ಹೈಕೋರ್ಟ್‌ ನೀಡುವ ತೀರ್ಪಿಗೆ ಎಲ್ಲರೂ ಬದ್ಧರಾಗಿರೋಣ ಎಂದು ಸಚಿವ ವಿ.ಸೋಮಣ್ಣ ಅವರು ಶುಕ್ರವಾರ ಹೇಳಿದರು.

ಚಾಮರಾಜನಗರ:ಹಿಜಾಬ್‌- ಕೇಸರಿ ಶಾಲು ವಿವಾದದಲ್ಲಿ ಹೈಕೋರ್ಟ್‌ ನೀಡುವ ತೀರ್ಪಿಗೆ ಎಲ್ಲರೂ ಬದ್ಧರಾಗಿರೋಣ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಶುಕ್ರವಾರ ಹೇಳಿದರು.ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಇದು ಅತ್ಯಂತ ಸೂಕ್ಷ್ಮ ವಿಚಾರ.ಹೈಕೋರ್ಟ್‌ನ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ಮಕ್ಕಳ ಭವಿಷ್ಯ ಮುಖ್ಯ. ಅವರ ಭವಿಷ್ಯಕ್ಕಿಂತ ಯಾವುದೂ ದೊಡ್ಡದಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಯಾರೂ ಮಾಡಬಾರದು’ ಎಂದರು.’ರಾಜ್ಯದಲ್ಲಿ ಉಂಟಾಗಿರುವ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳಬೇಕು. ಭವಿಷ್ಯದ ಭಾರತದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕಾಗುತ್ತದೆ. ಹಾಗಾಗಿ, ಎಲ್ಲರೂ ಹೈಕೋರ್ಟ್‌ ನೀಡಿರುವ ತೀರ್ಪಿಗೆ ಬದ್ಧರಾಗಿರೋಣ’ ಎಂದು ಹೇಳಿದರು.ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ದಿಂಬಂ ಘಾಟಿಯಲ್ಲಿ ರಾತ್ರಿ ಸಂಚಾರ ನಿಷೇಧ ಮಾಡಿರುವ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈ ನಿರ್ಧಾರದಿಂದ ರಾಜ್ಯದ ಅರಣ್ಯದ ಮೇಲೆ ಆಗುವ ಒತ್ತಡದ ಬಗ್ಗೆ ಮಾಹಿತಿ ತರಿಸಿಕೊಂಡಿದ್ದೇನೆ. ಮದ್ರಾಸ್‌ ಹೈಕೋರ್ಟ್‌ನ ಆದೇಶ ಅನುಷ್ಠಾನ ಹಾಗೂ ಸಾಧಕ ಬಾಧಕಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ’ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ROLLS ROYCE:ರೋಲ್ಸ್ ರಾಯ್ಸ್ ಸ್ಪಿರಿಟ್ ಆಫ್ ಎಕ್ಸ್ಟಸಿ ಮ್ಯಾಸ್ಕಾಟ್ 111 ವರ್ಷಗಳ ನಂತರ ಪಡೆಯುತ್ತದೆ;

Fri Feb 11 , 2022
ಬ್ರಿಟಿಷ್ ಐಷಾರಾಮಿ ಕಾರು ಬ್ರಾಂಡ್ ರೋಲ್ಸ್ ರಾಯ್ಸ್ ಮೂಲ ವಿನ್ಯಾಸದ ಪ್ರಾರಂಭದಿಂದ 111 ವರ್ಷಗಳ ನಂತರ ಅದರ ಐಕಾನಿಕ್ ಸ್ಪಿರಿಟ್ ಆಫ್ ಎಕ್ಸ್‌ಟಸಿ ಮ್ಯಾಸ್ಕಾಟ್‌ನ ಮರುವಿನ್ಯಾಸಗೊಳಿಸಲಾದ ಆವೃತ್ತಿಯನ್ನು ಬಹಿರಂಗಪಡಿಸಿದೆ. ಹೊಸ ಬ್ರ್ಯಾಂಡ್ ಮ್ಯಾಸ್ಕಾಟ್ ಅನ್ನು ಆಟೋ ಕಂಪನಿಯ ಮೊದಲ ಎಲೆಕ್ಟ್ರಿಕ್ ವಾಹನವಾದ ರೋಲ್ಸ್ ರಾಯ್ಸ್ ಸ್ಪೆಕ್ಟರ್‌ನಲ್ಲಿ ಮೊದಲು ಅಳವಡಿಸಲಾಗುವುದು, ಇದು ಕಂಪನಿಯು ಇನ್ನೂ ಉತ್ಪಾದಿಸಿದ ಅತ್ಯಂತ ಏರೋಡೈನಾಮಿಕ್ ಕಾರು. ರೋಲ್ಸ್ ರಾಯ್ಸ್ ಮರುವಿನ್ಯಾಸಗೊಳಿಸಲಾದ ಮ್ಯಾಸ್ಕಾಟ್ ಸ್ಪೆಕ್ಟರ್ನ ವಾಯುಬಲವೈಜ್ಞಾನಿಕ ದಕ್ಷತೆಗೆ ಅನುಗುಣವಾಗಿ […]

Advertisement

Wordpress Social Share Plugin powered by Ultimatelysocial