ಹಾಸನಾಂಭೆ ದೇವಸ್ಥಾನ ಓಪನ್ ಆದ್ರೂ,ಭಕ್ತರಿಗಿಲ್ಲ ಪ್ರವೇಶ

‘ಹಾಸನಾಂಭೆ ಭಕ್ತ’ರಿಗೆ ಬಿಗ್ ಶಾಕ್ : ಅ.28ರಿಂದ ದೇವಸ್ಥಾನ ಓಪನ್ ಆದ್ರೂ, ಭಕ್ತರಿಗಿಲ್ಲ ಪ್ರವೇಶ

ಹಾಸನ : ದೀಪಾವಳಿ ಮುನ್ನಾದಿನ ಪ್ರತಿ ವರ್ಷ ಹಾಸನಾಂಭೆ ದೇವಾಲಯ ( Hasanambe Temple ) ಭಕ್ತರಿಗಾಗಿ ತೆರೆದುಕೊಳ್ಳುತ್ತದೆ. ಈ ಬಾರಿ ಕೊರೋನಾ ಸೋಂಕಿನ ( Corona Virus ) ಸಂದರ್ಭದ ನಡುವೆಯೂ ದೇವಸ್ಥಾನ ತೆರೆದ್ರೂ.. ಭಕ್ತರಿಗೆ ಮಾತ್ರ ನೇರಭೇಟಿಗೆ ಅವಕಾಶವನ್ನು ನಿಷೇಧಿಸಿದೆ.

ಈ ಕುರಿತಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ಗುರುವಾರ ನಡೆದಂತ ಜಿಲ್ಲಾಡಳಿತದ ಸಭೆಯಲ್ಲಿ, ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಹಾಸನಾಂಬಾ ನೇರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ.

ಕಳೆದ ಬಾರಿಯಂತೆ ಈ ಬಾರಿಯೂ ಭಕ್ತರಿಗೆ ನೇರಭೇಟಿಗೆ ಅವಕಾಶ ನೀಡದೇ ಇದ್ದರೂ, 7 – 8 ಕಡೆಗಳಲ್ಲಿ ದೊಡ್ಡ ಪರದೆಗಳನ್ನು ಅಳವಡಿಸಿ, ಎಲ್‌ಇಡಿ ಮೂಲಕ ಹಾಸನಾಂಭೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದೆ.

ಈ ಬಾರಿ ಹಾಸನಾಂಭೆ ಹಾಗೂ ಸಿದ್ದೇಶ್ವರ ಸ್ವಾಮೀ ಜಾತ್ರಾ ಮಹೋತ್ಸವವನ್ನು ಅಕ್ಟೋಬರ್ 28ರಿಂದ ನವೆಂಬರ್ 6ರವೆಗೆ ನಡೆಯಲಿದೆ. ಕೊರೋನಾ ಕಾರಣದಿಂದಾಗಿ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿಲ್ಲ ಎಂದು ತಿಳಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ನನಗೂ RSSಗೂ ಏನು ಸಂಬಂಧ? RSS ಬಗ್ಗೆ ಗಂಧ ಗಾಳಿ ಗೊತ್ತಿಲ್ಲ; ಮಾಜಿ ಪ್ರಧಾನಿ

Fri Oct 8 , 2021
ನಾನು ಆರ್.ಎಸ್.ಎಸ್. ನ ಯಾವುದೇ ಬೈಟಕ್ ಕೂತಿಲ್ಲ, ಸಂಘ ಪರಿವಾರವನ್ನು ಹೊಗಳಿಯೂ ಇಲ್ಲ. ಯಾರ್ಯಾರು ಏನು ಮಾಡುತ್ತಿದ್ದಾರೆ ಎಲ್ಲವೂ ಗೊತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ. ಆರ್.ಎಸ್.ಎಸ್. ನ್ನು ಸ್ವತಃ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರೇ ಹೊಗಳಿದ್ದರು. ಆರ್.ಎಸ್.ಎಸ್. ಬಗ್ಗೆ ಆರೋಪ ಮಾಡುವ ಮೊದಲು ಕುಮಾರಸ್ವಾಮಿಯವರು ದೇವೇಗೌಡರನ್ನು ಕೇಳಿ ತಿಳಿದುಕೊಳ್ಳಬಹುದಿತ್ತು ಎಂದು ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ದೇವೇಗೌಡರು, ನನಗೂ […]

Advertisement

Wordpress Social Share Plugin powered by Ultimatelysocial