ಮತ್ತೊಂದು ಕಾಲಿವುಡ್‌ ಸಿನಿಮಾದಲ್ಲಿ ‘ಹ್ಯಾಟ್ರಿಕ್ ಹೀರೋ’

‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ನಟನೆಯ ‘ವೇದ’ ಸಿನಿಮಾ ಡಿಸೆಂಬರ್ 23ರಂದು ತೆರೆಗೆ ಬರುತ್ತಿದೆ. ಇದು ಶಿವಣ್ಣ ನಟನೆಯ 125ನೇ ಸಿನಿಮಾವಾಗಿದೆ. ಅಂದಹಾಗೆ, ಇದರ ಜೊತೆಗೆ ಶಿವರಾಜ್‌ಕುಮಾರ್ ಅವರಿಗೆ ತಮಿಳಿನಿಂದಲೂ ಸಿಕ್ಕಾಪಟ್ಟೆ ಆಫರ್ಸ್ ಬರುತ್ತಿವೆ. ಈಗಾಗಲೇ ಅವರು ‘ಸೂಪರ್ ಸ್ಟಾರ್’ ರಜನಿಕಾಂತ್‌ ನಟನೆಯ ಮುಂದಿನ ಸಿನಿಮಾ ‘ಜೈಲರ್‌’ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಈ ಮಧ್ಯೆ ತಮಿಳು ನಟ ಧನುಷ್ ಅವರ ಸಿನಿಮಾದಲ್ಲೂ ಶಿವರಾಜ್‌ಕುಮಾರ್ ನಟಿಸಲಿದ್ದಾರೆ ಎಂಬ ಮಾಹಿತಿ ಈ ಹಿಂದೆ ಕೇಳಿಬಂದಿತ್ತು. ಇದೀಗ ಅದರ ಬಗ್ಗೆ ಮತ್ತೊಂದು ಅಪ್‌ಡೇಟ್ ಸಿಕ್ಕಿದೆ.ಧನುಷ್ ನಟನೆಯ ‘ಕ್ಯಾಪ್ಟನ್‌ ಮಿಲ್ಲರ್‌’ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅವರು ನಟಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಸಿನಿಮಾದಲ್ಲಿ ಧನುಷ್‌ ಅಣ್ಣನಾಗಿ ಅತಿಥಿ ಪಾತ್ರವನ್ನು ಶಿವರಾಜ್‌ಕುಮಾರ್ ನಿಭಾಯಿಸಲಿದ್ದಾರಂತೆ. ಈ ಸಿನಿಮಾವನ್ನು ಸತ್ಯ ಜ್ಯೋತಿ ಫಿಲ್ಮ್ಸ್‌ ನಿರ್ಮಾಣ ಮಾಡಲಿದ್ದು, ಸ್ವಾತಂತ್ರಪೂರ್ವದ ಕಥೆಯನ್ನು ಈ ಸಿನಿಮಾ ಹೊಂದಿದೆಯಂತೆ. ಶಿವರಾಜ್‌ಕುಮಾರ್, ಧನುಷ್‌ ಜೊತೆಗೆ ಸಂದೀಪ್ ಕಿಶನ್‌, ಪ್ರಿಯಾಂಕಾ ಅರುಳ್ ಮೋಹನ್ ಅವರು ಕೂಡ ಈ ಸಿನಿಮಾದಲ್ಲಿ ನಟಿಸಲಿದ್ದಾರೆ.’ಕ್ಯಾಪ್ಟನ್‌ ಮಿಲ್ಲರ್‌ ಸಿನಿಮಾದ ನಿರ್ದೇಶಕ ಅರುಣ್‌ ಮಾದೇಶ್ವರನ್‌ ಬೆಂಗಳೂರಿಗೆ ಬಂದು ಕಥೆ ಹೇಳಿದರು. ನನ್ನ ಜತೆಗೆ ಒಂದರ್ಧ ದಿನ ಕಳೆದು, ಜತೆಯಲ್ಲಿಯೇ ಊಟ ಮಾಡಿ ಹೋದರು. ಈ ಕಥೆ ಬಹಳ ಚೆನ್ನಾಗಿದೆ ಮತ್ತು ನನ್ನ ಪಾತ್ರವೂ ಅಷ್ಟೇ ವಿಶೇಷವಾಗಿದೆ. ಆದರೆ ನಾನು ಈಗ ಕನ್ನಡದಲ್ಲಿ ನಾಲ್ಕೈದು ಸಿನಿಮಾಗಳನ್ನು ಒಪ್ಪಿಕೊಂಡಿರುವುದರಿಂದ ಇದಕ್ಕೆ ಡೇಟ್ಸ್‌ ಹೇಗೆ ಹೊಂದಿಸುವುದು ಎಂದು ಯೋಚಿಸುತ್ತಿದ್ದೇನೆ. ದಿನಾಂಕಗಳನ್ನು ಹೊಂದಿಸಿಕೊಂಡು ಕರೆ ಮಾಡುತ್ತೇನೆ ಎಂದು ನಿರ್ದೇಶಕರಿಗೆ ಹೇಳಿ ಕಳುಹಿಸಿದ್ದೇನೆ’ ಎಂದು ಶಿವರಾಜ್‌ಕುಮಾರ್‌ ಅವರು ಈ ಹಿಂದೆ ಹೇಳಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

24 ಗಂಟೆಗಳ ಒಳಗೆ ಪಂಚಮಸಾಲಿ ಸಮುದಾಯದಕ್ಕೆ 2ಎ‌ ಮೀಸಲಾತಿ ನೀಡಬೇಕು.

Fri Jan 6 , 2023
ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಹೇಳಿದ್ದಾರೆ ಅವರ ಹೋರಾಟವನ್ನು ಸಮುದಾಯದ ನಾಯಕನಾಗಿ ನಾನು ಅಭಿನಂದಿಸುತ್ತೇನೆ ಹಿಂದೊಮ್ಮೆ ಪಾದಯಾತ್ರೆ ಮಾಡುವಾಗ ನಾವು ಸಾಕಷ್ಟು ಸಹಕಾರ ಕೊಟ್ಟಿದ್ದೇವು ಅಂದು ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ‌ ಸಂಪೂರ್ಣ ಸಹಕಾರ ನೀಡಿದ್ದರು 750 ಕಿಮೀ ಪಾದಯಾತ್ರೆಗೆ ನಾನು ಕೂಡ ಸಹಾಯ ಮಾಡಿದ್ದೆ ಸಮಾವೇಶದಲ್ಲಿ ಸಚಿವರಾಗಿದ್ದರೂ ಸಮಾಜದ ಏಳಿಗೆಗಾಗಿ ನಾನು ಭಾಗಿಯಾಗಿದ್ದೆ ಇದರಿಂದಲೇ ಸಿಎಂ ಬಸವರಾಜ ಬೊಮ್ಮಾಯಿ‌ ಹಿಂದುಳಿದ ವರ್ಗಗಳ ಆಯೋಗ ರಚನೆ ಮಾಡುತ್ತಾರೆ ಯಾವುದೇ ಒತ್ತಡಕ್ಕೆ ಮಣಿಯದೇ […]

Advertisement

Wordpress Social Share Plugin powered by Ultimatelysocial