ರಾಜ್ಯದ ಎಲ್ಲ ಜಿಲ್ಲೆಗೂ ಹಬ್ಬಿದೆ ಹಿಜಾಬ್‌ ವಿವಾದ: ಕಾಲೇಜಿಗೆ ಬರುವ ಎಲ್ಲ ವಿದ್ಯಾರ್ಥಿಗಳ ಭುಜದ ಮೇಲೆ ಕೇಸರಿ ಶಾಲು.

ವಿಜಯಪುರ: ಕುಂದಾಪುರದ ಸರ್ಕಾರಿ ಕಾಲೇಜಿನಲ್ಲಿ ( Government College ) ಶುರುವಾದಂತ ಹಿಜಾಬ್ ವಿವಾದ ( Hijab Row ), ಈಗ ರಾಜ್ಯದ ಇತರೆ ಜಿಲ್ಲೆಗಳಿಗೂ ಹರಡುತ್ತಿದೆ. ಇಂದು ವಿಜಯಪುರದ ಕಾಲೇಜೊಂದರ ವಿದ್ಯಾರ್ಥಿಗಳೂ ಹಿಜಾಬ್ ವಿರೋಧಿಸಿ ಕೇಸರಿ ಶಾಲು ( Kesari Shalu ) ಧರಿಸಿ, ಕಾಲೇಜಿಗೆ ಬಂದಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿನ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಶಾಂತೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಇಂದು ಹಿಜಾಬ್ ವಿರೋಧಿಸಿ, ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ.

 

ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳನ್ನು ತರಗತಿಗೆ ಹಾಜರಾಗದಂತೆ ತಡೆದಂತ ಪ್ರಾಂಶುಪಾಲರು, ಉಪನ್ಯಾಸಕರು ಕೇಸರಿ ಶಾಲು ತೆಗೆದು ತರಗತಿಗೆ ಹಾಜರಾಗುವಂತೆ ಮನವೊಲಿಸಿದ್ದಾಗಿ ತಿಳಿದು ಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಟಾಟಾ ಏರ್‌ಲೈನ್ಸ್ ಹಾಗೂ 'ಏರ್ ಇಂಡಿಯಾ' ಹೆಸರು ಬಂದಿದ್ದು ಹೀಗೆ...

Mon Feb 7 , 2022
ನವದೆಹಲಿ: 75 ವರ್ಷಗಳಿಗೂ ಹಿಂದೆ ಟಾಟಾ ಸಮೂಹದ ನೌಕರರಿಂದ ಅಭಿಪ್ರಾಯ ಸಂಗ್ರಹಿಸಿ, ನಾಲ್ಕು ಹೆಸರುಗಳ ಪೈಕಿ ಒಂದನ್ನು ಅಂತಿಮಗೊಳಿಸಿ, ಆ ಹೆಸರನ್ನು ದೇಶದ ಮೊದಲ ವಿಮಾನಯಾನ ಕಂಪನಿಗೆ ಇರಿಸಲಾಯಿತು. ಆ ಹೆಸರು ‘ಏರ್ ಇಂಡಿಯಾ’.   ಏರ್ ಇಂಡಿಯಾ ಕಂಪನಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿರುವ ಟಾಟಾ ಸಮೂಹವು, ಈ ವಿಮಾನಯಾನ ಕಂಪನಿಗೆ ಸಂಬಂಧಿಸಿದ ಕೆಲವು ವಿವರಗಳನ್ನು ಹಂಚಿಕೊಂಡಿದೆ. 1946ರಲ್ಲಿ ಟಾಟಾ ಏರ್‌ಲೈನ್ಸ್, ಟಾಟಾ ಸನ್ಸ್‌ನ ಒಂದು ವಿಭಾಗವಾಗಿ ಇದ್ದುದು ಒಂದು ಪ್ರತ್ಯೇಕ ಕಂಪನಿಯಾಯಿತು. […]

Advertisement

Wordpress Social Share Plugin powered by Ultimatelysocial