ಹೈಕೋರ್ಟ್‌ ಸಾಲ ಮರುಪಾವತಿ ಮಾಡುವಂತೆ ಮಗನಿಗೆ ಆದೇಶಿಸಿದೆ.

ಬೆಂಗಳೂರು: ತಂದೆ ಮಾಡಿದ ಸಾಲಕ್ಕೆ ಶ್ಯೂರಿಟಿಯಾಗಿ ಒಂದೊಮ್ಮೆ ಮಗ ಚೆಕ್‌ ಕೊಟ್ಟಿದ್ದರೆ ಆ ಸಾಲಕ್ಕೆ ಆತನೇ ಬಾಧ್ಯಸ್ಥನಾಗಲಿದ್ದಾನೆ ಎಂದು ಹೇಳಿರುವ ಹೈಕೋರ್ಟ್‌ ಸಾಲ ಮರುಪಾವತಿ ಮಾಡುವಂತೆ ಮಗನಿಗೆ ಆದೇಶಿಸಿದೆ.

ಈ ವಿಚಾರವಾಗಿ ದಾವಣಗೆರೆಯ ಪ್ರಸಾದ್‌ ರಾಯ್ಕರ್‌ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.

ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.

ಈ ಪ್ರಕರಣದಲ್ಲಿ ಆರೋಪಿ, ಮೃತ ವ್ಯಕ್ತಿಯ ಮಗನಾಗಿದ್ದಾರೆ, ಮೃತ ತಂದೆ ದೂರುದಾರರಿಂದ ಸಾಲ ಪಡೆದಿದ್ದಾರೆ ಮತ್ತು ಮರುಪಾವತಿಸಲು ಒಪ್ಪಿ, ಅದಕ್ಕೆ ಖಾತ್ರಿಯಾಗಿ ಚೆಕ್‌ಗಳನ್ನು ನೀಡಿದ್ದಾರೆ. ತಂದೆಯ ಕಾನೂನುಬದ್ಧ ವಾರಸುದಾರರಾಗಿರುವ ಪುತ್ರ ಸಾಲದ ಹಣವನ್ನು ನೆಗೋಷಿಯಬಲ್‌ ಇನ್ಸುಟ್ರಾಮೆಂಟ್‌ ಕಾಯ್ದೆ ಪ್ರಕಾರ ಮರುಪಾವತಿ ಮಾಡಲೇಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ಅಲ್ಲದೆ, ನಿಯಮದಂತೆ ಸಾಲಕ್ಕೆ ಖಾತ್ರಿ ನೀಡಿರುವವರು (ಗ್ಯಾರಂಟರ್‌) ಹೇಗೆ ಬಾಧ್ಯಸ್ಥರಾಗುತ್ತಾರೋ ಅಂತೆಯೇ, ಚೆಕ್‌ ನೀಡಿದ ಪುತ್ರನೂ ಬಾಧ್ಯಸ್ಥನಾಗುತ್ತಾನೆ ಎಂದು ಹೇಳಿರುವ ನ್ಯಾಯಪೀಠ, ಹಣ ಮರುಪಾವತಿ ಮಾಡುವಂತೆ ದಾವಣಗೆರೆಯ ಜೆಎಂಎಫ್‌ಸಿ ಕೋರ್ಟ್‌ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊನೆಯ ಹಂತದ ಚಿತ್ರೀಕರಣದಲ್ಲಿ ‘ಧೀರ ಭಗತ್ ರಾಯ್’

Wed Jan 18 , 2023
ಕರ್ಣನ್.ಎಸ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಪೊಲಿಟಿಕಲ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಚಿತ್ರ ‘ಧೀರ ಭಗತ್ ರಾಯ್’. ರಾಜಕೀಯ ಅಧಿಕಾರಕ್ಕಾಗಿ ನಡೆಯುವ ಹೋರಾಟ ಕಥೆ ಒಳಗೊಂಡ ಈ ಚಿತ್ರದಲ್ಲಿ ರಂಗಭೂಮಿ ಪ್ರತಿಭೆ ರಾಕೇಶ್ ದಳವಾಯಿ ಮತ್ತು ನಾಯಕಿಯಾಗಿ ಸುಚರಿತಾ ಸಹಾಯರಾಜ್ ನಟಿಸುತ್ತಿದ್ದಾರೆ. ಟೀಸರ್ ಮೂಲಕ ಗಮನ ಸೆಳೆದ ಚಿತ್ರತಂಡ ಚಿತ್ರದ ಪ್ರಿ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಕೋರ್ಟ್ ಸೀನ್ ಸೆರೆ ಹಿಡಿಯಲಾಗುತ್ತಿದ್ದು, ಇದೇ ವೇಳೆ ಚಿತ್ರತಂಡ ಸಿನಿಮಾ ಬಗ್ಗೆ […]

Advertisement

Wordpress Social Share Plugin powered by Ultimatelysocial