ಕರ್ನಾಟಕದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿ ಹಾಗೂ ಬೆಂಗಳೂರಿನ ನಡುವೆ ಹೈ ಸ್ಪೀಡ್ ರೈಲು

ಬೆಂಗಳೂರು, ಏಪ್ರಿಲ್‌ 25: ಕರ್ನಾಟಕದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿ ಹಾಗೂ ಬೆಂಗಳೂರಿನ ನಡುವೆ ಹೈ ಸ್ಪೀಡ್ ರೈಲು ಯೋಜನೆ ಜಾರಿಗೆ ಚಿಂತನೆ ನಡೆದಿದೆ. ರೈಲ್ವೆ ಇಲಾಖೆಯ ಈ ಚಿಂತನೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಪ್ರಸ್ತಾಪಿದ್ದು, ಹೈ ಸ್ಪೀಡ್ ರೈಲು ಓಡಿಸಲು (ಎಚ್‌ಎಸ್‌ಆರ್) ರೂಟ್ ಕಾರಿಡಾರ್ ನೀಡುವ ಮೂಲಕ ಪ್ರಸ್ತಾಪಿಸಿದೆ.

ಸದ್ಯ ಭಾರತೀಯ ವಿಜ್ಞಾನ ಸಂಸ್ಥೆಯು ರೈಲ್ವೆ ಇಲಾಖೆಗೆ ಪ್ರಸ್ತಾವಿತ ಹೈ ಸ್ಪೀಡ್ ರೈಲು (ಎಚ್‌ಎಸ್‌ಆರ್ ) ರೂಟ್ ಕಾರಿಡಾರ್ ಒದಗಿಸಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಪ್ರಕಾರ ಪ್ರಸ್ತಾವಿತ ರೂಟ್ ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ಯಶವಂತಪುರ ಈ ನಾಲ್ಕು ನಿಲ್ದಾಣಗಳೊಂದಿಗೆ ಪ್ರಸ್ತುತ ಹಾಗೂ ಪ್ರಸ್ತಾವಿತ ರೈಲು ಜಾಲದೊಂದಿಗೆ 400 ಕಿಲೋಮೀಟರ್ ದೂರ ಕ್ರಮಿಸಲು ಹೈ ಸ್ಪೀಡ್ ರೈಲು ಓಡಿಸಲು ಈ ಮಾರ್ಗವನ್ನು ತೆಗೆದುಕೊಳ್ಳಬಹುದು ಎಂದು ಹೇಳಿದೆ.

ಈ ಯೋಜನೆ ಜಾರಿಗೆ ಬಂದರೆ ಕರ್ನಾಟಕದಲ್ಲಿ ಮೊದಲ ಹೈ ಸ್ಪೀಡ್‌ ರೈಲು ಹುಬ್ಬಳ್ಳಿ ಹಾಗೂ ಬೆಂಗಳೂರಿನ ನಡುವೆ ಸಂಚರಿಸಲಿದೆ ಸದ್ಯ ರೂಟ್‌ ಕಾರಿಡಾರ್‌ಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿರುವ ಭಾರತೀಯ ವಿಜ್ಞಾನ ಸಂಸ್ಥೆಈಗಿರುವ ಕಾರಿಡಾರ್‌ಗಳಲ್ಲಿ ದಾವಣಗೆರೆ, ಚಿತ್ರದುರ್ಗ ತುಮಕೂರು ಹಾಗೂ ಯಶವಂತಪುರ ನಿಲ್ದಾಣಗಳು ಈ ಹೈ ಸ್ಪೀಡ್‌ ರೈಲಿನ ನಾಲ್ಕು ಪ್ರಮುಖ ನಿಲ್ದಾಣಗಳು ಆಗಲಿದ್ದು ಇನ್ನು ಕರ್ನಾಟಕದ ಎರಡನೇ ಬೃಹತ್‌ ನಗರವಾಗಿರುವ ಹುಬ್ಬಳ್ಳಿಯ ಜನತೆಗೆ ಹೈ ಸ್ಪೀಡ್‌ ರೈಲು ಸೇವೆ ಒದಗಿಸಲಿದ್ದು ಕೇವಲ 5 ಗಂಟೆಯಲ್ಲಿ ಬೆಂಗಳೂರು ತಲುಪುವ ಹಾಗೂ ಬೆಂಗಳೂರಿನಿಂದ ಹುಬ್ಬಳ್ಳಿಗೂ 5 ಗಂಟೆಯಲ್ಲಿ ರೈಲು ಪ್ರಯಾಣಿಕರನ್ನು ತಲುಪಿಸುವ ವೇಗದ ರೈಲು ಯೋಜನೆ ಇದಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಪುಣೆ-ಬೆಳಗಾವಿ ರೈಲನ್ನು ಹುಬ್ಬಳ್ಳಿ ತನಕ ವಿಸ್ತರಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದರು. ಬಳಿಕ ಆಗಿನ ರೈಲ್ವೆ ಖಾತೆ ರಾಜ್ಯ ಸಚಿವ ದಿ.ಸುರೇಶ್ ಅಂಗಡಿ ಅವರು ಮನವಿಗೆ ತಲೆದೂಗಿದರು ಮತ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಹುಬ್ಬಳ್ಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಹುಬ್ಬಳ್ಳಿ-ಪುಣೆ ರೈಲು ಪರಿಚಯಿಸಿದ ನಂತರ ಈಗ ಹೈ ಸ್ಪೀಡ್‌ ರೈಲು ಹುಬ್ಬಳ್ಳಿಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಕೇಂದ್ರ ಸರ್ಕಾರವು ದೇಶಾದ್ಯಂತ ಅನೇಕ ರೈಲು ನಿಲ್ದಾಣಗಳನ್ನು ನವೀಕರಿಸುತ್ತಿದೆ, ಸುಮಾರು 6,000 ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉಚಿತ ವೈಫೈ ಒದಗಿಸುತ್ತಿವೆ. ಸೇವೆಗಳು, ರೈಲು ಸಮಯ ಮತ್ತು ಹೆಚ್ಚಿನದನ್ನು ಸುಧಾರಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದು ರೈಲುಗಳು ಮತ್ತು ನಿಲ್ದಾಣಗಳನ್ನು ಸ್ವಚ್ಛವಾಗಿಡಲು ಜನರು ರೈಲ್ವೆಯೊಂದಿಗೆ ಸಹಕರಿಸಬೇಕು ಕೇಂದ್ರ ಸರ್ಕಾರವು ಸಾರ್ಜಜನಿಕರಿಗೆ ವಿನಂತಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ವಿರುದ್ಧದ ಅರ್ಜಿಗಳನ್ನು ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ!

Tue Apr 26 , 2022
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧದ ಮೇಲ್ಮನವಿಗಳನ್ನು ಶೀಘ್ರದಲ್ಲಿ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿಗೆ ನೀಡಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ಹಿರಿಯ ವಕೀಲ ಮೀನಾಕ್ಷಿ ಅರೋರಾ ಮಂಗಳವಾರ ಉಲ್ಲೇಖಿಸಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಎರಡು ದಿನ ಕಾಯುವಂತೆ ಕೇಳಿಕೊಂಡರು ಮತ್ತು […]

Advertisement

Wordpress Social Share Plugin powered by Ultimatelysocial