ಹಿಂದೂಗಳು ಯಾರ ವಿರೋಧಿಯೂ ಅಲ್ಲ, ಯಾರನ್ನೂ ದ್ವೇಷಿಸುವುದಿಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

 

ಹಿಂದೂಗಳು ಯಾರ ವಿರೋಧಿಯೂ ಅಲ್ಲ, ಯಾರನ್ನೂ ದ್ವೇಷಿಸುವುದಿಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.ಶತಮಾನದಿಂದ ವಿಶ್ವದಾದ್ಯಂತ ಹಿಂದೂಗಳನ್ನು ನಾಶ ಮಾಡಲು ಪ್ರಯತ್ನಿಸಿದವರು ತಮ್ಮಲ್ಲೇ ಜಗಳವಾಡುತ್ತಿದ್ದಾರೆ, ನಮ್ಮನ್ನು ನಾಶ ಮಾಡುವ ಪ್ರಯತ್ನ ಮಾಡಿದ್ದಾಯಿತು.ಆದರೆ ಅದರಲ್ಲಿ ಗೆಲುವು ಸಿಕ್ಕಿಲ್ಲ.ಇಂದಿಗೂ ಭಾರತದ ಸನಾತನ ಧಾರ್ಮಿಕ ಜೀವನವನ್ನು ಯಥಾಸ್ಥಿತಿಯಲ್ಲಿ ಕಾಣಬಹುದು. ಇಷ್ಟೆಲ್ಲಾ ದೌರ್ಜನ್ಯಗಳ ನಡುವೆಯೂ ನಮ್ಮಲ್ಲಿ ಮಂತ್ರ ಭೂಮಿ ಇದೆ.ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳು ಇರುವಾಗ ಏಕೆ ಭಯಪಡಬೇಕು. ಜೀವನದ ಬಗೆಗಿನ ನಮ್ಮ ಸಮಗ್ರ ಸೃಷ್ಟಿಕೋನವನ್ನು ಮರೆತಿರುವುದು ದೌರ್ಬಲ್ಯಕ್ಕೆ ಕಾರಣವಾಗಿದೆ ಎಂದರು.ಹಿಂದೂ ಧರ್ಮ ಶತಮಾನಗಳಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದ್ದು, ಪ್ರಗತಿ ಸಾಧಿಸಿದೆ ಎಂದು ಹೇಳಿದರು.ಜಾತಿ, ಧರ್ಮ, ಭಾಷೆಗಿಂತಲೂ ಮಿಗಿಲಾಗಿ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡಬೇಕು, ಹಿಂದೂ ಹಿತ ಅಂದರೆ ರಾಷ್ಟ್ರಹಿತ, ಈ ಮೂಲಕ ಬಲಿಷ್ಠ ಹಾಗೂ ಸಮರ್ಥ ರಾಷ್ಟ್ರವಾಗಲು ಸಾಧ್ಯ ಎಂದು ಹೇಳಿದ್ದಾರೆ.ದೌರ್ಜನ್ಯ ಹಾಗೂ ದಾಳಿಗೆ ಒಳಗಾಗಿರುವ ಹೊರತಾಗಿಯೂ ಹಿಂದೂಗಳು ಶೇ.80ರಷ್ಟು ಇದ್ದೇವೆ, ದೇಶದಲ್ಲಿ ಆಡಳಿತ, ರಾಜಕೀಯ ನಡೆಸುತ್ತಿರುವವರಲ್ಲಿ ಹೆಚ್ಚಿನವರು ಹಿಂದೂಗಳು. ಇಂದಿಗೂ ದೇಶದಲ್ಲಿ ದೇವಸ್ಥಾನಗಳನ್ನು ನಿರ್ಮಿಸಲಾಗುತ್ತದೆ. ನಮ್ಮ ಸಂಪ್ರದಾಯಗಳು ನಮಗೆ ಕಲಿಸಿದ್ದು ಶಾಶ್ವತವಾಗಿದೆ ಎಂದರು.ಕೆಲವು ದಿನಗಳ ಹಿಂದೆ ಧರ್ಮ ಸಂಸತ್‌ ಕುರಿತು ಮಾತನಾಡಿದ್ದ ಅವರು, ‘ಧರ್ಮ ಸಂಸತ್’ನಲ್ಲಿ ಹೇಳಿದ್ದಾರೆ ಎನ್ನಲಾದ ಹಿಂದುತ್ವದ ಮಾತುಗಳನ್ನು ಒಪ್ಪುವುದಿಲ್ಲ.’ಧರ್ಮ ಸಂಸತ್’ನಲ್ಲಿ ನೀಡಿರುವ ಹೇಳಿಕೆಗಳು ಹಿಂದೂಗಳ ಮಾತುಗಳಲ್ಲ ಮತ್ತು ಹಿಂದುತ್ವವನ್ನು ಅನುಸರಿಸುವ ಜನರು ಅದನ್ನು ಎಂದಿಗೂ ಒಪ್ಪುವುದಿಲ್ಲ ಎಂದು ಹೇಳಿದ್ದರು.ಮಾಧ್ಯಮ ಸಮೂಹ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಹಿಂದುತ್ವ ಮತ್ತು ರಾಷ್ಟ್ರೀಯ ಏಕೀಕರಣ’ ವಿಷಯದ ಕುರಿತು ಮಾತನಾಡುತ್ತಾ ಅವರು, ನಾನು ಕೋಪದಲ್ಲಿ ಏನಾದರೂ ಹೇಳಿದರೆ ಅದು ಹಿಂದುತ್ವವಲ್ಲ ಎಂದಿದ್ದಾರೆ.