ನಟಿಯ ಜತೆ ಸೆಲ್ಫಿ ಕ್ಲಿಕ್ಕಿಸುವಾಗ ಮಹಿಳೆಗೆ ಕಾದಿತ್ತು ಶಾಕ್!

 

ನೆಚ್ಚಿನ ಸಿನಿಮಾ ಕಲಾವಿದರು ಎದುರಿಗೆ ಸಿಕ್ಕಾಗ ಅನೇಕ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುವುದು ಸರ್ವೆ ಸಾಮಾನ್ಯ. ಆದರೆ, ಹೊಸ ವಿಡಿಯೋವೊಂದು ವೈರಲ್​ ಆಗುತ್ತಿದ್ದು, ಸೆಲ್ಫಿ ತೆಗೆದುಕೊಳ್ಳುವಾಗಲೂ ತುಂಬಾ ಎಚ್ಚರಿಕೆ ವಹಿಸಬೇಕು ಎಂಬುದನ್ನು ಆ ವಿಡಿಯೋ ಹೇಳುತ್ತಿದೆ.ಹೌದು, ನಟಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವಾಗ ಅಭಿಮಾನಿಯೊಬ್ಬರ ಕೂದಲಿಗೆ ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದ್ದು, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಮಹಿಳಾ ಅಭಿಮಾನಿ ಪಾರಾಗಿದ್ದಾರೆ. ಮಹಿಳೆಯೊಬ್ಬರು ನಟಿ ನಿತ್ಯಾ ದಾಸ್​ ಜೊತೆ ಸೆಲ್ಫಿ ತೆಗೆದುಕೊಳ್ಳುವಾಗ ಈ ಘಟನೆ ನಡೆದಿದೆ.ಬ್ಯೂಟಿ ಪಾರ್ಲರ್​ ಉದ್ಘಾಟಿಸಲು ನಟಿ ನಿತ್ಯಾ ದಾಸ್​ ಅವರು ಕೋಯಿಕ್ಕೋಡ್​ನ ಕೊಡುವಲ್ಲಿ ಏರಿಯಾಗೆ ಬಂದಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ನಿತ್ಯಾ ಅವರೊಂದಿಗೆ ಮಹಿಳೆ ಸೆಲ್ಫಿ ತೆಗೆದುಕೊಳ್ಳುವಾಗ ಇದ್ದಕ್ಕಿದ್ದಂತೆ ಮಹಿಳೆಯ ಕೂದಲಿಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ನಟಿ ಅಲ್ಲಿಂದ ಓಡಿ ಹೋಗಿದ್ದಾರೆ. ಉಳಿದ ಮಹಿಳೆಯರು ಬೆಂಕಿಯನ್ನು ನಂದಿಸಿದರು. ಸ್ವಲ್ಪ ಎಚ್ಚರ ತಪ್ಪಿದ್ದರೂ ಬೆಂಕಿ ಹೆಚ್ಚಾಗಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ, ಅದೃಷ್ಟವಶಾತ್​ ಮಹಿಳೆಗೆ ಏನು ಆಗಿಲ್ಲ.ನಟ ಮಾಮುಕ್ಕೋಯ ಅವರೊಂದಿಗೆ ನಿತ್ಯಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಘಟನೆಗೆ ಸಂಬಂಧಿಸಿದ ವಿಡಿಯೋದಲ್ಲಿ ಜನರು ನಿತ್ಯಾ ಜೊತೆ ಮಾತನಾಡುವುದು ಮತ್ತು ಸೆಲ್ಫಿ ತೆಗೆದುಕೊಳ್ಳುವುದನ್ನು ಕಾಣಬಹುದು. ಈ ನಡುವೆ ನಟಿಯೊಂದಿಗೆ ಸೆಲ್ಫಿಗೆ ಪೋಸ್ ನೀಡುತ್ತಿದ್ದಾಗ ಹಿಂದೆ ಇದ್ದ ಮೇಣದ ಬತ್ತಿಯಿಂದ ಮಹಿಳೆಯ ಕೂದಲಿಗೆ ಬೆಂಕಿ ಹೊತ್ತಿಕೊಂಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಜನವರಿ 26 ರಂದು ನಡೆಯುವ ಗಣ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಕರ್ನಾಟಕದ ಸ್ತಬ್ದ ಚಿತ್ರ.

Sat Jan 7 , 2023
ಜನವರಿ 26 ರಂದು ನಡೆಯುವ ಗಣ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಕರ್ನಾಟಕದ ಸ್ತಬ್ದ ಚಿತ್ರ ಕಳಿಸಿ ಪ್ರದರ್ಶನ ಮಾಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಕರ್ನಾಟಕ ಸರ್ಕಾರವನ್ನು ಆಗ್ರಹಿಸಿತು,ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಕರ್ನಾಟಕದ ಕಲೆ,ಸಾಹಿತ್ಯ,ಇತಿಹಾಸ ತಿಳಿಸುವ ಸ್ಥಬ್ದ ಚಿತ್ರಗಳನ್ನು ಕನ್ನಡ ಸಂಸ್ಕೃತಿ ಇಲಾಖೆ ಸಚಿವರು,ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ರವರು ಕಳಿಹಿಸಿ ಇಡೀ ಪ್ರಪಂಚಕ್ಕೆ ನಮ್ಮ ಕರ್ನಾಟಕದ ಹಿರಿಮೆ ಎಲ್ಲರಿಗೂ ತಿಳಿಸಬೇಕಿದೆ ಎಂದರು. ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial