ಹಿಜಾಬ್‌ ವಿವಾದ: ಉಡುಪಿಯ ವಿದ್ಯಾರ್ಥಿನಿಯಿಂದ ಹೈಕೋರ್ಟ್ ನಲ್ಲಿ ಅರ್ಜಿ

ಬೆಂಗಳೂರು, ಜ 31 ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾದ ಇದೀಗ ಹೈಕೋರ್ಟ್‌ ಅಂಗಳ ತಲುಪಿಸಿದೆ. ಉಡುಪಿ ಸರ್ಕಾರಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಹೈಕೋಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿ ಇನ್ನು ಕೆಲವೇ ದಿನಗಳಲ್ಲಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದೆ. ಆಕೆ ಸಂವಿಧಾನದ ಕಲಂ 14 ಮತ್ತು 25 ಅನ್ವಯ ತಮಗಿರುವ ಧಾರ್ಮಿಕ ಸ್ವಾತಂತ್ರದಡಿ ಹಿಜಾಬ್‌ ಧರಿಸುತ್ತಿದ್ದೇವೆ.ಆದನ್ನು ನಿರ್ಬಂಧಿಸುವ ಮೂಟಕುಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ. “ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಹಿಜಾಬ್‌ ಧರಿಸಲಾಗುತ್ತಿದೆ ಎಂಬ ಒಂದೇ ಕಾರಣಕ್ಕೆ ಮುಸ್ಲಿಂ ಹೆಣ್ಣು ಮಕ್ಕಳಿಗೆ ಕಾಲೇಜಿನ ಪ್ರವೇಶಕ್ಕೆ ಅವಕಾಶನೀಡುತ್ತಿಲ್ಲ. 2021ರ ಡಿ.28ರಂದು ಮುಸ್ಲಿಂ ಧರ್ಮದ ಹೆಣ್ಣು ಮಕ್ಕಳಿಗೆ ಕಾಲೇಜುಪ್ರವೇಶ ನಿರ್ಬಂಧಿಸಲಾಗಿದೆ, ಅವರಿಗೆ ತರಗತಿಗಳಿಗೆ ಹಾಜರಾಗಲು ಅವಕಾಶ ನೇಡಿಲ್ಲ, ಎಂದು ಅರ್ಜಿದಾರರು ದೂರಿದ್ದಾರೆ, ಅಲ್ಲದೆ, ಶಿಕ್ಷಣ ಸಂಸ್ಥೆಗಳು ಹಿಜಾಬ್‌ ಧಾರಣೆಯನ್ನು ನಿರ್ಬಂಧಿಸುವಂತಿಲ್ಲ ವೆಂದು ಕೋರ್ಟ್‌ ಆದೇಶ ನೀಡಬೇಕೆಂದು ವಿದ್ಯಾರ್ಥಿನಿ ಕೋರಿದ್ದಾರೆ. ಹಿಂದೂ ರಿಲಿಜಿಯಸ್‌ ಎಂಡೋಮೆಂಟ್‌ ಮದ್ರಾಸ್‌ ವರ್ಸಸ್‌ ಶ್ರೀ ಲಕ್ಷ್ಮಿಂದ್ರ ತೀರ್ಥ ಸ್ವಾಮಿಯಾರ್‌ ಪ್ರಕರಣದಲ್ಲಿ ಸುಪ್ರೀಂಕೋಟ್‌, ಸಂವಿಶಾನದಲ್ಲಿರುವ ಧಾರ್ಮಿಕ ಸ್ಪಾತಂತ್ರ್ಯದ ಹಕ್ಕು ಕೇವಲ ನಂಬಿಕೆಗಳಿಗೆ ಅಲ್ಲ ಆಚರಣೆಗಳಿಗೂ ಅನ್ವಯಸುತ್ತವೆ, ಎಂದು ಸ್ಪಷ್ಟವಾಗಿ ಹೇಳಿದೆ. ಹಾಗಾಗಿ ಸರಕಾರದ ಕ್ರಮ ಸಂವಿಧಾನದ ಕಲಂ 25 ಮತ್ತು 26ರ ಸ್ಪಷ್ಟ ಉಲ್ಪಂಘನೆಯಾಗಿದೆ. ಆದ್ದರಿಂದ ಸರಕಾರಕ್ಕೆ ಸೂಕ್ತ ನಿದೇರ್ಶನ ನೀಡಬೇಕೆಂದು. ವಿದ್ಯಾರ್ಥಿನಿ ಕೋರಿದ್ದಾಳೆ. ಪವಿತ್ರ ಖುರಾನ್‌ ನಲ್ಲಿ ಮುಸ್ಲಿಂ ಧರಿಸಿದವರಿಗೆ ಕಾಲೇಜಿಗೆ ಪ್ರವೇಶ ನಿರಾಕರಣೆ ಮೂಲಕ ಮೂಲಭೂತ ಹಕ್ಕು ಉಲ್ಲಂಘಸಿಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಯಚೂರು : ಡಾ. ಹೆಚ್.ನರಸಿಂಹಯ್ಯ 17 ನೇ ಪುಣ್ಯಸ್ಮರಣೆ.

Tue Feb 1 , 2022
  ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ಶ್ರೀ ವಿಜಯ ಮಹಾಂತೇಶ ಮಠದಲ್ಲಿ ಡಾ. ಹೆಚ್.ನರಸಿಂಹಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ 17 ನೇ ಪುಣ್ಯಸ್ಮರಣೆ. ಆಚರಣೆ ಮಾಡಿದರು.ಹೆಸರಾಂತ ಡಾ. ಹೆಚ್.ನರಸಿಂಹಯ್ಯ ಭೌತಶಾಸ್ತ್ರಜ್ಞರೂ, ಶಿಕ್ಷಣತಜ್ಞರೂಆಗಿದ್ದರು. ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂದೆ ಅಮೇರಿಕ ದೇಶದಲ್ಲಿನ ಓಹಿಯೋ ವಿಶ್ವವಿದ್ಯಾಲಯದಲ್ಲಿ ಪರಮಾಣು ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ನ್ಯಾಷನಲ್ ಕಾಲೇಜು, ಬೆಂಗಳೂರಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇರಿಕೊಂಡ ಇವರು, ತದನಂತರ […]

Advertisement

Wordpress Social Share Plugin powered by Ultimatelysocial