ಆರೋಗ್ಯಇಲಾಖೆ ಸ್ಪಷ್ಟನೆ : ಜಾಗತಿಕ ತಾಪಮಾನದಿಂದ ಆರೋಗ್ಯ ಸಮಸ್ಯೆ ಹೆಚ್ಚಳ…!

ವಾಷಿಂಗ್ಟನ್‌: ಹವಾಮಾನ ಬದಲಾವಣೆಯಿಂದಾಗಿ ಆರೋಗ್ಯ ಸಮಸ್ಯೆಗಳು ತೀವ್ರಗೊಳ್ಳುತ್ತಿವೆ ಎಂದು ಬುಧವಾರ ಪ್ರಕಟವಾದ ಎರಡು ಅಧ್ಯಯನ ವರದಿಗಳಿಂದ ತಿಳಿದುಬಂದಿದೆ.

ವೈದ್ಯಕೀಯ ಜರ್ನಲ್‌ ಲ್ಯಾನ್ಸೆಟ್‌ ಪ್ರಕಟಿಸಿರುವ ವಾರ್ಷಿಕ ವರದಿಯಲ್ಲಿ ಜಾಗತಿಕ ತಾಪಮಾನ ಏರಿಕೆಯಿಂದ ಉಂಟಾಗಿರುವ 44 ಜಾಗತಿಕ ಆರೋಗ್ಯ ಸೂಚಕಗಳನ್ನು ಉಲ್ಲೇಖಿಸಿದೆ. ಇದರಲ್ಲಿ ತಾಪಮಾನ ಏರಿಕೆಯಿಂದ ಸಂಭವಿಸುವ ಸಾವು, ಸಾಂಕ್ರಾಮಿಕ ರೋಗಗಳು ಮತ್ತು ಹಸಿವಿನಂತಹ ಅಂಶಗಳು ಸೇರಿವೆ. ಈ ಎಲ್ಲವೂ ಕಠಿಣ ಸವಾಲುಗಳನ್ನು ಒಡ್ಡುತ್ತಿದೆ ಎಂದು ಲ್ಯಾನ್ಸೆಟ್ ಕೌಂಟ್‌ಡೌನ್ ಯೋಜನಾ ಸಂಶೋಧನಾ ನಿರ್ದೇಶಕಿ, ಜೀವರಸಾಯನ ಶಾಸ್ತ್ರಜ್ಞೆ ಮರೀನಾ ರೊಮೆನೆಲ್ಲೊ ಹೇಳಿದರು.

‘ಏರುತ್ತಿರುವ ತಾಪಮಾನವು ತೀವ್ರ ತರಹದ ಪರಿಣಾಮಗಳನ್ನು ಉಂಟು ಮಾಡುತ್ತಿದೆ’ ಎಂದು ಈ ಸಂಶೋಧನಾ ವರದಿಯ ಸಹ ಲೇಖಕರು ಹಾಗೂ ವಾಷಿಂಗ್ಟನ್‌ ವಿಶ್ವವಿದ್ಯಾನಿಲಯದ ಪರಿಸರ ಆರೋಗ್ಯ ಪ್ರಾಧ್ಯಾಪಕ ಕ್ರಿಸ್ಟಿ ಎಬಿ ಹೇಳಿದ್ದಾರೆ.

ಈ ವರ್ಷ ಪ್ರಕಟವಾಗಿರುವ ವರದಿಗಳಲ್ಲಿ, ಒಂದು ಜಾಗತಿಕ ಮಟ್ಟದ ಮಾಹಿತಿಯನ್ನು ನೀಡಿದರೆ, ಇನ್ನೊಂದು ಅಮೆರಿಕವನ್ನು ಆಧಾರವಾಗಿಟ್ಟುಕೊಂಡು ವರದಿ ಪ್ರಕಟಿಸಿದೆ. ಈ ವರದಿಗಳಲ್ಲಿ ‘ತೀವ್ರ ಅಪಾಯದಲ್ಲಿ ಭವಿಷ್ಯದ ಆರೋಗ್ಯ’ ಎಂದು ಉಲ್ಲೇಖಿಸಿದ್ದು, ಭವಿಷ್ಯದಲ್ಲಿ ಎದುರಾಗುವ ಅಪಾಯಗಳನ್ನು ಎತ್ತಿ ತೋರಿಸಿದೆ.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲಿಫ್ಟ್‌ ಗುಂಡಿಗೆ ಬಿದ್ದು ಮಗು ಸಾವು : ಆಗಿದಾದ್ರು ಏನು ಗೋತ್ತಾ...?

Thu Oct 21 , 2021
ದಾವಣಗೆರೆ: ಸರಸ್ವತಿ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಲಿಫ್ಟ್‌ನ ಗುಂಡಿಗೆ ಮಗು ಬಿದ್ದು ಮೃತಪಟ್ಟಿದೆ. ಎಲ್‌ಐಸಿ ಮ್ಯಾನೇಜರ್‌, ಸರಸ್ವತಿ ನಗರ ‘ಎ’ ಬ್ಲಾಕ್‌ನ ಪ್ರಕಾಶ್‌ ನಾಯಕ್‌ ಡಿ.- ವೀಣಾ ದಂಪತಿಯ ಮಗ ಮೋಹಿತ್‌ (6) ಮೃತಪಟ್ಟವನು. ಆಟವಾಡುತ್ತಾ ಹೊರಗೆ ಹೋಗಿದ್ದ ಮೋಹಿತ್‌ ನಾಪತ್ತೆಯಾಗಿದ್ದ. ಸ್ಥಳೀಯರೆಲ್ಲ ಸೇರಿ ಹುಡುಕಾಟ ನಡೆಸಿದ್ದರು. ಪಕ್ಕದಲ್ಲಿ ಅಮೃತ್‌ ನಾಯಕ್‌ ಎಂಬವರು ನಿರ್ಮಿಸುತ್ತಿದ್ದ ಮನೆಯ ಲಿಫ್ಟ್‌ನ ಗುಂಡಿಗೆ ಬಿದ್ದು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಲಿಫ್ಟ್‌ ಗುಂಡಿಗೆ ನೀರು […]

Advertisement

Wordpress Social Share Plugin powered by Ultimatelysocial