‘ಹೆಡ್‍ಬುಷ್ ಸಿನೆಮಾ ಬಿಡುಗಡೆ ಬೇಡ’:

 

ಬೆಂಗಳೂರು, ಮೇ 4: ಭೂಗತ ದೊರೆ ಎಂ.ಪಿ.ಜಯರಾಜ್ ಅವರ ಜೀವನ ಚರಿತ್ರೆ ಎನ್ನಲಾದ ನಟ ‘ಡಾಲಿ’ ಧನಂಜಯ್ ಅಭಿನಯದ ‘ಹೆಡ್ ಬುಷ್’ (Head Bush) ಸಿನೆಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಕೋರಿ ಎಂ.ಪಿ.ಜಯರಾಜ್ ಪುತ್ರ, ನಟ ಅಜಿತ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದಾರೆ.

ಬುಧವಾರ ಈ ಕುರಿತು ಪ್ರತಿಕ್ರಿಯಿಸಿದ ಅಜಿತ್, ‘ಹೆಡ್‍ಬುಷ್’ ಸಿನೆಮಾ ನನ್ನ ತಂದೆಯವರ ಕುರಿತಂತೇ ಇದೆ.

ಈಗಾಗಲೇ ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ನೀಡಿದ್ದೇನೆ. ಜತೆಗೆ, ಈ ಕುರಿತು ಚಿತ್ರತಂಡದ ಜೊತೆಗೂ ಮಾತನಾಡಿದ್ದೇನೆ. ಆದರೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಅವರು ನೀಡಿರಲಿಲ್ಲ ಎಂದರು.

ನಮ್ಮ ತಂದೆಯ ಮುಂದೆ ನಿಲ್ಲದೇ ಇರುವವರೆಲ್ಲಾ, ಅವರನ್ನು ನೋಡದೇ ಇರುವವರೆಲ್ಲಾ ಇಂದು ಏಕವಚನದಲ್ಲಿ ಮಾತನಾಡುತ್ತಾರೆ. ಇದು ಸರಿಯಲ್ಲ ಎಂದ ಅವರು, ಕುಟುಂಬದ ಅನುಮತಿಯನ್ನು ಪಡೆಯದೇ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವುದು ಸೂಕ್ತವಲ್ಲ. ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿದರು.

ಕಾಣದ ಕೈ: ನಟ ಧನಂಜಯ್ ಮಾತನಾಡಿ, ಇದರ ಹಿಂದೆ ಕಾಣದ ಕೈಗಳಿವೆ. ಏಕೆಂದರೆ, ಅಜಿತ್ ನನಗೆ ಚೆನ್ನಾಗಿ ಪರಿಚಯವಿದೆ. ಹೆಡ್‍ಬುಷ್‍ಗೂ ಅವರು ಶುಭಾಶಯ ಕೋರಿದ್ದರು. ನಾವು ಸ್ಪಷ್ಟವಾಗಿ ಇದು ಅಗ್ನಿ ಶ್ರೀಧರ್ ಅವರ ಕೃತಿ ಆಧಾರಿತ ಸಿನೆಮಾ ಎಂದು ಉಲ್ಲೇಖಿಸಿದ್ದೇವೆ. ಆದರೆ ಈಗ ಅಜಿತ್ ಅವರು ಏಕಾಏಕಿ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

ಅಲ್ಲದೆ, ಸಿನೆಮಾ ಘೋಷಣೆ ಮಾಡಿದಾಗ ದೂರು ನೀಡಬಹುದಿತ್ತು. ಆದರೆ ಚಿತ್ರೀಕರಣ ಪೂರ್ಣಗೊಂಡ ನಂತರ ಈ ರೀತಿ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಾವು ಸಿನೆಮಾ ಮಾಡುತ್ತಿರುವುದು ಅಗ್ನಿ ಶ್ರೀಧರ್ ಅವರ ಪುಸ್ತಕದ ಮೇಲೆ. ಏನೇ ಸಮಸ್ಯೆ ಇದ್ದರೂ, ಅಗ್ನಿ ಶ್ರೀಧರ್ ಜೊತೆ ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು. ಸಿನಿಮಾಗೂ ಅಜಿತ್ ದೂರಿಗೂ ಸಂಬಂಧವಿಲ್ಲ. ಶ್ರೀಧರ್ ಅವರ ಪುಸ್ತಕದ ಹಕ್ಕು ತೆಗೆದುಕೊಂಡು ನಾವು ಸಿನಿಮಾ ಮಾಡುತ್ತಿದ್ದೇವೆ ಎಂದು ನುಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಮ್ಮ ಬೆರಳಿನ ಉಗುರುಗಳು ಆರೋಗ್ಯ ಮತ್ತು ಸೌಂದರ್ಯದ ಪ್ರತೀಕದಂತಿದೆ.

Thu May 5 , 2022
ನಮ್ಮ ಬೆರಳಿನ ಉಗುರುಗಳು ಆರೋಗ್ಯ ಮತ್ತು ಸೌಂದರ್ಯದ ಪ್ರತೀಕದಂತಿದೆ. ತಿಂಗಳಿಗೆ ಸರಾಸರಿ 3.47 ಮಿಲಿ ಮೀಟರ್​ನ ಹತ್ತನೇ ಒಂದು ಭಾಗದಷ್ಟು ಉಗುರ ಬೆಳೆಯುತ್ತದೆ. ಕೆರಾಟಿನ್ ಎನ್ನುವ ಗಟ್ಟಿಯಾದ ಪ್ರೊಟೀನ್​​ ನಮ್ಮ ಉಗುರಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಉಗುರಿನ ಆರೋಗ್ಯದ ಮೇಲೆ ನಮ್ಮ ದೈಹಿಕ ಆರೋಗ್ಯವೂ ನಿರ್ಧರಿತವಾಗುತ್ತದೆ. ಉಗುರುಗಳು ಒರಟಾಗಿರದೇ ನಯವಾಗಿ ಮತ್ತು ದೃಢವಾಗಿರಬೇಕು. ಬಣ್ಣದಲ್ಲೂ ಯಾವ ವ್ಯತ್ಯಾಸಗಳಿರಬಾರದು. ಇವು ಆರೋಗ್ಯಕರ ಉಗುರಿನ ಲಕ್ಷಣವಾಗಿದೆ. ಇನ್ನೂ ನೀವು ಉಗುರು ಬೆಳೆಸಿ […]

Advertisement

Wordpress Social Share Plugin powered by Ultimatelysocial