ಬಂದೇ ಬಿಡ್ತು ‘ಬೆಂಗಳೂರು ಬಾಯ್ಸ್’ ಫಸ್ಟ್ ಲುಕ್ ಟೀಸರ್…ಅಂತ..ರಣಧೀರ..ಓಂ ಸಿನಿಮಾ ನೆನಪಿಸಿದ ವಿ ಮೇಕರ್ಸ್!!

ಸಿನಿಮಾ ಮಾಡೋದೇ ಒಂದು ಕಲೆ. ಟೀಸರ್, ಟ್ರೇಲರ್ ಹಾಡುಗಳ ಮೂಲಕ ಸಿನಿಮಾದ ತಾಕತ್ತು ಏನು ಅನ್ನೋದನ್ನು ಸಾಬೀತು ಮಾಡುವುದು ಒಂದು ಜಾಣ್ಮೆ. ಅಂತಹ ಕಲೆಯನ್ನು ಬೆಂಗಳೂರು ಬಾಯ್ಸ್ ಸಿನಿಮಾ ಮೂಲಕ ವಿ ಮೇಕರ್ಸ್ ಪ್ರೋವ್ ಮಾಡಿದ್ದಾರೆ.

ಸ್ಪೆಷಲ್ ಆಗಿದೆ ಬೆಂಗಳೂರು ಬಾಯ್ಸ್ ಟೀಸರ್

ವಿ ಮೇಕರ್ಸ್ ಪ್ರಯತ್ನದಲ್ಲಿ ಮೂಡಿ ಬಂದಿರುವ ಬೆಂಗಳೂರು ಬಾಯ್ಸ್ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. 90ರ ದಶಕದ ಸೂಪರ್ ಹಿಟ್ ಸಿನಿಮಾಗಳದ ಅಂತ, ರಣಧೀರ, ಓಂ ಹಾಗೂ ಎ ಸಿನಿಮಾಗಳ ನಾಯಕರ ರೀತಿಯಲ್ಲಿ ಸಚಿನ್ ಚೆಲುವರಾಯ ಸ್ವಾಮಿ, ಅಭಿಷೇಕ್ ದಾಸ್, ರೋಹಿತ್ ಮಿಂಚಿದ್ದಾರೆ. ಇವರ ಜೊತೆ ವೈನಿಧಿ ಜಗದೀಶ್, ಸೋನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಬೆಂಗಳೂರು ಬಾಯ್ಸ್ ರೋಮ್ಯಾಂಟಿಕ್ ಕಾಮಿಡಿ ಎಂಟರ್ ಟೈನರ್ ಚಿತ್ರವಾಗಿದ್ದು, ಕಾಲೇಜು ಕಥೆ, ಲವ್ ಸ್ಟೋರಿ, ಎಮೋಷನ್-ಸೆಂಟಿಮೆಂಟ್ ಮಿಶ್ರಣದ ಹೂರಣವಾಗಿದ್ದು, ರ್ಯಾಪರ್ ಅಲೋಕ್ ಸಂಗೀತ ನಿರ್ದೇಶನ, ಧರ್ಮ ವಿಷ್ ಸಂಗೀತ ಸಂಯೋಜನೆ ಸಿನಿಮಾಕ್ಕಿದೆ. ವಿಕ್ರಮ್ ಕೆ ವೈ ಸಿನಿಮಾದ ಸಿನಿಮಾಗೆ ಬಂಡವಾಳ ಹೂಡಿದ್ದು, ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ಅಂಬಿ ನಿಂಗೆ ವಯಸ್ಸಾಯ್ತೋ ಖ್ಯಾತಿಯ ಗುರುದತ್ ಗಾಣಿಗ ಕ್ರಿಯೇಟಿವ್ ಡೈರೆಕ್ಟರ್ ಆಗಿ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡುವ ಮೂಲಕ ಪ್ರಮೋಷನ್ ಗೆ ಮುನ್ನುಡಿ ಬರೆದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶ್ರೀ ರಾಮನವಮಿಯಂದು ಬಿಡುಗಡೆಯಾಯಿತು "ಶೋಕಿವಾಲ" ನ ಟೀಸರ್!

Tue Apr 12 , 2022
ಕ್ರಿಸ್ಟಲ್ ಪಾರ್ಕ್ ಸಿನಿಮಾ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಹಾಗೂ ಕಿಶೋರ್ ಅವರು ನಿರ್ಮಿಸಿರುವ “ಶೋಕಿವಾಲ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಜಾಕಿ ನಿರ್ದೇಶನದಲ್ಲಿ ಅಜಯ್ ರಾವ್ ನಾಯಕರಾಗಿ ನಟಿಸಿರುವ ಈ ಚಿತ್ರದ ಟೀಸರ್ ಮಹಾಲಕ್ಷ್ಮಿ ಪುರದಲ್ಲಿರುವ ಅಣ್ಣವ್ರ ಪ್ರತಿಮೆ ಬಳಿ ಬಿಡುಗಡೆಯಾಗಿದೆ. ಅಪ್ಪು ಅವರ ಪ್ರತಿಮೆ ಕೂಡಯಿದ್ದು, ಇಬ್ಬರು ದಿಗ್ಗಜರ ಪ್ರತಿಮೆ ಮುಂದೆ “ಶೋಕಿವಾಲ” ಚಿತ್ರದ ಟೀಸರ್, ಶ್ರೀರಾಮನವಮಿಯ ಪುಣ್ಯದಿನದಂದು ಬಿಡುಗಡೆಯಾಗಿದ್ದು ವಿಶೇಷ. ನನ್ನ ಮೊದಲ ಸಿನಿಮಾದ ಟೀಸರ್ ರೀಲಿಸ್ ಅಗಿದೆ. ಎಲ್ಲಾ […]

Advertisement

Wordpress Social Share Plugin powered by Ultimatelysocial