ಹೀರೋ ಎಕ್ಸ್‌ಟ್ರೀಂ 160ಆರ್‌ ಸ್ಟೆಲ್ತ್‌ ಬೈಕ್ ಬಿಡುಗಡೆ

ನವದೆಹಲಿ:ಹೀರೋ ಮೋಟಾರು ಸಂಸ್ಥೆಯು ತನ್ನ ಎಲ್ಲ ಮಾಡೆಲ್‌ ಗಳ ಅಪ್‌ ಡೇಟೆಡ್‌ ಎಡಿಷನ್‌ ಬಿಡುಗಡೆ ಮಾಡುತ್ತಿದ್ದು, ಇದೀಗ ಹೀರೋ ಎಕ್ಸ್‌ಟ್ರೀಂ 160ಆರ್‌ ಬೈಕಿನ ಸ್ಟೆಲ್ತ್‌ ಎಡಿಷನ್‌ ಅನ್ನು ಬಿಡುಗಡೆ ಮಾಡಿದೆ.

ಕಡಿಮೆ ತೂಕದ ಮತ್ತು ಹೆಚ್ಚು ವೇಗದ ಬೈಕ್‌ ಎನ್ನುವ ಕೀರ್ತಿ ಪಡೆದಿರುವ ಎಕ್ಸ್‌ಟ್ರೀಂ 160ಆರ್‌ ಬೈಕ್‌ ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದ್ದು, ಮ್ಯಾಟ್‌ ರೂಪದಲ್ಲಿ ಬಿಡುಗಡೆ ಮಾಡಲಾಗಿದೆ. ಬೈಕ್‌ ನಲ್ಲಿ ಹೊಸದಾಗಿ ಯುಎಸ್‌ಬಿ ಚಾರ್ಜರ್‌ ಅಳವಡಿಸಲಾಗಿದ್ದು, ಎಲ್‌ ಸಿಡಿ ಡಿಸ್ ಪ್ಲೇ ನಲ್ಲಿ 5 ಬ್ರೈಟ್‌ ನೆಸ್‌ ಆಯ್ಕೆಯನ್ನೂ ನೀಡಲಾಗಿದೆ. ಈ ಬೈಕಿನ ಬೆಲೆ 1.16 ಲಕ್ಷ ರೂಪಾಯಿ(ಎಕ್ಸ್‌ ಶೋ ರೂಂ).

ವಿಕ್ರಾಂತ್‌ ನಿರ್ಮಾಣದ ವೆಚ್ಚ ವ್ಯರ್ಥವಾಗದು
ದೇಶೀಯವಾಗಿ ನಿರ್ಮಿ ಸಲಾಗುತ್ತಿರುವ ಯುದ್ಧ ವಿಮಾನ ವಾಹಕ ನೌಕೆಗಾಗಿ (ಐಎಸಿ) ಖರ್ಚಾಗುತ್ತಿ ರುವ ಹಣ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಕರಮ್‌ಬೀರ್‌ ಸಿಂಗ್‌ ತಿಳಿಸಿದ್ದಾರೆ.

“ಐಎಸಿ ವಿಕ್ರಾಂತ್‌ ಎಂಬ ನೌಕೆಯನ್ನು ಶೇ. 76ರಷ್ಟು ದೇಶೀಯವಾಗಿಯೇ ನಿರ್ಮಿಸಲಾಗಿದೆ. ಆದರೆ, ಇದರ ನಿರ್ಮಾಣ ದುಬಾರಿ ಯಾಗಿದ್ದು, ಇದರ ನಿರ್ಮಾಣ ಅಗತ್ಯವಿತ್ತೇ’ ಎಂಬ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಮ್ ಬೀರ್ ಸಿಂಗ್ ಈ ಪ್ರತಿಕ್ರಿಯೆ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಗಗನಯಾತ್ರಿಗಳು : ಚೀನಾ

Sat Oct 16 , 2021
ಬೀಜಿಂಗ್‌: ಬಾಹ್ಯಾಕಾಶ ನೌಕೆ ‘ಶೆನ್‌ಶಾವ್‌-13’ನ ಯಶಸ್ವಿ ಉಡಾವಣೆಯ ಗಂಟೆಗಳ ನಂತರ ಮಹಿಳೆ ಸೇರಿ ಮೂವರು ಗಗನಯಾತ್ರಿಗಳು ಶನಿವಾರ ಬಾಹ್ಯಾಕಾಶ ನಿಲ್ದಾಣ ‘ಟಿಯಾನ್ಹೆ’ ಪ್ರವೇಶಿಸಿದ್ದಾರೆ ಎಂದು ಚೀನಾ ಬಾಹ್ಯಾಕಾಶ ಸಂಸ್ಥೆ ಹೇಳಿದೆ.astroಗಳಾದ ಝೈ ಜಿಗಾಂಗ್‌, ವಾಂಗ್‌ ಯಾಪಿಂಗ್‌ ಮತ್ತು ಯೆ ಗುವಾಂಗ್ಫು ಅವರು ನಿರ್ಮಾಣ ಹಂತದಲ್ಲಿರುವ ಬಾಹ್ಯಾಕಾಶ ನಿಲ್ದಾಣದ ರೇಡಿಯಲ್‌ ಪೋರ್ಟಲ್‌ ಅನ್ನು ಯಶಸ್ವಿಯಾಗಿ ಜೋಡಿಸಿದರು ಎಂದೂ ಸಂಸ್ಥೆ ಹೇಳಿದೆ. ಬಾಹ್ಯಾಕಾಶ ನಿಲ್ದಾಣದ ನಿರ್ಮಾಣವನ್ನು ಪೂರ್ಣಗೊಳಿಸಲು ಗಗನಯಾತ್ರಿಗಳು ಆರು ತಿಂಗಳ ಕಾಲ ಇಲ್ಲಿ […]

Advertisement

Wordpress Social Share Plugin powered by Ultimatelysocial