”ಬೆಳ್ಳುಳ್ಳಿ” ಸೇವನೆ ಹೃದಯ ರೋಗಕ್ಕೆ ರಾಮಬಾಣ: ಇನ್ನೂ ಅದರಿಂದ ಆಗುವ ಉಪಯೋಗಗಳೇನು ಗೊತ್ತಾ..?

ಪ್ರತಿ ಭಾರತೀಯ ಅಡುಗೆಮನೆಯಲ್ಲಿ ಬೆಳ್ಳುಳ್ಳಿ ಕಂಡುಬರುತ್ತದೆ. ಇದು ತರಕಾರಿ ರುಚಿಯನ್ನು ಹೆಚ್ಚಿಸುವುದಲ್ಲದೆ, ಕಚ್ಚಾ ತಿಂದ ನಂತರ ವೂ ನಿಮ್ಮ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆಯುರ್ವೇದದ ಪ್ರಕಾರ, ಬೆಳ್ಳುಳ್ಳಿ ನಿಮ್ಮ ರಕ್ತದೊತ್ತಡವನ್ನು ಕ ಡಿಮೆ ಮಾಡಲು, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು, ಹೃದಯದ ಆರೋಗ್ಯವನ್ನು ಸುಧಾರಿಸಲು ಮತ್ತು ಅನೇಕ ರೀತಿಯ ಕ್ಯಾನ್ಸ ರ್ ತಡೆಗಟ್ಟಲು ಸಹಾಯ ಮಾಡುತ್ತದೆಆಯುರ್ವೇದದ ಪ್ರಕಾರ, ಬೆಳ್ಳುಳ್ಳಿಯನ್ನು ಶತಮಾನಗಳಿಂದ ಔಷಧಿಯನ್ನಾಗಿ ಬಳಸಲಾಗುತ್ತದೆ.ಹಿತ್ತಲ ಗಿಡ ಮದ್ದಲ್ಲ ಎಂಬ ಗಾಧೆ ಮಾತು ಅಕ್ಷರಶಃ ಸತ್ಯ. ನಮ್ಮ ಹಿಂದಿನ ಪೀಳಿಗೆ ಮನೆಯಲ್ಲೆ ಸಿಗುವ ಆಹಾರ ಪದಾರ್ಥ ಸೇವನೆ, ಪಥ್ಯ ಅನುಕರಣೆಯಿಂದ ಸ್ವಾಸ್ಥ್ಯ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಆದರೆ ಅದರ ಮಹತ್ವ ತಿಳಿಯದ ನಮ್ಮ ಈಗಿನ ಪೀಳಿಗೆ ಇಂಗ್ಲಿಷ್ ಮೆಡಿಸನ್ ಗೆ ಮಾರು ಹೋಗಿದೆ. ಇಂಗ್ಲಿಷ್ ಮೆಡಿಸನ್ ನಲ್ಲಿ ನೋವು ಸೇರಿದಂತೆ ಹಲವು ರೋಗಗಳು ಶೀಘ್ರ ಗುಣಮುಖವಾಗಬಹುದು. ಆದರೆ ಅದರಿಂದ ಆಗುವ ಸೈಡ್ ಎಫೆಕ್ಟ್ ಅರಿವು ಅವರಿಗೆ ಇರುವುದಿಲ್ಲ.ಅಂದ ಹಾಗೆ ಬೆಳ್ಳುಳ್ಳಿ ಸೇವನೆ ಹೃದಯ ರೋಗಕ್ಕೆ ರಾಮಬಾಣ. ‘ಆರೋಗ್ಯವೇ ಭಾಗ್ಯ’ದಲ್ಲಿ ಬೆಳ್ಳುಳ್ಳಿ ಸೇವನೆಯಿಂದ ಆಗುವ ಉಪ ಯೋಗದ ಬಗ್ಗೆ ವಿವರವಾಗಿ ತಿಳಿಸುತ್ತೇವೆ. ಕೋಲೆಸ್ಟ್ರಾಲ್ ಎಂಬ ಹೆಚ್ಚು ಕೊಬ್ಬಿನ ಅಂಶವುಳ್ಳ ವಸ್ತು ರಕ್ತನಾಳದಲ್ಲಿ ಸೇರು ವುದರಿಂದ ಆಗುವ ‘ಆರ್ಟೇರಿಯೋಸ್ಕ್ಲೆ ರೇಸಸ್’ ನಿಂದ ಹೃದಯ ಬೇನೆ ಉಂಟಾಗುತ್ತದೆ. ಇದೊಂದು ಪ್ರಯೋಗದ ಫಲವಾಗಿ ಸ್ಥಿರಪಟ್ಟ ಸಂಗತಿ ಯಾಗಿರುತ್ತದೆ. ಬೆಳ್ಳುಳ್ಳಿ ಈ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ.ಈ ಪ್ರಯೋಗಗಳನ್ನು ಕೈಗೊಂಡ ಸಂಶೋಧಕರು, ಮೊಲಗಳಿಗೆ ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಅಂಶವುಳ್ಳ ಆಹಾರ ಪದಾರ್ಥಗ ಳ ನ್ನು 16 ವಾರಗಳ ಕಾಲ ತಿನ್ನಿಸಿದ್ದರು. ಅದರ ಪರಿಣಾಮವಾಗಿ ಆ ಪ್ರಾಣಿಯ ಮುಖ್ಯ ರಕ್ತನಾಳವಾದ ಮಹಾ ಅಪಧಮನಿಯಲ್ಲಿ ಕೊಲೆ ಸ್ಟ್ರಾಲ್ ಶೇಖರಣೆಯಾಯಿತು. ಆ ನಂತರ ಆ ಪ್ರಾಣಿಗಳಿಗೆ ಬೆಳ್ಳುಳ್ಳಿಯನ್ನು ತಿನ್ನಿಸಿದಾಗ ಕೊಬ್ಬಿನ ಅಂಶ ಕರಗಿ ಕೊಲೆಸ್ಟ್ರಾಲ್ ಕಡಿಮೆ ಆಯಿತು.ಹೀಗೆ ಹಲವು ರೀತಿಯ ಮನೆ ಮದ್ದಿನ ಮೂಲಕ ನಾವು ಸ್ವಾಸ್ಥ್ಯ ಆರೋಗ್ಯ ಕಾಪಾಡಿಕೊಳ್ಳಬಹುದು. ಇದರ ಪರಿಣಾಮ ವೈದ್ಯ ರಿಂದ ದೂರ ಕೂಡ ಇರಬಹುದು. ಜೊತೆಗೆ ಸೈಡ್ ಎಫೆಕ್ಟ್ ನಿಂದ ಮುಕ್ತವಾಗಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ನ್ಯಾಚುರಲ್' ಕ್ರೀಮ್ ಮನೆಯಲ್ಲೇ ಮಾಡಿ

