ಬಿಸಿ ಬಿಸಿ ನೀರು ಅನೇಕ ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆ ಇದೆ.

ಬಿಸಿ ಬಿಸಿ ನೀರು ಅನೇಕ ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆ ಇದೆ. ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದ ನಂತರ ಚರ್ಮ ಮತ್ತಷ್ಟು ಒಣಗುತ್ತದೆ. ಬೂದಿ ಬೂದಿಯಾದಂತೆ ಅನಿಸುತ್ತದೆ.ಬೆಳಗ್ಗೆ ಏಳುವುದು ಕಷ್ಟದ ಕೆಲಸ. ಹಾಗಿರುವಾಗ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದು ಸಾಧ್ಯವಿಲ್ಲ.ಚಳಿ ಶುರುವಾಯಿತು ಎಂದರೆ ಬಿಸಿ ನೀರಿನಲ್ಲಿ ಸ್ನಾನ ಮಾಡಲು ಎಲ್ಲರೂ ಇಷ್ಟಪಡುತ್ತಾರೆ. ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದು ಕಷ್ಟಸಾಧ್ಯವಾದ್ದರಿಂದ ಬಿಸಿನೀರು ಸ್ನಾನ ಮಾಡಲು ಇಚ್ಚಿಸುತ್ತಾರೆ.ಆದರೆ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು. ಇದರಿಂದ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ.ಚಳಿಗಾಲದಲ್ಲಿ ತುರಿಕೆ ಸಮಸ್ಯೆ ವಿಪರೀತವಾಗಿ ಕಾಡುತ್ತದೆ. ಕೆಲವರಿಗೆ ಇದರಿಂದ ಗಾಯಗಳು ಆಗುವುದುಂಟು. ಹೀಗಾಗಿ ಆಲಿವ್ ಆಯಿಲ್ ಅಥವಾ ತೆಂಗಿನ ಎಣ್ಣೆಯ ನಾಲ್ಕು ಹನಿಯನ್ನು ಸ್ನಾನ ಮಾಡುವ ನೀರಿಗೆ ಬೆರೆಸಿ ಸ್ನಾನ ಮಾಡಬೇಕು. ಇದರಿಂದ ತೇವಾಂಶ ಹಾಗೆ ಇರುವುದಲ್ಲದೆ ಒಣ ಚರ್ಮದ ಸಮಸ್ಯೆಯೂ ಇರುವುದಿಲ್ಲ.ಜೊತೆಗೆ ನೀರು ಜಾಸ್ತಿ ಬಿಸಿ ಇದ್ದರೆ ಮೈಮೇಲೆ ಕೆಂಪು ಕಲೆಗಳ ಆಗುವ ಸಾಧ್ಯತೆಯೂ ಇದೆ. ಹಾಗಾಗಿ ಆದಷ್ಟು ಬೆಚ್ಚಗಿನ ನೀರಿನಲ್ಲಿ ಪ್ರತಿ ದಿನ ಸ್ನಾನ ಮಾಡಿದರೆ ಒಳ್ಳೆಯದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಕರ ರಾಶಿ ಭವಿಷ್ಯ (Tuesday, January 10, 2023)

Tue Jan 10 , 2023
ದೈಹಿಕ ಲಾಭಕ್ಕಾಗಿ ವಿಶೇಷವಾಗಿ ಮಾನಸಿಕ ದೃಢತೆಗಾಗಿ ಧ್ಯಾನ ಮತ್ತು ಯೋಗ ಪ್ರಾರಂಭಿಸಿ. ನೀವು ಕಮಿಷನ್‌ಗಳಿಂದ – ಡಿವಿಡೆಂಡ್‌ಗಳಿಂದ- ಅಥವಾ ರಾಯಧನಗಳಿಂದ ಪ್ರಯೋಜನ ಪಡೆಯುತ್ತೀರಿ. ನಿಮ್ಮ ಪಾಲುದಾರರು ನೀವು ಅವರ ಅಭಿಪ್ರಾಯಗಳನ್ನು ನಿರ್ಲಕ್ಷಿಸಿದರೆ ಅವರ ತಾಳ್ಮೆ ಕಳೆದುಕೊಳ್ಳುತ್ತಾರೆ. ನಿಮ್ಮ ಪ್ರೇಮಿಯನ್ನು ಭೇಟಿ ಮಾಡುತ್ತಿದ್ದ ಹಾಗೆ ನಿಮ್ಮ ಮನಸ್ಸನ್ನು ಪ್ರಣಯ ಆವರಿಸಿಕೊಳ್ಳುತ್ತದೆ. ಇಂದು ಮನೆಯ ಯಾವುದೇ ವಿಷಯದಿಂದಾಗಿ ಕೆಲಸದ ಸ್ಥಳದಲ್ಲಿ ನಿಮ್ಮ ಉತ್ಸಾಹ ಕಡಿಮೆಯಾಗಿರುತ್ತದೆ. ಈ ರಾಶಿಚಕ್ರದ ವ್ಯಾಪಾರಿಗಳು ಇಂದಿನ ದಿನ ತಮ್ಮ […]

Advertisement

Wordpress Social Share Plugin powered by Ultimatelysocial