ಸಚಿವ ರಮೇಶ್ ಜಾರಕಿಹೊಳಿ ನಮ್ಮ ಸಂಪರ್ಕದಲ್ಲಿಲ್ಲ ಎಂದು ಹೇಳಿದ ಎಚ್.ಡಿ ಕುಮಾರಸ್ವಾಮಿ;

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಮ್ಮ ಸಂಪರ್ಕದಲ್ಲಿಲ್ಲ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದರು.

ನಗರದ ಜೆಪಿ ಭವನದಲ್ಲಿ ಬುಧವಾರ ಮಾತನಾಡಿದ ಅವರು, ಯಾರು ಹೋಗಬಹುದೆಂಬ ಮಾಹಿತಿ ನಮಗೂ ಗೊತ್ತಿದೆ.

ಅದರಿಂದ ನನಗೇನು‌ ಗಾಬರಿಯಿಲ್ಲ. ನಮ್ಮ ಪಕ್ಷಕ್ಕೂ ಕೆಲವರು ಅರ್ಜಿ
ಹಾಕಿಕೊಂಡಿದ್ದಾರೆ. ಬಿಜೆಪಿ, ಕಾಂಗ್ರೆಸ್ ನಿಂದ ಅರ್ಜಿ ಹಾಕಿಕೊಂಡಿದ್ದಾರೆ. ಆದರೆ ನಮ್ಮ ಬಳಿ ಬರುವವರು ಸಣ್ಣ ಸಣ್ಣ ಮುಖಂಡರು ಎಂದರು.

ನಮ್ಮದು ಸಣ್ಣ ಪಕ್ಷವಲ್ಲವೇ? ಇನ್ನೂ ಒಂದು ವರ್ಷವಿದೆ. ಯಾವಾಗ ಯಾರು ಬರ್ತಾರೋ‌ ಗೊತ್ತಿಲ್ಲ. ಆ ಸಮಯ ಬಂದಾಗ ಅದರ ಬಗ್ಗೆ ಮಾತನಾಡೋಣ ಎಂದರು. ಬೇರೆ ಪಕ್ಷಗಳಿಂದ ವಲಸೆ
ಬರುತ್ತಿದ್ದಾರೆ ಎಂದು ಹೇಳ್ತಿದ್ದಾರೆ. ಪಟ್ಟಿಗಳನ್ನ ಇಟ್ಕೊಂಡಿದ್ದೇವೆ ಎನ್ನುತ್ತಿದ್ದಾರೆ ಡಿಕೆ ಶಿವಕುಮಾರ್ , ಸಿದ್ದರಾಮಯ್ಯ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಜೆಡಿಎಸ್ ನಿಂದ ಶಾಸಕರು ಬರ್ತಿದ್ದಾರೆಂದಿದ್ದಾರೆ.
ಬಿಜೆಪಿಯವರು ಕಾಂಗ್ರೆಸ್ ಶಾಸಕರು ಬರ್ತಾರೆ ಎನ್ನುತ್ತಿದ್ದಾರೆ. ಕಾಂಗ್ರೆಸ್,ಬಿಜೆಪಿ ಇಬ್ಬರಿಗೂ ನಾನು ಕೇಳ್ತೇನೆ ಯಾರ್ಯಾರು ಇದ್ದಾರೆ ಅನ್ನೋದನ್ನ ಹೇಳಲಿ ಎಂದು ಸವಾಲು ಹಾಕಿದರು.

ನಮ್ಮ ಪಕ್ಷದ ಕೆಲವು ಶಾಸಕರು ಪಾಪ ಸಿದ್ದರಾಮಯ್ಯನವರ ಶ್ರಮದಿಂದ ಗೆದ್ದಿದ್ದಾರೆ. ಅವರಿಂದ ಗೆದ್ದಿದ್ದಕ್ಕೆ ಶಾಸಕರು ಸಿದ್ದರಾಮಯ್ಯ ಸಂಪರ್ಕದಲ್ಲಿ ಇರ್ತಾರೆ . ಸಿದ್ದರಾಮಯ್ಯನವರಿಂದ ಗೆದ್ದಿದ್ದೇವೆಂದು
ನಮ್ಮವರು ಹೇಳಿದ್ದಾರೆ, ಅವರ ಗೆಲುವಿಗೆ ಎಷ್ಟು ಕಷ್ಟ ಪಟ್ಟಿದ್ದೇವೆಂದು ನಮಗೆ ಗೊತ್ತಿದೆ. ಸಿದ್ದರಾಮಯ್ಯರಿಂದ ಗೆದ್ದವರಿಗೆ 2023ರಲ್ಲಿ ಗೊತ್ತಾಗುತ್ತೆ ಎಂದು ಹೆಸರೇಳದೆ ಶಿವಲಿಂಗೇಗೌಡ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ರಿಸ್ ಗೇಲ್ ಅವರು ಭಾರತದ ಗಣರಾಜ್ಯೋತ್ಸವಕ್ಕೆ ಶುಭ ಹಾರೈಕೆ,ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?

Wed Jan 26 , 2022
 ವೆಸ್ಟ್ ಇಂಡೀಸ್ ಕ್ರಿಕೆಟಿಗ, ಕ್ರಿಸ್ ಗೇಲ್ ಅವರು ಭಾರತದ ಗಣರಾಜ್ಯೋತ್ಸವಕ್ಕೆ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ವೈಯಕ್ತಿಕ ಸಂದೇಶ ಸ್ವೀಕರಿಸಿದ್ದಾಗಿ ಹೇಳಿಕೊಂಡಿದ್ದಾರೆ. “ನಾನು 73 ನೇ ಗಣರಾಜ್ಯೋತ್ಸವದಂದು ಭಾರತವನ್ನು ಅಭಿನಂದಿಸಲು ಬಯಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮತ್ತು ಭಾರತದ ಜನರೊಂದಿಗೆ ನನ್ನ ನಿಕಟ ವೈಯಕ್ತಿಕ ಸಂಬಂಧವನ್ನು ಪುನರುಚ್ಚರಿಸುವ ವೈಯಕ್ತಿಕ ಸಂದೇಶದೊಂದಿಗೆ ನಾನಿಂದು ಎಚ್ಚರಗೊಂಡೆ. ಯೂನಿವರ್ಸ್ ಬಾಸ್ ಮತ್ತು ನಫ್ ಕಡೆಯಿಂದ ಪ್ರೀತಿಯ […]

Advertisement

Wordpress Social Share Plugin powered by Ultimatelysocial