ಪಾದಗಳಲ್ಲಿ ಧೂಳು, ಕೊಳೆ ಕುಳಿತುಕೊಂಡು ಪಾದಗಳು ಒರಟಾಗಿ ಬಿರುಕು ಬಿಡುತ್ತದೆ.

ಪಾದಗಳಲ್ಲಿ ಧೂಳು, ಕೊಳೆ ಕುಳಿತುಕೊಂಡು ಪಾದಗಳು ಒರಟಾಗಿ ಬಿರುಕು ಬಿಡುತ್ತದೆ. ಇದರಿಂದ ನಿಮ್ಮ ಪಾದಗಳಲ್ಲಿ ನೋವು, ರಕ್ತ ಕಾಣಿಸಿಕೊಳ್ಳು ತ್ತದೆ. ಇದು ನಿಮ್ಮನ್ನ ಮುಜುಗರಕ್ಕೀಡಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಪಾದಗಳನ್ನು ಇವುಗಳಿಂದ ಮಸಾಜ್ ಮಾಡಿ.

*ಜೇನುತುಪ್ಪ: ಜೇನುತುಪ್ಪದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಇದು ಗಾಯಗಳನ್ನು ಶುದ್ಧೀಕರಿಸಲು ಮತ್ತು ಚರ್ಮವನ್ನು ತೇವಗೊಳಿಸಲು ಸಹಾಯ ಮಾಡುತ್ತದೆ. ಒಂದು ಬಕೆಟ್ ಬೆಚ್ಚಗಿನ ನೀರಿನಲ್ಲಿ 1 ಕಪ್ ಜೇನುತುಪ್ಪ ಮಿಕ್ಸ್ ಮಾಡಿ ಅದರಲ್ಲಿ ಪಾದಗಳನ್ನು ನೆನೆಸಿ ಸುಮಾರು 20 ನಿಮಿಷಗಳ ಕಾಲ ನಿಧಾನವಾಗಿ ಸ್ಕ್ರಬ್ ಮಾಡಿ.

*ಆಲಿವ್ ಆಯಿಲ್ : ಇದು ಚರ್ಮವನ್ನು ಮೃದುವಾಗಿ ಮಾಡಲು ಸಹಾಯ ಮಾಡುತ್ತದೆ. 1 ಚಮಚ ಆಲಿವ್ ಆಯಿಲ್ ನ್ನು ಹತ್ತಿ ಉಂಡೆಗಳಿಂದ ತೆಗೆದುಕೊಂಡು 15 ನಿಮಿಷಗಳ ಕಾಲ ಮಸಾಜ್ ಮಾಡಿ ಸಾಕ್ಸ್ ಧರಿಸಿ ಒಂದು ಗಂಟೆಯ ಬಳಿಕ ವಾಶ್ ಮಾಡಿ.

*ಬಾಳೆಹಣ್ಣು ಮತ್ತು ಆವಕಾಡೊ : ಆವಕಾಡೋನಲ್ಲಿ ವಿಟಮಿನ್ ಎ, ಇ ಮತ್ತು ಒಮೆಗಾ ಕೊಬ್ಬಿನಾಮ್ಲವಿದೆ. ಇದು ಚರ್ಮವನ್ನು ಮೃದುಗೊಳಿಸುವುದರ ಜೊತೆಗೆ ಗಾಯವನ್ನು ವಾಸಿಮಾಡುತ್ತದೆ. ಹಾಗಾಗಿ ಬಾಳೆಹಣ್ಣು ಮತ್ತು ಆವಕಾಡೋ ಫೇಸ್ಟ್ ತಯಾರಿಸಿ ಪಾದಗಳಿಗೆ ಹಚ್ಚಿ. 20 ನಿಮಿಷ ಬಿಟ್ಟು ವಾಶ್ ಮಾಡಿ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇಹಸ್ಥಿತಿಗೆ ಅನುಗುಣವಾಗಿ ಕೂದಲು ಉದುರುತ್ತವೆ.

Mon Jan 16 , 2023
ಬದಲಾದ ದೇಹಸ್ಥಿತಿಗೆ ಅನುಗುಣವಾಗಿ ಕೂದಲು ಉದುರುತ್ತವೆ. ಇತ್ತೀಚೆಗಂತೂ ಹೆಚ್ಚಿನವರು ಕೂದಲು ಉದುರುವುದರ ಕುರಿತೇ ಚಿಂತಿಸುತ್ತಾರೆ. ಮಾತ್ರವಲ್ಲ, ಇದೊಂದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ದೇಹಕ್ಕೆ ಸರಿಯಾದ ಪೋಷಕಾಂಶಗಳು ಸಿಗದೇ ಇದ್ದ ಸಂದರ್ಭ, ಅತಿಯಾದ ಆಲೋಚನೆ, ತಲೆಗೆ ರಕ್ತ ಸಂಚಾರ ಸರಿಯಾಗಿ ಆಗದಿದ್ದರೆ, ಇವೇ ಮೊದಲಾದ ಸಮಸ್ಯೆಗಳಿಂದ ಕೂದಲು ಉದುರುತ್ತವೆ ಎನ್ನಲಾಗಿದೆ. ನೀರು, ವಾತಾವರಣ, ಬಳಸುವ ಪದಾರ್ಥಗಳು ಕೂಡ ಇದಕ್ಕೆ ಕಾರಣವೆನ್ನಲಾಗುತ್ತದೆ. ಕೂದಲು ಉದುರುವ ಸಮಸ್ಯೆಗೆ ಸುಲಭ ಪರಿಹಾರ ಕೂಡ ಇಲ್ಲಿದೆ. ಸೀಗೆಕಾಯಿ, ನೆಲ್ಲಿಕಾಯಿಯನ್ನು […]

Advertisement

Wordpress Social Share Plugin powered by Ultimatelysocial