ಲಸಿಕೆ ನೀಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ನಂ.3 ಸ್ಥಾನ: ಸಚಿವ ಸುಧಾಕರ್‌

ಅಮೆರಿಕ, ಬ್ರೆಜಿಲ್‌, ಜಪಾನ್ಗಳಿಗಿಂತಲೂ ಹೆಚ್ಚಿನ ಜನರಿಗೆ ಕೋವಿಡ್ಲಸಿಕೆ ನೀಡಿರುವುದು ಭಾರತದ ಐತಿಹಾಸಿಕ ಸಾಧನೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವೇ ಕಾರಣ ಎಂದ ಆರೋಗ್ಯ ಸಚಿವ ಕೆ.ಸುಧಾಕರ್ಕೊರೋನಾ ಸಂಪೂರ್ಣ ಕಡಿಮೆಯಾಗಿದೆ ಎಂಬ ಉದಾಸೀನತೆ ಬೇಡಮೊದಲ ಡೋಸ್ಹಾಕಿಸಿಕೊಂಡು 2ನೆಯ ಡೋಸ್ಹಾಕಿಸಿಕೊಳ್ಳದವರು ಕೂಡಲೇ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು.

ನಗರದಲ್ಲಿ ಶುಕ್ರವಾರ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 100 ಕೋಟಿ ಲಸಿಕೆ ಸಾಧನೆ ವಿಚಾರ ಹಂಚಿಕೊಂಡ ಸಚಿವರು, ರಾಜ್ಯದಲ್ಲಿ ಶೇ.62ರಷ್ಟು ಜನರು ಎರಡನೆಯ ಡೋಸ್ಪಡೆಯಬೇಕಿದೆ. ಮೊದಲ ಡೋಸ್ಪಡೆದು, ಎರಡನೆಯ ಡೋಸ್ಪಡೆಯದೆ ಅವಧಿ ಮುಗಿದವರ ಸಂಖ್ಯೆ 53 ಲಕ್ಷ. ಇಂಥವರನ್ನು ಫೋನ್ಮೂಲಕ ಸಂಪರ್ಕಿಸಿ ಲಸಿಕೆ ಕೊಡಲಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಶೇ. 83ರಷ್ಟು ಮೊದಲ ಡೋಸ್‌, ಶೇ.38ರಷ್ಟು ಎರಡೂ ಡೋಸ್ಪಡೆದಿದ್ದಾರೆ. ದೇಶದಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. ಗುಜರಾತ್‌, ಮಧ್ಯಪ್ರದೇಶ ಮೊದಲರೆಡು ಸ್ಥಾನಗಳಲ್ಲಿವೆ. ಲಸಿಕೆ ವಿತರಣೆ ಆರಂಭಿಸಿದಾಗ ಕೆಲವರು ಒಡಕಿನ ಮಾತುಗಳನ್ನು ಆಡಿದರು. ರೀತಿ ಟೀಕೆ ಮಾಡಿದವರೇ ಕ್ಯೂನಲ್ಲಿ ನಿಂತು ಲಸಿಕೆ ಪಡೆದರು ಎಂದು ಕುಟುಕಿದರು. ಲಸಿಕಾಕರಣದಲ್ಲಿ ಶ್ರೀಮಂತಬಡವ, ಜಾತಿ, ಧರ್ಮ ಎಂಬ ಭೇದ ಭಾವ ಮಾಡದೇ ಪ್ರತಿಯೊಬ್ಬ ಪ್ರಜೆಗೂ ಲಸಿಕೆ ನೀಡಿದ್ದೇವೆ ಎಂದರು. ಡಿಸೆಂಬರ್ಅಂತ್ಯದೊಳಗೆ ಶೇ.90ರಷ್ಟು ಜನರಿಗೆ ಎರಡೂ ಡೋಸ್ಲಸಿಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಸದ್ಯ 60 ಲಕ್ಷ ಡೋಸ್ಲಸಿಕೆ ದಾಸ್ತಾನು ಇದೆ ಎಂದು ಸ್ಪಷ್ಟಪಡಿಸಿದರು.

ಹೊಸದಾಗಿ ಲಸಿಕೆ ಬಂದಾಗ ಅದು ಮೋದಿ ಲಸಿಕೆ ಎಂದು ಟೀಕೆ ಮಾಡುವ ಮೂಲಕ ಜನರಲ್ಲಿ ತಪ್ಪು ಕಲ್ಪನೆ ವಿರೋಧ ಪಕ್ಷಗಳು ಮೂಡಿಸಿದವು. ಅದರಲ್ಲೂ ಕಾಂಗ್ರೆಸ್ಜನರ ಹಾದಿ ತಪ್ಪಿಸುವ ಕೆಲಸ ಬಹಳ ಮಾಡಿತು. ಒಗ್ಗಟ್ಟಾಗಿ ಸಾಂಕ್ರಾಮಿಕ ರೋಗ ಎದುರಿಸಬೇಕಾದ ಸಂದರ್ಭದಲ್ಲಿ ಒಡಕಿನ ಮಾತುಗಳನ್ನಾಡಿದರು. ಹೀಗೆ ಟೀಕೆ ಮಾಡಿದವರೇ ಮಾರ್ಚ್ನಲ್ಲೇ ಕ್ಯೂ ನಿಂತುಕೊಂಡು ಲಸಿಕೆ ಪಡೆದರು ಎಂದು ಕುಟುಕಿದರು.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮಯ್ಯರನ್ನು ಅಫ್ಗಾನಿಸ್ತಾನಕ್ಕೆ ಕಳುಹಿಸಬೇಕು :ವಿ.ಶ್ರೀನಿವಾಸ ಪ್ರಸಾದ್

Sat Oct 23 , 2021
ತಾಲಿಬಾನ್‌ ಆಡಳಿತವನ್ನು ಪರಿಶೀಲಿಸಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಅಫ್ಗಾನಿಸ್ತಾನಕ್ಕೆ ಕಳುಹಿಸಿಕೊಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಹೇಳಿದರು.ನಗರದಲ್ಲಿ ನಡೆದ ವೆಂಕಟರಾಮು ಅಭಿನಂದನಾ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂದಗಿ, ಹಾನಗಲ್ ಉಪಚುನಾವಣೆ ಸಂಬಂಧ ವಿರೋಧ ಪಕ್ಷದವರು ಬಹಳ ಉದ್ವೇಗದಿಂದ, ವಿವೇಚನೆ ಕಳೆದುಕೊಂಡು ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ತಾಳ್ಮೆ ಕಳೆದುಕೊಂಡಿದ್ದಾರೆ. ಅವರು ರಾಷ್ಟ್ರಮಟ್ಟದ ರಾಜಕೀಯವನ್ನು ಅರ್ಥ ಮಾಡಿಕೊಂಡು ಮಾತನಾಡುತ್ತಿಲ್ಲ. ಅವರ ಭಾಷಣ ಕೇಳಿದ್ದೀರಾ? ಯಾರಾದರೂ ಸಹಿಸುತ್ತಾರೆಯೇ? […]

Advertisement

Wordpress Social Share Plugin powered by Ultimatelysocial