Wed Feb 2 , 2022
  ಮನೆಯಲ್ಲೇ 100% ನ್ಯಾಚುರಲ್ ಆಗಿರುವ ಫೇರ್ ನೆಸ್ ಕ್ರೀಮ್ ಮಾಡಿ ಕೆಮಿಕಲ್ ಗಳಿಂದ ದೂರವಿರಬಹುದು. ಈ ಕ್ರೀಮ್ ಮಾಡುವುದನ್ನು ಕಲಿಯೋಣ.ಮೊದಲು ಈ ಕ್ರೀಮ್ ಗೆ ಬೀಸ್ ವ್ಯಾಕ್ಸ್ ಬಳಸಬೇಕು. ಇದು ಜೇನಿನ ಗೂಡಿನಿಂದ ತಯಾರಾಗಿರುತ್ತದೆ. ಇದನ್ನು ಎಲ್ಲಾ ರೀತಿಯ ಕ್ರೀಮ್, ಲಿಪ್ ಸ್ಟಿಕ್ ರೆಡಿ ಮಾಡಲು ಉಪಯೋಗಿಸುತ್ತಾರೆ.ಇದರಲ್ಲಿ ಯಾವುದೇ ಕೆಮಿಕಲ್ ಇರುವುದಿಲ್ಲ. ಇದು ನ್ಯಾಚುರಲ್ ವ್ಯಾಕ್ಸ್.ಮೊದಲು ಒಂದು ಟೇಬಲ್ ಸ್ಪೂನ್ ಬೀಸ್ ವ್ಯಾಕ್ಸ್ ಗೆ 2 ಟೇಬಲ್ ಸ್ಪೂನ್ […]

Advertisement

Wordpress Social Share Plugin powered by Ultimatelysocial