ಒಳ್ಳೆಯ ನಿದ್ರೆಯು ಜೀವನದ ಉತ್ತಮ ಕೊಡುಗೆಯಾಗಿದೆ.

ಒಳ್ಳೆಯ ನಿದ್ರೆಯು ಜೀವನದ ಉತ್ತಮ ಕೊಡುಗೆಯಾಗಿದೆ. ಆದರೆ ವಿವಿಧ ಕಾರಣಗಳಿಂದ ಸುಖಕರವಾದ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ವಾಸ್ತು ಶಾಸ್ತ್ರದ ಕೆಲವು ನಿಯಮಗಳನ್ನು ಪಾಲಿಸಿದ್ರೆ ನೆಮ್ಮದಿಯ ನಿದ್ರೆ ಜೊತೆಗೆ ಅದೃಷ್ಟವು ನಿಮ್ಮದಾಗಬಹುದು.

ವಾಸ್ತು ಪ್ರಕಾರ, ನೀವು ಮಲಗುವಾಗ ಕೆಲವು ವಿಶೇಷ ವಸ್ತುಗಳನ್ನು ದಿಂಬಿನ ಕೆಳಗೆ ಇಡಬೇಕು. ಮಲಗುವಾಗ ದಿಂಬಿನ ಕೆಳಗೆ ಈ ವಸ್ತುಗಳನ್ನು ಇಡುವುದರಿಂದ ಉತ್ತಮ ನಿದ್ರೆ ಬರುತ್ತದೆ.

ಗೀತಾ ಅಥವಾ ಸುಂದರಕಾಂಡ

ವಾಸ್ತು ಶಾಸ್ತ್ರದ ಪ್ರಕಾರ, ಮಲಗುವಾಗ ದಿಂಬಿನ ಕೆಳಗೆ ಗೀತಾ ಅಥವಾ ಸುಂದರಕಾಂಡವನ್ನು ಇಟ್ಟುಕೊಳ್ಳುವುದು ಮನಸ್ಸನ್ನು ಶಾಂತಗೊಳಿಸುತ್ತದೆ. ಹೀಗೆ ಮಾಡುವುದರಿಂದ ಕೆಲಸದಲ್ಲಿ ಕಾರ್ಯಕ್ಷಮತೆಯೂ ಸುಧಾರಿಸುತ್ತದೆ.

ಮೂಲಂಗಿ

ನಿದ್ರೆಯ ಸಮಸ್ಯೆ ತುಂಬಾ ಹೆಚ್ಚಿದ್ದರೆ, ಮೂಲಂಗಿಯಿಂದ ಪರಿಹಾರ ಕಂಡುಕೊಳ್ಳಬಹುದು. ರಾತ್ರಿ ಮಲಗುವಾಗ ಮೂಲಂಗಿಯನ್ನು ದಿಂಬಿನ ಕೆಳಗೆ ಇಟ್ಟು ಬೆಳಗ್ಗೆ ಸ್ನಾನ ಮಾಡಿದ ನಂತರ ಆ ಮೂಲಂಗಿ ಶಿವಲಿಂಗದ ಮೇಲೆ ಇಡಬೇಕು. ಹೀಗೆ ಮಾಡುವುದರಿಂದ ನಿದ್ರಾಹೀನತೆಯ ಸಮಸ್ಯೆ ದೂರವಾಗುತ್ತದೆ. ಜೊತೆಗೆ ರಾಹುದೋಷವೂ ದೂರವಾಗುತ್ತದೆ.

ತಾಮ್ರದ ಪಾತ್ರೆ

ನಿದ್ರೆಯ ಸಮಸ್ಯೆಯನ್ನು ಹೋಗಲಾಡಿಸಲು ರಾತ್ರಿ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿಸಿಟ್ಟು ಮಲಗಬೇಕು. ಹೀಗೆ ಮಾಡುವುದರಿಂದ ಸೂರ್ಯನೂ ಬಲಶಾಲಿಯಾಗುತ್ತಾನೆ. ವೃತ್ತಿಯಲ್ಲಿ ಪ್ರಗತಿಯುಂಟಾಗುತ್ತದೆ. ಜೊತೆಗೆ ನಿದ್ರಾಹೀನತೆಯ ಸಮಸ್ಯೆಯೂ ದೂರವಾಗುತ್ತದೆ.

ಚಾಕು

ಮಲಗಿದಾಗ ದುಃಸ್ವಪ್ನಗಳನ್ನು ಬರುತ್ತಿದ್ದರೆ ಅಥವಾ ಆಘಾತದಿಂದ ಎಚ್ಚರಗೊಂಡರೆ ನಂತರ ನಿಮ್ಮ ದಿಂಬಿನ ಕೆಳಗೆ ಚಾಕು ಇಟ್ಟುಕೊಂಡು ರಾತ್ರಿ ಮಲಗಬಹುದು. ಹೀಗೆ ಮಾಡುವುದರಿಂದ ನಕಾರಾತ್ಮಕತೆ ದೂರವಾಗುತ್ತದೆ. ಇದರೊಂದಿಗೆ ಶನಿ, ರಾಹು, ಕೇತು ದೋಷಗಳಿಂದಲೂ ಪರಿಹಾರ ದೊರೆಯುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದು ಉದ್ಘಾಟನೆ ಆಗಿರುವ ಸ್ಮಾರಕದ ಕಾರ್ಯಕ್ರಮಕ್ಕೆ ಕನ್ನಡ ಸಿನಿಮಾ ರಂಗದ ಕೆಲವು ಗಣ್ಯರು ಶುಭ ಕೋರಿದ್ದಾರೆ.

Sun Jan 29 , 2023
ಮೈಸೂರು: ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ಲೋಕಾರ್ಪಣೆ ಆಗಿದೆ. ಸತತ 13 ವರ್ಷಗಳ ಹೋರಾಟದ ಫಲವಾಗಿ ಇಂದು ಉದ್ಘಾಟನೆ ಆಗಿರುವ ಸ್ಮಾರಕದ ಕಾರ್ಯಕ್ರಮಕ್ಕೆ ಕನ್ನಡ ಸಿನಿಮಾ ರಂಗದ ಕೆಲವು ಗಣ್ಯರು ಶುಭ ಕೋರಿದ್ದಾರೆ. ಇನ್ನು ಈ ಕುರಿತು ಸ್ಯಾಂಡಲ್​​ವುಡ್​​ ಹ್ಯಾಟ್ರಿಕ್​​ ಹೀರೋ ಶಿವರಾಜ್​​ ಕುಮಾರ್​ ತಮ್ಮ ಇನ್​​ಸ್ಟಾಗ್ರಾಮ್​​​ನಲ್ಲಿ ಡಾ.ವಿಷ್ಣುವರ್ಧನ್ ಅವರ ಜೊತೆ ಇರೋ ಫೋಟೋವನ್ನು ಶೇರ್​​ ಮಾಡಿ ಪೋಸ್ಟ್​​ವೊಂದು ಹಾಕಿದ್ದಾರೆ. ಜತೆಗೆ 13 ವರ್ಷಗಳ ಸುದೀರ್ಘ […]

Advertisement

Wordpress Social Share Plugin powered by Ultimatelysocial