ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ರಾ ಶಾಸಕ ಪಿ ರಾಜೀವ್?

ಸಂವಿಧಾನವನ್ನು ಪುಂಕಾನುಪುಂಕವಾಗಿ ಕರಗತ ಮಾಡಿಕೊಂಡು ಭಾಷಣ ಬಿಗಿಯೋ ಕುಡಚಿ ಶಾಸಕ ಪಿ ರಾಜೀವ್ ಪ್ರಚಾರದ ಭರಾಟೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ರಾ? ಎನ್ನುತ್ತಿದ್ದಾರೆ ಕೆಲವು ಪ್ರಜ್ಞಾವಂತರು.

ವಿಧಾನ ಸಭೆ ಚುನಾವಣಾ ಪ್ರಚಾರ ನಿಮಿತ್ಯವಾಗಿ  ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ವಾರ್ಡ್ ಸಂಖ್ಯೆ 6ರ ಶ್ರೀ ಕರೇಸಿದ್ದೇಶ ದೇವಸ್ಥಾನ ಆವರಣದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಶಾಸಕ ಪಿ ರಾಜೀವ್, ಚಿಕ್ಕ ಚಿಕ್ಕ ಮಕ್ಕಳಿಗೆ ಬಿಜೆಪಿ ಗೆ ಮತ ಹಾಕಬೇಕೆಂದು ಪದೇ ಪದೇ ಹೇಳಿದ್ದಾರೆ.

ಅಲ್ಲದೆ ಚಿಕ್ಕ ಚಿಕ್ಕ ಮಕ್ಕಳ ಕೊರಳಲ್ಲಿ ಬಿಜೆಪಿ ಪಕ್ಷದ ಶಾಲು ಹಾಕಿ ಪ್ರಚಾರಕ್ಕೆ ಬಳಸಿಕೊಂಡು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಸರಕಾರಿ ನೌಕರಿಗೆ ವಿದಾಯ ಹೇಳಿ, ರಾಜಕೀಯ ರಂಗವನ್ನು ಪ್ರವೇಶ ಮಾಡಿರುವ ಶಾಸಕರಿಗೆ ಸರಕಾರದ ನಿಯಮಗಳು ಗೊತ್ತಿಲ್ವಾ? ಅಥವಾ ಪ್ರಚಾರದ ಭರಾಟೆಯಲ್ಲಿ ಮರ್ತೋದ್ರಾ? ಈ ಬಾರಿಯ ಚುನಾವಣಾ ನೀತಿ ಸಂಹಿತೆಗೆ ರಾಜಕಾರಣಿಗಳು ಕ್ಯಾರೆ ಎನ್ನುತ್ತಿಲ್ಲ ಎಂಬ ಮನಸ್ಥಿತಿ ಮತದಾರರದ್ದಾಗಿದೆ. ಹಾಗಾದ್ರೆ ಸರಕಾರಿ ನಿಮಯಗಳು ಯಾರಿಗಾಗಿ? ಇಲ್ಲಿಯವರೆಗೆ ನೀತಿ ಸಂಹಿತೆ ಉಲ್ಲಂಘಿಸಿದವರ ಮೇಲೆ ಯಾವ ಕ್ರಮಗಳಾಗಿವೆ ಎನ್ನುವುದು ಸಾರ್ವಜನಿಕ ಪ್ರಶ್ನೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೀದರ್ ತಾಲುಕಿನ ಬಾವಗಿ ಶ್ರೀ ಗುರು ಭದ್ರೆಶ್ವರ ಸ್ವಾಮಿಯ ದೇವರ ಜಾತ್ರೆ!

Tue Apr 11 , 2023
ಪವಾಡ ಪುರುಷ ಭಕ್ತರ ಕಲ್ಪವೃಕ್ಷ ಕಲ್ಯಾಣ ಕರ್ನಾಟಕದ ಲಕ್ಷಾಂತರ ಜನರ ಮನೆಯ ಕುಲ ದೇವರಾದ ಭದ್ರೆಶ್ವರ ಸ್ವಾಮಿ  ಬೀದರ್ ತಾಲುಕಿನ ಬಾವಗಿ ಶ್ರೀ ಗುರು ಭದ್ರೆಶ್ವರ ಸ್ವಾಮಿಯ ದೇವರ ಜಾತ್ರೆಯ ಮಾರನೆಯ ದಿನ ರಥೋತ್ಸವ ಪಲ್ಲಕ್ಕಿ ಮರೆವಣಿಗೆ ಪಾದ ಪೂಜೆ ಅಗ್ನಿ ತುಳಿಯವ ಕಾರ್ಯಕ್ರಮಗಳನ್ನು ವಿಜ್ರಂಭಣೇಯಿಂದ ಜರುಗಿದವು ರವಿವಾರ ಮಧ್ಯ ರಾತ್ರಿ ನಡೆದ ಮೆರವಣಿಗೆ ಹಾಗು ರಥೋತ್ಸವ ಕಾರ್ಯಕ್ರಮಕೆ ಸಹಸ್ರಾರು ಭಕ್ತರು ಹಾಜರಾಗಿದ್ದರು ಇದಕ್ಕೂ ಮೂದಲು ರಥೋತ್ಸವ ಕಾರ್ಯಕ್ರಮಕ್ಕೆ ಶ್ರೀಪತಿ […]

Advertisement

Wordpress Social Share Plugin powered by Ultimatelysocial