ಧರ್ಮ ಸಂಸತ್ತಿನಲ್ಲಿ ನೀಡಿರುವ ಹೇಳಿಕೆಗಳು ಹಿಂದೂಗಳ ಮಾತುಗಳಲ್ಲ. ನಾನು ಕೋಪದಿಂದ ಏನಾದರೂ ಹೇಳಿದರೆ ಅದು ಹಿಂದುತ್ವವಲ್ಲ. ಇನ್ನು ವೀರ ಸಾವರ್ಕರ್ ಕೂಡ ಹಿಂದೂ ಸಮಾಜ ಒಗ್ಗಟ್ಟಾದರೆ ಭಗವದ್ಗೀತೆಯ ಬಗ್ಗೆ ಮಾತನಾಡುತ್ತೇನೆಯೇ ಹೊರತು ಯಾರನ್ನೂ ಹಾಳು ಮಾಡುವ ಅಥವಾ ಹಾನಿ ಮಾಡುವ ಬಗ್ಗೆ ಅಲ್ಲ ಎಂದು ಹೇಳಿದ್ದರು ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದ್ದಾರೆ.ದೇಶವು ‘ಹಿಂದೂ ರಾಷ್ಟ್ರ’ವಾಗುವ ಹಾದಿಯನ್ನು ಅನುಸರಿಸುತ್ತಿರುವ ಬಗ್ಗೆ ಮಾತನಾಡಿದ ಅವರು, ನಂಬಿ ಅಥವಾ ಬಿಡಿ, ಇದು ಹಿಂದೂ ರಾಷ್ಟ್ರ. ಸಂಘವು ಜನರನ್ನು ವಿಭಜಿಸುವುದಿಲ್ಲ. ಆದರೆ ಭಿನ್ನಾಭಿಪ್ರಾಯಗಳನ್ನು ಪರಿಹರಿಸುತ್ತದೆ ಎಂದಿದ್ದಾರೆ.ಕಳೆದ ವರ್ಷ ಡಿಸೆಂಬರ್‌ನಲ್ಲಿ ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ಮುಸ್ಲಿಮರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿತ್ತು ಮತ್ತು ರಾಯ್‌ಪುರದಲ್ಲಿ ಮಹಾತ್ಮ ಗಾಂಧಿಯವರ ಬಗ್ಗೆ ಅಸಭ್ಯ ಹೇಳಿಕೆ ನೀಡಲಾಗಿತ್ತು ಇದಕ್ಕೆ ಮೋಹನ್ ಭಾಗವತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗುರುವಾರ ಬೆಳಗ್ಗೆ 8 ಗಂಟೆಯ ಹೊತ್ತಿಗೆ ದೇಶದಲ್ಲಿ 67,084 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು!

Thu Feb 10 , 2022
ನವದೆಹಲಿ:ಭಾರತದಲ್ಲಿ ಮಹಾಮಾರಿ ಕೊರೋನಾ ಸೋಂಕಿನ ಅಬ್ಬರ ಮತ್ತಷ್ಟು ಕಡಿಮೆಯಾಗುತ್ತಿದೆ. ಗುರುವಾರ ಬೆಳಗ್ಗೆ 8 ಗಂಟೆಯ ಹೊತ್ತಿಗೆ ದೇಶದಲ್ಲಿ 67,084 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಇದೇ ಅವಧಿಯಲ್ಲಿ 1,241 ಸಾವು ಸಂಭವಿಸಿದೆ.ಈ ಮೂಲಕ ದೇಶದಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 5,06,520 ಆಗಿದೆ.ದೇಶದಲ್ಲಿ 67,084 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4,24,10,976ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 5,06,520ಕ್ಕೆ ತಲುಪಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7,90,789 […]

Advertisement

Wordpress Social Share Plugin powered by Ultimatelysocial