ಗಲಾಟೆ ಮಾಡಿಕೊಂಡಿದ್ದರು. ಯಾರು ಜಗಳವಾಡಿದ್ದರು ಎಂಬಿತ್ಯಾದಿ ಅಂಶಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.ಹರ್ಷ ಅವರ ಕೊಲೆಗೆ ಹಳೆ ದ್ವೇಷ ಕಾರಣವೇ ಅಥವಾ ಬೇರೆ ಕಾರಣವಿರಬಹುದೇ ಎಂಬ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಹರ್ಷ ಅವರ ಸ್ನೇಹಿತರು, ನೆರೆಹೊರೆಯವರಿಂದಲೂ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

# ಮೂವರು ವಶಕ್ಕೆ:
ಭಜರಂಗದಳ ಕಾರ್ಯಕರ್ತ ಹರ್ಷ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ತನಿಖೆ ಕೈಗೊಂಡು ಇಬ್ಬರನ್ನು ಬಂಧಿಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಇದುವರೆಗಿನ ತನಿಖೆ ಪ್ರಕಾರ, ಕೊಲೆಗೆ ಹಳೆಯ ದ್ವೇಷವೇ ಕಾರಣ ಎಂದು ಕಂಡುಬರುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ.ಶಿವಮೊಗ್ಗದ ಒಂದು ಪೊಲೀಸ್ ತಂಡ ಬೆಂಗಳೂರಿಗೆ ಬಂದಿದ್ದು, ಸ್ಥಳೀಯ ಪೊಲೀಸರ ನೆರವಿನಿಂದ ಜೆಜೆ ನಗರದಲ್ಲಿ ಶಂಕಿತ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಒಂದು ತಂಡ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿಗೆ ಹೋಗಿದ್ದು, ಅಲ್ಲಿನ ಬಳ್ಳಾರಿ ಕ್ಯಾಂಪ್‍ನಲ್ಲಿ ಅಡಗಿ ಕುಳಿತಿದ್ದ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Contino eTB 100: ನಿಮ್ಮ ದೈನಂದಿನ ಗ್ರೈಂಡ್ನಲ್ಲಿ ಎಲೆಕ್ಟ್ರಿಕ್ ಸೈಕಲ್ ಸಹಾಯ ಮಾಡಬಹುದೇ?.

Mon Feb 21 , 2022
ಎಲೆಕ್ಟ್ರಿಕ್ ಸೈಕಲ್‌ಗಳು ನಂತರ ಸಾರಿಗೆಯ ಮೋಡ್ ಆಗಿ ಮಾರ್ಪಟ್ಟಿವೆ ಏಕೆಂದರೆ ಇದು ಸಂಪೂರ್ಣ ವಿದ್ಯುತ್ ಮೋಡ್‌ನಲ್ಲಿ ಬಳಸಲು ಅನುಮತಿಸುತ್ತದೆ. ಇದಕ್ಕೆ ಸೇರಿಸುವ ಅಂಶವೆಂದರೆ ನೋಂದಣಿ, ವಿಮೆ ಮತ್ತು ಅವುಗಳನ್ನು ಸವಾರಿ ಮಾಡಲು ಪರವಾನಗಿ ಅಗತ್ಯವಿಲ್ಲ. ಹೆಲ್ಮೆಟ್ ಮೇಲೆ ಸ್ಟ್ರಾಪ್ ಮಾಡಿ, ಮತ್ತು ನೀವು ಹೋಗುವುದು ಒಳ್ಳೆಯದು. ಮಾರುಕಟ್ಟೆಯಲ್ಲಿ ಹಲವಾರು ಬ್ರ್ಯಾಂಡ್‌ಗಳು ಲಭ್ಯವಿದ್ದರೂ, ಸ್ಟ್ರೈಡರ್ ಸೈಕಲ್ ಪ್ರೈವೇಟ್ ಲಿಮಿಟೆಡ್, ಟಾಟಾ ಉತ್ಪನ್ನವಾಗಿರುವ Contino eTB-100 ಅನ್ನು ಬಿಡುಗಡೆ ಮಾಡಿದೆ. ಬೈಕು ಹೇಗೆ […]

Advertisement

Wordpress Social Share Plugin powered by Ultimatelysocial